ಕೊರಟಗೆರೆ: ಡಾ. ಎಪಿಜೆ ಅಬ್ದುಲ್ ಕಲಾಂ ಯೂತ್ ಕೇರ್ ತಂಡದ ವತಿಯಿಂದ ಕೊರಟಗೆರೆ ಪಟ್ಟಣದ ಗಿರಿನಗರ ಕಾವಲು ಬೀಳು ಪ್ರದೇಶದ ಸಾರ್ವಜನಿಕರಿಗೆ ಚಿರತೆ ದಾಳಿ ಬಗ್ಗೆ ಮಾಜಿ ಪ.ಪಂ. ಉಪಾಧ್ಯಕ್ಷ ನಯಾಜ್ ಅಹಮದ್ ಅವರ ತಂಡ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜನ ಜಾಗೃತಿ ಅರಿವು ಮೂಡಿಸಿದರು.
ನಂತರ ಮತನಾಡಿ ನಮ್ಮ ತಾಲೂಕು ಸೇರಿದಂತೆ ಗ್ರಾಮಗಳಲ್ಲಿ ಇತ್ತೀಚಿಗೆ ಚಿರತೆ ದಾಳಿಯಿಂದ ಸಾರ್ವಜನಿಕರ ಪ್ರಾಣಹಾನಿ ಘಟನೆ ಸಂಭವಿಸುತ್ತಿದ್ದು,ಸಾರ್ವಜನಿಕರು ಓಡಾಡಲು ಮತ್ತು ಸಂಚಾರ ಮಾಡಲು ಭಯ ಭೀತಿಯಿಂದ ಕೂಡಿದ ವಾತಾವರಣವಾಗಿದೆ.
ಇತ್ತೀಚೆಗೆ ತಾಲೂಕಿನ ಇರಕ ಸಂದ್ರ ಕಾಲೋನಿಯಲ್ಲಿ ಇಬ್ಬರು ಹಿರಿಯರು ಸೇರಿದಂತೆ ಇಬ್ಬರ ಶಾಲೆ ಮಕ್ಕಳ ಮೇಲೆ ಚಿರತೆ ದಾಳಿಯಿಂದ ಕೊರಟಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇನ್ನು ಚೇತರಿಸಿಕೊಳ್ಳುತ್ತಿದ್ದಾರೆ.
ಪಟ್ಟಣದ ಹೊರವಲಯ ಗಂಗಾಧರೇಶ್ವರ ಬೆಟ್ಟ ಈರೇಬೆಟ್ಟ ಮತ್ತು ಅರಣ್ಯ ಪ್ರದೇಶ ಸಮೀಪದಲ್ಲಿರುವ ಗಿರಿನಗರ ಕಾವಲಬೀಳು ಸ್ಲಂ ನಿವಾಸಿಗಳ ಪ್ರದೇಶದಲ್ಲಿ ಈ ಹಿಂದೆ ಚಿರತೆ ಮತ್ತು ಕರಡಿ ಪ್ರತ್ಯಕ್ಷವಾಗಿ ಇಲ್ಲಿನ ಸಾರ್ವಜನಿಕರಲ್ಲಿ ಭಯಭೀತರಾಗಿ ಉಂಟು ಮಾಡಿತ್ತು.ಹತ್ತಿರದ ಗೂಬಲ ಗುಟ್ಟೆಯಲ್ಲಿ ಚಿರತೆ ಎರಡು ಮರಿ ಜನ್ಮ ನೀಡಿ ಇಲ್ಲೇ ವಾಸ ಹೂಡಿ ಆಗಾಗ ಪ್ರತ್ಯಕ್ಷವಾಗುತ್ತಿದ್ದನ್ನು ಕೆಲ ಸ್ಥಳೀಯರು ಕಣ್ಣಾರೆ ನೋಡಿ ನನಗೆ ಮಾಹಿತಿ ನೀಡಿದ್ದರು. ತಕ್ಷಣ ನಾನು ಮತ್ತು ನಮ್ಮ ತಂಡದ ವತಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ ತಂದು ಬೋನು ವ್ಯವಸ್ಥೆ ಮಾಡಿ ಚಿರತೆ ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಪ್ರಯತ್ನ ಮಾಡಿದರು ಚಿರತೆ ಸಿಗಲಿಲ್ಲ ಈ ಬಗ್ಗೆ ಸಾರ್ವಜನಿಕರಿಗೆ ತಿಳಿದಿರುವ ವಿಚಾರವಾಗಿದೆ. ಆದ್ದರಿಂದ ಸಾರ್ವಜನಿಕರು ಮಹಿಳೆಯರು ವೃದ್ಧರು ಶಾಲಾ ಮಕ್ಕಳು ರಾತ್ರಿ ವೇಳೆ ಒಂಟಿಯಾಗಿ ರಸ್ತೆಯಲ್ಲಿ ಅನಾವಶ್ಯಕ ಸಂಚಾರ ಮಾಡಬೇಡಿ ಎಂದು ಮನವಿ ಮಾಡಿದರು. ತಮ್ಮ ಕೆಲಸ ಕಾರ್ಯಗಳು ಮುಗಿದ ನಂತರ ಮತ್ತು ವಿದ್ಯಾರ್ಥಿಗಳು ಶಾಲೆಯಿಂದ ಸಂಜೆ ಬೇಗ ಸುರಕ್ಷತವಾಗಿ ಮನೆಗಳಿಗೆ ಸೇರಿಕೊಳ್ಳುಬೇಕೆಂದು ಮನವಿ ಮಾಡಿದರು.
ದಿನನಿತ್ಯ ರಾತ್ರಿ ವೇಳೆ ಚಿಕ್ಕ ಮಕ್ಕಳು ಟ್ಯೂಷನ್ ಮತ್ತು ಅಂಗಡಿಗಳಿಗೆ ಹೊಡಾಡುತ್ತಿರುವುದು ಕಂಡುಬರುತ್ತಿದೆ. ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಒಂಟಿಯಾಗಿ ಸಂಚರಿಸಲು ಬಿಡದೆ ತಮ್ಮ ಜೊತೆಯಲ್ಲಿ ಸುರಕ್ಷತೆಯಿಂದ ಕರೆದುಕೊಂಡು ಹೋಗಬೇಕೆಂದು ಮನವಿ ಮಾಡಿದರು.
ಡಾ. ಎಪಿಜೆ ಅಬ್ದುಲ್ ಕಲಾಂ ಸಂಘಟನೆಯ ಕಾರ್ಯದರ್ಶಿ ಮಹಮ್ಮದ್ ಗೌಸ್ ಮಾತನಾಡಿ ಅರಣ್ಯ ಮತ್ತು ಬೆಟ್ಟ ಅಂಚಿನಲ್ಲಿರುವ ಕಾರಣ ಚಿರತೆ ಆಗಾಗ ರೈತರ ದನಕರುಗಳ, ಮೇಕೆ ಮತ್ತು ನಾಯಿಗಳ ಮೇಲೆ ದಾಳಿ ಮಾಡುತ್ತಿದ್ದು ಮತ್ತು ಇದರ ಜೊತೆಗೆ ಕರಡಿ ಪ್ರತ್ಯಕ್ಷವಾಗುತ್ತಿದ್ದು ಆದ್ದರಿಂದ ಎಲ್ಲಾ ಸಾರ್ವಜನಿಕರು ಶಾಲಾ ಮಕ್ಕಳು ವೃದ್ದರು ಮಹಿಳೆಯರು ರಾತ್ರಿ ವೇಳೆ ಅನಗತ್ಯವಾಗಿ ಸಂಚಾರ ಮಾಡದೆ ಬೇಗ ಸುರಕ್ಷಿತವಾಗಿ ಮನೆಗೆ ಸೇರಿಕೊಳ್ಳಿ ಎಂದು ಮನವಿ ಮಾಡಿದರು.
ನಿವೃತ್ತ ಲೋಕಪಯೋಗಿ ಇಲಾಖೆ ನೌಕರರಾದ ವಜೀರ್ ಪಾಷಾ ಮಾತನಾಡಿ ಈ ಪ್ರದೇಶದಲ್ಲಿ ಬೀದಿ ದೀಪ ಕೆಟ್ಟು ಹೋದರೆ ತುರ್ತಾಗಿ ಸರಿಪಡಿಸಿ ಹೆಚ್ಚಿನ ರೀತಿಯ ಬೆಳಕಿನ ವ್ಯವಸ್ಥೆ ಮಾಡಬೇಕೆಂದು ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಮನವಿ ಮಾಡಿದರು.
ಈಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ವಾಸಿಮ್ ಅಕ್ರಂ. ತಾಲೂಕು ಉಪಾಧ್ಯಕ್ಷರಾದ ಮೊಹಮ್ಮದ್ ಫಾರೂಕ್, ಸಂಘಟನೆಯ ಸದಸ್ಯರಾದ ಸಲೀಂ ಖಾನ್,ನಿವಾಸಿಗಳಾದ ದಾದಾಪೀರ್, ಅಜ್ಜು, ಫಕ್ರುದ್ದೀನ್, ಚಾಂದ್ ಪಾಷ, ಇಲಿಯಾಸ್, ಹುಸೇನ್ ಪಾಷಾ, ಅಮೀದ್ ಸಾಬ್, ಮೆಹಬೂಬ್ ಪಾಷಾ, ಲತಾ, ಲೋಕಮ್ಮ, ಅಕ್ತರ್ ಉನ್ನಿಸಾ, ಪುಷ್ಪಲತಾ, ಶಬಾನಾ, ಶಹಜಾದ್ ಉನ್ನಿಸಾ, ಫಾತಿಮಾ, ಪುಷ್ಪ, ಹೀನಾ ಕೌಸರ್ , ಫಾತಿಮಾ ಬೇಗಂ, ಶಬಾನ ಬಾನು, ಅಮೀನಾ ಬಾನು, ನೂರಿಬೇಗಂ, ರಹಮತ್ ಉನ್ನಿಸಾ, ಪುಟ್ಟ ಮಕ್ಕಳು ಸೇರಿದಂತೆ ಅನೇಕ ಮಹಿಳೆಯರು ಹಾಜರಿದ್ದರು.