Advertisement

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

10:27 AM Nov 26, 2024 | Team Udayavani |

ನೆಲಮಂಗಲ: ತಾಲೂಕಿನ ಕಂಬಾಳು ಗೊಲ್ಲರಹಟ್ಟಿ ಹಾಗೂ ಅಕ್ಕಪಕ್ಕದ ಗ್ರಾಮಗಳ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಕ್ಯಾಮೆರಾ ಕಣ್ಣಿಗೆ ಬೀಳದೆ ನೇರವಾಗಿ ಬೋನಿಗೆ ಬಿದ್ದಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ನಂತರ ನ.17ರಂದು ಗೊಲ್ಲರಹಟ್ಟಿ ಕರಿಯಮ್ಮಳನ್ನು ಬಲಿಪಡೆದುಕೊಂಡ ನರಭಕ್ಷಕ ಚಿರತೆ ಇದೇನಾ ಎಂಬುದನ್ನು ನಿಖರವಾಗಿ ತಿಳಿಯಬಹುದಾಗಿದೆ.

Advertisement

ತಾಲೂಕಿನಲ್ಲಿರುವ ದಕ್ಷಿಣಕಾಶಿ ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಶ್ರೀಮುದ್ವೀರೇಶ್ವರ ದೇವಾಲಯದ ಬಳಿಯ ಗಂಜಿಕಟ್ಟೆ ಎಂಬಲ್ಲಿ ಅರಣ್ಯ ಇಲಾಖೆ ಅಧಿ ಕಾರಿಗಳು ಇರಿಸಿದ್ದ ಬೋನಿಗೆ ಚಿರತೆ ಸೋಮವಾರ ಬೆಳಗ್ಗೆ 8.30 ಗಂಟೆಯಲ್ಲಿ ಬಿದ್ದಿದೆ. ರೈತ ಮಹಿಳೆ ಕರಿಯಮ್ಮ ಎಂಬುವರು ಗೋವುಗಳಿಗೆ ಹುಲ್ಲು ಕಟಾವು ಮಾಡುವಾಗ ಚಿರತೆ ದಾಳಿ ಮಾಡಿ, ಮಹಿ ಳೆಯ ರುಂಡ ತಿಂದಿತ್ತು. ನಂತರ ನ.18ರಿಂದ ಕಾರ್ಯಾ ಚರಣೆ ಆರಂಭಿಸಿದ್ದ ಹತ್ತಾರು ಮಂದಿ ಅರಣ್ಯ ಸಿಬ್ಬಂದಿ ಸತತ 8 ದಿನಗಳ ಕಾರ್ಯಾಚರಣೆ ಯಿಂದಾಗಿ ನ.25 ರಂದು ಅಂತಿಮವಾಗಿ ಚಿರತೆ ಯೊಂದು ಬೋನಿಗೆ ಬಿದ್ದಿದ್ದು, ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ವಲ್ಪ ನಿಟ್ಟುಸಿರು ಬಿಟ್ಟಂತಾಗಿದೆ. ಚಿರತೆ ಸೆರೆಗೆ ಸಂಬಂಧಿಸಿ 80 ಜನರ ತಂಡ ಕಾರ್ಯಾಚರಣೆ ಕೈಗೊಂಡಿತ್ತು. 10 ಬೋನು, 18 ಸಿಸಿ ಕ್ಯಾಮೆರಾ ಅಳವಡಿಸಿದ್ದರೂ ಪತ್ತೆಯಾಗಿರಲಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next