ಚೆನ್ನೈ: ದಳಪತಿ ವಿಜಯ್ ಅವರ ಬಹು ನಿರೀಕ್ಷಿತ ʼಲಿಯೋʼ ಸಿನಿಮಾದ ಹೈಪ್ ಜೋರಾಗಿದೆ. ಕಾಲಿವುಡ್ ಮಾತ್ರವಲ್ಲದೆ,ಇತರ ಸಿನಿವಲಯದಲ್ಲಿಯೂ ಸಿನಿಮಾದ ಬಗ್ಗೆ ಚರ್ಚೆ ನಡೆಯುತ್ತಿದೆ.
ಲೋಕೇಶ್ ಕನಕರಾಜ್ ಅವರ ಸಿನಿಮಾಗಳನ್ನು ಕಾದು ಕೂತು ನೋಡುವ ಪ್ರೇಕ್ಷಕರ ವರ್ಗವಿದೆ. ʼಲಿಯೋʼ ಸಿನಿಮಾದ ʼನಾ ರೆಡಿʼ ಹಾಡು ಕಾಲಿವುಡ್ ನಲ್ಲಿ ಧೂಳೆಬ್ಬಿಸಿದೆ. ಸಿನಿಮಾದ ಶೂಟ್ ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದು, ಅಕ್ಟೋಬರ್ 19 ರಂದು ಗ್ರ್ಯಾಂಡ್ ಆಗಿ ಸಿನಿಮಾ ತೆರೆ ಕಾಣಲಿದೆ.
ಇದನ್ನೂ ಓದಿ: ವರ್ಷದ ಮೊದಲಾರ್ಧದಲ್ಲಿ ಪುಟಿದೆದ್ದ ಬಾಲಿವುಡ್: ಹೇಗಿದೆ ಮುಂದಿನ ಬಾಕ್ಸ್ ಆಫೀಸ್ ಲೆಕ್ಕಚಾರ
ʼಲಿಯೋʼ ಸಿನಿಮಾಕ್ಕೆ ಎದುರಾಳಿಯಾಗಿ ಟಾಲಿವುಡ್ ನಲ್ಲಿ ಬಿಗ್ ಸ್ಟಾರ್ ಸಿನಿಮಾವೊಂದು ತೆರೆಗೆ ಬರಲಿದೆ. ಟಾಲಿವುಡ್ ಲೆಜೆಂಡ್ ಬಾಲಕೃಷ್ಣ ಅವರ “ಭಗವಂತ್ ಕೇಸರ್” ಸಿನಿಮಾ ಅಕ್ಟೋಬರ್ 19 ರಂದು ರಿಲೀಸ್ ಆಗಲಿದೆ. ಈ ಮೂಲಕ ಕಾಲಿವುಡ್ ಸಿನಿಮಾಕ್ಕೆ ಟಾಲಿವುಡ್ ನಲ್ಲಿ ಪೈಪೋಟಿ ಸಿಗಲಿದೆ. ಇದಲ್ಲದೇ ರವಿತೇಜ ಅವರ “ಟೈಗರ್ ನಾಗೇಶ್ವರ ರಾವ್” ಸಿನಿಮಾ ಒಂದು ದಿನದ ನಂತರ ಅಂದರೆ ಅಕ್ಟೋಬರ್ 20 ರಂದು ತೆರೆ ಕಾಣಲಿದೆ. ಟಾಲಿವುಡ್ , ಕಾಲಿವುಡ್ ಸಿನಿಮಾರಂಗದಲ್ಲಿ ಮೂರು ದೊಡ್ಡ ಚಿತ್ರದಲ್ಲಿ ಅಸುಪಾಸಿನ ದಿನದಲ್ಲಿ ರಿಲೀಸ್ ಆಗಲಿದ್ದು, ಪ್ರೇಕ್ಷಕರು ಯಾವ ಸಿನಿಮಾಕ್ಕೆ ಜೈ ಎನ್ನಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಅಂದಹಾಗೆ ವಿಜಯ್ ಅವರ ಈ ಹಿಂದಿನ ʼವಾರಿಸುʼ ಸಿನಿಮಾಕ್ಕೂ ಬಾಲಯ್ಯ ಅವರ ʼ ವೀರಸಿಂಹ ರೆಡ್ಡಿʼ ಸಿನಿಮಾ ಪೈಪೋಟಿಯಾಗಿ ಅಸುಪಾಸಿನ ದಿನದಲ್ಲಿ ತೆರೆಕಂಡಿತ್ತು.