Advertisement
‘ಮಾಸ್ಟರ್’ ಬಳಿಕ ಲೋಕೇಶ್ ಕನಕರಾಜ್ ಮತ್ತೆ ವಿಜಯ್ ಅವರೊಂದಿಗೆ ಸಿನಿಮಾ ಮಾಡಿದ್ದು, ಮಾಸ್ – ಕ್ಲಾಸ್ ‘ಲಿಯೋ’ ನೋಡಲು ಸಿನಿಮಾ ಮಂದಿರಕ್ಕೆ ಜನ ಹರಿದು ಬರುತ್ತಿದ್ದಾರೆ.
Related Articles
Advertisement
“ಇದೊಂದು ಇಂಡಸ್ಟ್ರಿ ಹಿಟ್” ಸಿನಿಮಾವೆಂದು ಒಬ್ಬರು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಸಂಜಯ್ ದತ್, ಅರ್ಜುನ್ ಸರ್ಜಾ ಅವರ ಮಾಸ್ ಲುಕ್ ಹಾಗೂ ಅನಿರುದ್ದ್ ಅವರ ಮ್ಯೂಸಿಕ್ ಬಗ್ಗೆ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಆದರೆ ಸಿನಿಮಾ ನೋಡಿದ ಕೆಲವರು ನಿರಾಶದಾಯಕವಾಗಿಯೂ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ತಮಿಳು ಸಿನಿ ವಿಮರ್ಶಕ( ಟ್ರೇಡ್ ಬ್ಯುಸಿನೆಸ್ ಇನ್ ಸೈಡರ್) ಮನೋಬಾಬಾ ವಿಜಯಬಾಲನ್ ಅವರು “ವಿಜಯ್ ಸಿನಿ ಕೆರಿಯರ್ ನಲ್ಲಿ ಇದುವರೆಗಿನ ಅತ್ಯಂತ ದುರ್ಬಲ ಸಿನಿಮಾವಿದು. ಸಿಂಹವಾಗಲು ಹೋಗಿದ್ದಾರೆ. ಆದರೆ ಕೊನೆಯಲ್ಲಿ ಬೆಕ್ಕು ಆಗುತ್ತಾರೆ. ವಿಜಯ್ ಹಾಗೂ ಇತರೆ ಪಾತ್ರವರ್ಗದ ನಟನೆ ಗಮನ ಸೆಳೆಯುತ್ತದೆ. ಆದರೆ ಅಂತಿಮವಾಗಿ ಫಲಿತಾಂಶ ಮಾತ್ರ ನಿರಾಶದಾಯಕವಾಗಿದೆ. ಲೋಕೇಶ್ ಕನಕರಾಜ್ ನಿರೀಕ್ಷೆ ಹಾಗೂ ಹೈಪ್ ನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇನ್ನು ಸಿನಿಮಾ ಲಯ ಕಳೆದುಕೊಳ್ಳುತ್ತದೆ. ಇದರಿಂದ ಪ್ರೇಕ್ಷಕರಿಗೆ ಬೋರಾಗುತ್ತದೆ. ಇದು ‘ವಿಕ್ರಮ್’ ಹಾಗೂ ‘ಕೈತಿ’ಯ ಸಮೀಪಕ್ಕೂ ಬರಲ್ಲ. ಲೋಕೇಶ್ ಅವರ ಸಾಧಾರಣ ಪ್ರಯತ್ನ ಹಾಗೂ ದುರ್ಬಲ” ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನೊಬ್ಬರು ಇದು ‘ಬೀಸ್ಟ್’ ಗಿಂತ ನಾಲ್ಕು ಪಟ್ಟು ಕಳಪೆ ಸಿನಿಮಾ “ಎಂದು ಬರೆದುಕೊಂಡಿದ್ದಾರೆ.