Advertisement
ನಗರದ ಅಂತರಗಂಗೆ ಬೆಟ್ಟದ ತಪ್ಪಲಿ ನಲ್ಲೇ ಇರುವ ಅಂತರಗಂಗೆ ವಿಕಲ ಚೇತನರ ವಸತಿ ಶಾಲೆಯ ಕಾಂಪೌಂಡ್ದಾಟಿ ಒಳಗೆ ಬಂದ ಚಿರತೆ, ಅಲ್ಲಿ ಕಟ್ಟಿ ಹಾಕಿದ್ದ ಹಸುವಿನ ಕರು ಮೇಲೆ ದಾಳಿಮಾಡಿ ಕೊಂದು ಹಾಕಿದೆ. ಬೆಳಕಿನ ಜಾವ
ಘಟನೆ ನಡೆದಿರು ವುದರಿಂದ ಅಂತರ ಗಂಗಾ ವಿಕಲಚೇತನರ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಶಂಕರ್ ಸೇರಿದಂತೆ ಶಾಲೆಯಲ್ಲಿಯೇ ಇರುವ 70 ಕ್ಕೂ ಹೆಚ್ಚು ಮಂದಿಗೆ ಯಾವುದೇ ಪ್ರಾಣಾ ಪಾಯವಾಗಿಲ್ಲ.
ಭಾರೀ ಅನಾಹುತ ಆಗುವ ಸಾಧ್ಯತೆ ಗಳಿದ್ದವು ಎಂದು ಶಂಕರ್ ತಿಳಿಸಿದ್ದಾರೆ. ಶಂಕರ್‌ರಿಂದ ಮಾಹಿತಿ ಪಡೆದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಲೋಕೇಶ್ ಸ್ಥಳಕ್ಕೆ ಆಗಮಿಸಿ ಕರುವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಿದರು. ಬುದ್ಧಿಮಾಂದ್ಯ ಮಕ್ಕಳಿಗೆ ಹಾಲಿನ ವ್ಯವಸ್ಥೆಗಾಗಿ ದಾನಿ ಯೊಬ್ಬರು ನೀಡಿದ್ದ ಹಸು ಮತ್ತು ಕರುವಿನ ಮೇಲೆ ಚಿರತೆ ದಾಳಿ ಮಾಡಿ ಕರುವನ್ನು ಬಲಿ ತೆಗೆದುಕೊಂಡಿದೆ. ಇದರಿಂದ ಮನನೊಂದ ಶಾಲೆಯ ಬುದ್ಧಿಮಾಂದ್ಯ ಮಕ್ಕಳು ಕರುವಿ ಗಾಗಿ ಶೋಕಿಸುತ್ತಿದ್ದುದು
ಕಂಡು ಬಂದಿತು. ಅಂತರಗಂಗೆ ಶಾಲೆಯ ಆವರಣಕ್ಕೆ ಚಿರತೆ ನುಗ್ಗಿರುವುದರಿಂದ ಶಾಲೆಯಲ್ಲಿ ವಾಸ್ತವ್ಯವಿರುವ ಎಪ್ಪತ್ತಕ್ಕೂ ಹೆಚ್ಚು ಮಂದಿ ಆತಂಕದಲ್ಲಿರುವಂತಾಗಿದೆ.
Related Articles
Advertisement