ಗಂಗಾವತಿ: ತಾಲೂಕಿನ ಆನೆಗೊಂದಿ ಬೈಪಾಸ್ ರಸ್ತೆಯ ಹೋಲಿ ಹಾರ್ಟ್ ಶಾಲೆಯ ಹತ್ತಿರ ಚಿರತೆ ಮರಿಯೊಂದು ಬೆಳಗ್ಗೆ ಪ್ರತ್ಯಕ್ಷವಾಗಿದ್ದು ಜನರು ಭಯಭೀತರಾಗಿದ್ದಾರೆ. ಚಿರತೆ ಮರಿಯನ್ನು ಕಂಡ ನಾಯಿಗಳು ಬೊಗಳುತ್ತ ಓಡಾಡಿವೆ. ಇದನ್ನು ಕಂಡ ಸ್ಥಳೀಯರು ಮೊಬೈಲ್ ನಲ್ಲಿ ಚಿರತೆ ಮರಿ ಬೆಟ್ಟದ ಕಡೆ ಓಡಿ ಹೋಗುವುದನ್ನು ಸೆರೆ ಹಿಡಿದಿದ್ದಾರೆ.
ಆನೆಗೊಂದಿ ಆದಿಶಕ್ತಿ ದೇಗುಲದ ಸುತ್ತ ನಿತ್ಯವೂ ಚಿರತೆಗಳು ಪ್ರತ್ಯಕ್ಷವಾಗುತ್ತಿವೆ. ಆದಿಶಕ್ತಿ ದೇಗುಲ ಮತ್ತು ಅಂಜನಾದ್ರಿ ಬೆಟ್ಟ ಪ್ರದೇಶಕ್ಕೆ ಜನರ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧಿಸಿದ್ದು ಅರಣ್ಯ ಇಲಾಖೆ ಅಲ್ಲಲ್ಲಿ ಚಿರತೆಗಳನ್ನು ಸೆರೆ ಹಿಡಿಯಲು ಬೋನ್ ಗಳನ್ನು ಇರಿಸಿದ್ದು ಇದುವರೆಗೂ ಒಂದು 4 ವರ್ಷದ ಚಿರತೆ ಮರಿಯನ್ನು ಬೋನ್ ಮೂಲಕ ಸೆರೆ ಹಿಡಿದಿದ್ದಾರೆ.
ಗೋಶಾಲೆಗೆ ಸಂಕಷ್ಟ: ಆದಿಶಕ್ತಿ ದೇಗುಲದ ಸುತ್ತ ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದು ಗೋಶಾಲೆಯ ದನಗಳನ್ನು ಹೊರಗಡೆ ಮೇಯಲು ಬಿಡದ ಸ್ಥಿತಿಯುಂಟಾಗಿದೆ. ಗೋಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಆನೆಗೊಂದಿ ಯುವಕನನ್ನು ಚಿರತೆ ಕೊಂದು ಹಾಕಿದ್ದು ಒಂದು ಆಕಳನ್ನು ಸಹ ತಿಂದು ಹಾಕಿದ ನಂತರ ಗೋಶಾಲೆಯಲ್ಲಿ ಕೆಲಸ ಮಾಡಲು ಯಾರು ಬರುತ್ತಿಲ್ಲ. 400ಕ್ಕೂ ಅಧಿಕ ಆಕಳು ಕರುಗಳು ಗೋ ಶಾಲೆಯಲ್ಲಿದ್ದು ಇವುಗಳನ್ನು ನೋಡಿಕೊಳ್ಳಲು ಮತ್ತು ಇವುಗಳಿಗೆ ಮೇವು ಒದಗಿಸಲು ಕಷ್ಟವಾಗುತ್ತಿದೆ.
ಇದನ್ನೂ ಓದಿ:ಬೂದಿ ಮುಚ್ಚಿದ ಕೆಂಡದಂತಿರುವ ಶಿವಮೊಗ್ಗ ನಗರ: ಅಂಗಡಿ ಮುಂಗಟ್ಟುಗಳು ಬಂದ್, ಪೊಲೀಸ್ ಬಂದೋಬಸ್ತ್
ಜಿಲ್ಲಾಡಳಿತ ಕೂಡಲೇ ಚಿರತೆಗಳನ್ನು ಸೆರೆ ಹಿಡಿಯಲು ವೈಜ್ಞಾನಿಕ ಪದ್ದತಿ ಮೂಲಕ ಯತ್ನಿಸುವಂತೆ ಆನೆಗೊಂದಿ ರಾಜವಂಶಸ್ಥ ಹರಿಹರದೇವರಾಯಲು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.