Advertisement

ಕೆಆರ್‌ಎಸ್‌ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ: ಆತಂಕ

04:20 PM Feb 06, 2021 | Team Udayavani |

ಶ್ರೀರಂಗಪಟ್ಟಣ: ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಕೆಆರ್‌ಎಸ್‌ ಬೃಂದಾವನದಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿದ್ದು, ನೌಕರರು ಹಾಗೂ ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿದೆ.

Advertisement

ಗ್ರಾಪಂಗೆ ಪೊಲೀಸರ ಮಾಹಿತಿ: ಬೃಂದಾವನದ ದಕ್ಷಿಣ ದ್ವಾರದ ಬಳಿ ಈ ಚಿರತೆ ಹಾದುಹೋಗಿದೆ. ಚಿರತೆ ಹಾದು ಹೋಗಿರುವ  ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೃಂದಾವನದಲ್ಲಿ ಚಿರತೆ ಕಾಣಿಸಿ ಕೊಂಡಿರುವುದು ಸ್ಥಳೀಯ ಪ್ರವಾಸಿಗರು,  ವ್ಯಾಪಾರಿಗಳು, ನೌಕರರಲ್ಲಿ ಆತಂಕ ಮೂಡಿ ಸಿದೆ. ಚಿರತೆ ಕಾಣಿಸಿಕೊಂಡಿರುವ ಸಂಗತಿಯನ್ನು ಪೊಲೀಸರು ಸ್ಥಳೀಯ ಗ್ರಾಪಂಗೆ ತಿಳಿಸಿದ್ದಾರೆ.

ಇದನ್ನೂ ಓದಿ :ಮೀರಾಗೆ ಕಠಿಣ ಶಿಕ್ಷೆಯಾಗಲಿ

ಹೆಜ್ಜೆ ಗುರುತು ಪತ್ತೆಯಾದರೆ ಬೋನು: ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬೇಬಿಬೆಟ್ಟ, ಕನ್ನಂಬಾಡಿ ಹಾಗೂ   ನಾರ್ಥ್ ಬ್ಯಾಂಕ್‌ ಕಡೆಗಳ ಅರಣ್ಯ ಪ್ರದೇಶದಿಂದ ಚಿರತೆ ಈ ಭಾಗಕ್ಕೆ ಬಂದರುವ ಶಂಕೆ ವ್ಯಕ್ತವಾಗಿದೆ. ಕೆಆರ್‌ ಎಸ್‌  ಬೃಂದಾವನದಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾದರೆ ಬೋನು ಇರಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಸುನೀತಾ ತಿಳಿಸಿದ್ದಾರೆ. ಮಹದೇವಪುರ, ನೇರಲಕೆರೆ ಗ್ರಾಮಗಳ ಬಳಿ ಚಿರತೆ ಸೆರೆಗೆ ಬೋನು ಇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next