ಗಂಗಾವತಿ: ತಾಲೂಕಿನ ಆನೆಗೊಂದಿ ಹತ್ತಿರ ಮೇಗೋಟ ಆದಿಶಕ್ತಿ ದೇಗುಲದ ಗೋಶಾಲೆಯ ಆಕಳಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಸೋಮವಾರ ಬೆಳಗ್ಗೆ 10 ಗಂಟೆಗೆ ನಡೆದಿದೆ.
ದೇಗುಲದ ಗೋಶಾಲೆ ಹಸುಗಳನ್ನು ಹೊರಗೆ ಮೇಯಲು ಬಿಟ್ಟ ಸಂದರ್ಭದಲ್ಲಿ ಚಿರತೆ ದಾಳಿ ನಡೆಸಿದ್ದು, ದನ ಕಾಯುವವರು ಇದನ್ನು ಕಂಡು ಚೀರಿಕೊಂಡ ನಂತರ ಆಕಳನ್ನು ಬಿಟ್ಟು ಚಿರತೆ ಕಾಲ್ಕಿತ್ತಿದೆ.
ಚಿರತೆ ಗುಡ್ಡದ ಗುಹೆಯಲ್ಲಿ ನಾಪತ್ತೆಯಾಗಿದೆ. ಈಗಾಗಲೇ ಇದೇ ಸ್ಥಳದಲ್ಲಿ ಯುವಕನೊರ್ವನನ್ನು ಚಿರತೆ ಕೊಂದು ಹಾಕಿತ್ತು ಹೈದರಾಬಾದ್ ನ ಪ್ರವಾಸಿ ಯುವಕನ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು.
ಇದನ್ನೂ ಓದಿ:ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಸ್ಪರ್ಧೆ ಅನುಮಾನ: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಆನೆಗೊಂದಿ ಸಾಣಾಪೂರ, ವಿರೂಪಾಪೂರಗಡ್ಡಿ, ಜಂಗ್ಲಿ ರಂಗಾಪೂರ, ಹನುಮನಹಳ್ಳಿ ಮಲ್ಲಾಪೂರ ಭಾಗದಲ್ಲಿ ನಿರಂತರವಾಗಿ ಚಿರತೆ ಪ್ರತ್ಯಕ್ಷವಾಗುತ್ತಿದ್ದು ಇಲ್ಲಿಯ ಜನರು ಭಯಭೀತರಾಗಿದ್ದಾರೆ.
ಅರಣ್ಯ ಇಲಾಖೆ ಅಲ್ಲಲ್ಲಿ ಚಿರತೆಗಳನ್ನು ಸೆರೆ ಹಿಡಿಯಲು ಬೋನ್ ಗಳನ್ನು ಇರಿಸಿದ್ದರೂ ಪ್ರಯೋಜನವಾಗಿಲ್ಲ.