Advertisement

ಗೋವನಕೊಪ್ಪದಲ್ಲಿ ಮುಂದುವರಿದ ಚಿರತೆ ಕಾರ್ಯಾಚರಣೆ

05:04 PM Sep 24, 2021 | Team Udayavani |

ಧಾರವಾಡ: ಗುರುವಾರ ರಾತ್ರಿ ಕಾರ್ಯಾಚರಣೆಯಲ್ಲಿ ತಪ್ಪಿಸಿಕೊಂಡು ಓಡಿ ಹೋಗಿದ್ದ ಚಿರತೆಯು ಇಂದು ಬೆಳಿಗ್ಗೆ ಕವಲಗೇರಿ ಗ್ರಾಮಕ್ಕೆ ಗಡಿ ಹೊಂದಿ ಕೊಂಡಿರುವ ಗೋವನಕೊಪ್ಪ ಗ್ರಾಮ ಪಕ್ಕದ ಸರ್ವೇ ಜಮೀನದಲ್ಲಿರುವ ಬಾಳೆ, ಮಾವೀನ ತೋಟ ಮತ್ತು ಕಬ್ಬಿನ ಗದ್ದೆ ಮಧ್ಯದಲ್ಲಿ ಗೋವನಕೋಪ್ಪ ಗ್ರಾಮಸ್ಥರಿಗೆ ಚಿರತೆ ಕಂಡು ಬಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು ಈ ಪ್ರದೇಶ ಸುತ್ತುವರೆದು ಚಿರತೆ ಬೇರೆಡೆ ಹೋಗದಂತೆ ಕಾವಲು ಕಾಯುತ್ತಿದ್ದಾರೆ.

Advertisement

ಅರಣ್ಯ ಅಧಿಕಾರಿಗಳು, ಅರವಳಿಕೆ ತಜ್ಞರು ಚಿರತೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಗೋವನಕೊಪ್ಪ ಗ್ರಾಮದ ರಿ.ಸ.ನಂ.145  ನ ಜಮೀನು, ಹುಬ್ಬಳ್ಳಿ ಬಸವರಾಜ ಫಕ್ಕೀರಪ್ಪ ರವರ ಬಾಳೆ ತೋಟದಲ್ಲಿ ಚಿರತೆ ಹೋಗಿದೆ ಎಂದು ಗೋವನಕೊಪ್ಪ ಗ್ರಾಮದ ಖಾಯಂ ರಹವಾಸಿಯಾದ ಬಸಮ್ಮ ಮಾದರ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ತಿಳಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲಿದಲ್ಲಿ ಹಾಜರಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next