ಪ್ರವಾಸಿರು ಸೇರಿದಂತೆ ಜನರು ಕೆಆರ್‌ಎಸ್ ಸುತ್ತಮುತ್ತಲ ಪ್ರದೇಶದಲ್ಲಿ ಒಂಟಿಯಾಗಿ ಸಂಚಾರ ಮಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹೆಜ್ಜೆ ಗುರುತು ಪರಿಶೀಲಿಸಿ, ಚಿರತೆ ಸೆರೆಗೆ ಇದೀಗ ಮುಂದಾಗಿದ್ದಾರೆ. ರಾತ್ರಿ ವೇಳೆ ಚಿರತೆ ಪ್ರತ್ಯಕ್ಷ: ವಿಶ್ವ ಪ್ರಸಿದ್ಧ ಶ್ರೀರಂಗಪಟ್ಟಣದ ಕೆಆರ್‌ಎಸ್ ಬೃಂದಾವನದ ಸಮೀಪ ಕಳೆದ ಎರಡು ದಿನಗಳ ಹಿಂದೆಯಷ್ಟೇ ರಾತ್ರಿ ವೇಳೆಯಲ್ಲಿ ಚಿರತೆ ಯೊಂದು ಪ್ರತ್ಯಕ್ಷವಾಗಿತ್ತು. ಬೃಂದಾವನದ ಒಳ ಆವರಣದಲ್ಲಿ ಹಾಗೂ ಇತರ ಸಮೀಪದ ಪ್ರದೇಶದಲ್ಲಿ ಚಿರತೆ ಸಂಚಾರ ಮಾಡುತ್ತಿರುವ ದೃಶ್ಯ ಕೆಆರ್‌ಎಸ್ ಬೃಂದಾವನದಲ್ಲಿ ಅಳವಡಿಸಿರುವ ಸಿಸಿ ಟೀವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲೂ ಕೂಡ ವೈರಲ್ ಆಗಿತ್ತು. ಇದರಿಂದ ಕೆಆರ್‌ಎಸ್ ಬೃಂದಾವನಕ್ಕೆ ಬರುವ ಪ್ರವಾಸಿಗರಲ್ಲಿ ಆತಂಕದ ಮನೆ ಮಾಡಿದೆ.
Advertisement
ಇದೀಗ ಸಿಸಿ ಟೀವಿ ದೃಶ್ಯ ಎಲ್ಲೆಡೆ ಹರಿದಾಡಿದ ಹಿನ್ನೆಲೆ ಕೆಆರ್‌ಎಸ್ ಬೃಂದಾವನಕ್ಕೆ ಬರುವ ಪ್ರವಾಸಿಗರ ಮೇಲೂ ಪರಿಣಾಮ ಬೀರಿದೆ. ಇಲ್ಲಿಗೆ ಬರುವ ಪ್ರವಾಸಿಗರು ಕೂಡ ಚಿರತೆ ದಾಳಿ ನಡೆಸುವ ಆತಂಕದಲ್ಲಿದ್ದರೆ, ಇಲ್ಲಿ ಕೆಲಸ ಮಾಡುವ ನೌಕರರು ಮತ್ತು ಸಿಬ್ಬಂದಿ ಸೇರಿದಂತೆ ಪಕ್ಕದಲ್ಲೇ ಇರುವ ಕೆಆರ್‌ಎಸ್ ಗ್ರಾಮಸ್ಥರಿಗೂ ಕೂಡ ಒಂಟಿ ಚಿರತೆ ಭಯ ಕಾಡುತ್ತಿದೆ.
Related Articles
Advertisement
ವಾಹನಗಳ ಮೂಲಕ ಚಿರತೆ ದಾಳಿಯ ಬಗ್ಗೆ ಜನರು ಎಚ್ಚರ ವಹಿಸಲು ಸೂಚಿಸಿ, ಯಾರು ಒಂಟಿಯಾಗಿ ಸಂಚಾರ ಮಾಡದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆ ವಿಶ್ವ ಪ್ರಸಿದ್ಧ ಕೆಆರ್‌ಎಸ್ ಬೃಂದಾವನದಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಮೂಡಿಸಿದ್ದು, ಅರಣ್ಯ ಇಲಾಖೆ ವತಿಯಿಂದ ಚಿರತೆ ಸೆರೆಗೆ ಪ್ರಯತ್ನ ನಡೆಯುತ್ತಿದೆ. ಪ್ರತಿದಿನ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಿದ್ದು, ಅನಾಹುತ ಸಂಭವಿಸುವ ಮೊದಲೇ ಕೆಆರ್‌ಎಸ್ ಬೃಂದಾವನ, ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಆ ಚಿರತೆ ಹಿಡಿದು ಕಾಡಿಗೆ ಬಿಡುವ ಪ್ರಯತ್ನ ಮಾಡಬೇಕಿದೆ.