Advertisement

ಕುಟುಂಬದವರ ಜೊತೆ ಪ್ರವಾಸಕ್ಕೆ ಬಂದ 9 ವರ್ಷದ ಬಾಲಕನ ಮೇಲೆ ಚಿರತೆ ದಾಳಿ

10:09 PM Oct 10, 2020 | sudhir |

ಗಂಗಾವತಿ: ಆನೆಗೊಂದಿ ವಾಲೀಕಿಲ್ಲಾ ಆದಿಶಕ್ತಿ ದೇಗುಲದ ಬಳಿ ಚಿರತೆಯೊಂದು ಬಾಲಕನ ಮೇಲೆ ದಾಳಿ ಮಾಡಿ ತಲೆಯ‌ ಹಿಂಭಾಗಕ್ಕೆ ಗಾಯಮಾಡಿದ ಘಟನೆ ಶನಿವಾರ ಸಂಜೆ ನಡೆದಿದೆ.

Advertisement

ಹೈದರಾಬಾದ್ ನಿವಾಸಿ ಹೃತೀಕ್ ಎಂಬ‌ 09 ವರ್ಷದ ಬಾಲಕ ಅಪ್ಪ ಅಮ್ಮ ಜತೆ ಪ್ರವಾಸಕ್ಕೆ ಆಗಮಿಸಿ ದೇವರ‌ದರ್ಶನ ಪಡೆದ ನಂತರ ದೇಗುಲದ ಹಿಂಭಾಗದಲ್ಲಿರುವ ಗವಿಯ ಹಾವಿನ ಗೋಪುರ ವೀಕ್ಷಸಲು ತೆರಳುವಾಗ ಹಿಂದಿನಿಂದ ಬಂದ ಚಿರತೆ ಬಾಲಕನ ಮೇಲೆ ದಾಳಿ ಮಾಡಿದೆ.ಅಲ್ಲಿದ್ದ ಬಾಲಕನ ಕುಟುಂಬದವರು ಕಿರುಚಾಡಿದ್ದರಿಂದ ಉಳಿದ ಪ್ರವಾಸಿಗರು ಗಲಾಟೆ ಮಾಡಿ ಚಿರತೆಯನ್ನು ಓಡಿಸಿದ್ದಾರೆ.

ಗಾಯಗೊಂಡ ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.

ಶುಕ್ರವಾರ ಜಂಗ್ಲಿ‌ರಂಗಾಪೂರದ ಮಾಬಮ್ಮ ಇವರ ಮೇಲೆ ದಾಳಿ ಮಾಡಿ ತೀವ್ರ ಗಾಯಗೊಳಿಸಿದ್ದರಿಂದ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆ ಗೆ ಹುಬ್ಬಳ್ಳಿ ಗೆ ಕಳಿಸಿದ್ದಾರೆ.

ಇದನ್ನೂ ಓದಿ: ಕಾರಿನಲ್ಲಿ 39 ಕೆಜಿ ಅಕ್ರಮ ಗೋಮಾಂಸ ಸಾಗಾಟ : ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

Advertisement

ಭಯದಲ್ಲಿ ಜನತೆ: ಏಳುಗುಡ್ಡಪ್ರದೇಶದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಸ್ಪೋಟದ ಕಾರಣದಿಂದ ಅಲ್ಲಿಯ ಕರಡಿ ಚಿರತೆಗಳು ಅಂಜನಾದ್ರಿ ಕಿಷ್ಕಿಂದಾ ಪ್ರದೇಶಕ್ಕೆ ವಲಸೆ ಬಂದಿದ್ದು ಆನೆಗೊಂದಿ ಸಾಣಾಪೂರ ಮಲ್ಲಾಪೂರ ಭಾಗದ ಬೆಟ್ಟಗುಡ್ಡಗಳ ಹತ್ತಿರ ಇರುವ ಗ್ರಾಮಗಳ ಜನತೆ ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯವರು ಬೋನ್ ಇಟ್ಟು ಚಿರತೆ ಕರಡಿಗಳನ್ನು ಸೆರೆ ಹಿಡಿಯುವಂತೆ ಜನರು‌ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next