Advertisement

ಹುಣಸೂರು: ಕೊಟ್ಟಿಗೆಗೆ ನುಗ್ಗಿ ಹಸುವನ್ನು ಗಾಯಗೊಳಿಸಿದ ಚಿರತೆ

09:05 AM May 31, 2020 | keerthan |

ಹುಣಸೂರು: ಚಿರತೆಯೊಂದು ದನದ ಕೊಟ್ಟಿಗೆಗೆ ದಾಳಿ ನಡೆಸಿ ಹಸುವನ್ನು ಗಾಯಗೊಳಿಸಿದ ಘಟನೆ ತಾಲೂಕಿನ ಹನಗೋಡು ಹೋಬಳಿಯ ಹೆಮ್ಮಿಗೆ ಕಾಲೋನಿಯಲ್ಲಿ ನಡೆದಿದೆ.

Advertisement

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚಿರತೆಯು ಹೆಮ್ಮಿಗೆ ಕಾಲೋನಿಯ ತೋಟದ ಮನೆಯಲ್ಲಿ ವಾಸವಿರುವ ನಿವೃತ್ತ ಯೋಧ ಪುರುಷೋತ್ತಮ್ ಎಂಬುವವರ ತೋಟದ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಹಸುಗಳ ಅರಚಾಟ ಕೇಳಿ ಮನೆಯವರು ಕೂಗಾಟ ನಡೆಸಿದ ವೇಳೆ ಚಿರತೆ ಪರಾರಿಯಾಗಿದೆ ಎನ್ನಲಾಗಿದೆ.

ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ಗ್ರಾಮದ ಬಳಿಯ ಕಾಡು ಬಫರ್ ಝೋನ್ ಗೆ ಬರುವುದರಿಂದ ವನ್ಯ ಜೀವಿ ವಿಭಾಗದವರು ಸೆರೆ ಹಿಡಿಯಬೇಕು ಎನ್ನುತ್ತಾರೆ. ವನ್ಯಜೀವಿ ವಿಭಾಗದವರು ನಮ್ಮ ವ್ಯಪ್ತಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ. ಈ ಭಾಗದಲ್ಲಿ ಆಗಾಗ್ಗೆ ಚಿರತೆ ದಾಳಿ ನಡೆಸುತ್ತಲೇ ಇದೆ ವಯೋವೃದ್ದ ದಂಪತಿಗಳು ಮಾತ್ರ ವಾಸವಿದ್ದು, ಸಾಕು ಪ್ರಾಣಿಗಳ ಜೀವ ಉಳಿಸುವಂತೆ ಮನವಿ ಮಾಡಿದ್ದಾರೆ.

ತಾಲೂಕಿನ ಇತರೆಡೆಯೂ ಹಾವಳಿ: ತಾಲೂಕಿನ ಹನಗೋಡು ಗ್ರಾಮದ ಲಕ್ಷಣ ತೀರ್ಥ ನದಿ ದಡದಲ್ಲಿರುವ ರಮೇಶ್ ಎನ್ನುವವರ ತೋಟಕ್ಕೆ ನುಗ್ಗಿದ ಚಿರತೆ ಕೋಳಿಗಳನ್ನು ಕೊಂದು ತಿಂದು ಹಾಕಿದೆ. ಇನ್ನು ನಗರಕ್ಕೆ ಸಮೀಪದ ಅತ್ತಿಗುಪ್ಪೆ ಗ್ರಾಮದಲ್ಲಿ ಹಾಡುಹಗಲೇ ಚಿರತೆ ಕಾಣಿಸಿಕೊಂಡಿದೆ. ಇದರಿಂದ ರೈತರು, ಸಾರ್ವಜನಿಕರು ಭಯಭೀತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next