Advertisement

Leo OTT release: ಓಟಿಟಿ ಎಂಟ್ರಿಗೆ ರೆಡಿಯಾದ ʼಲಿಯೋʼದಾಸ್; ಯಾವಾಗ ರಿಲೀಸ್?

12:36 PM Nov 20, 2023 | Team Udayavani |

ಚೆನ್ನೈ: ದಳಪತಿ ವಿಜಯ್‌ ಅಭಿನಯದ ಹಿಟ್‌ ಚಿತ್ರ ʼಲಿಯೋʼ ಥಿಯೇಟರ್‌ನಲ್ಲಿ ಹೌಸ್‌ ಫುಲ್‌ ಪ್ರದರ್ಶನ ಕಂಡ ಬಳಿಕ ಇದೀಗ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್‌ ಆಗಿದೆ.

Advertisement

‘ಮಾಸ್ಟರ್’ ಬಳಿಕ ಲೋಕೇಶ್ ಕನಕರಾಜ್ ಮತ್ತೆ ವಿಜಯ್ ಅವರೊಂದಿಗೆ ಸಿನಿಮಾ ಮಾಡಿದ್ದು, ಮಾಸ್ – ಕ್ಲಾಸ್ ‘ಲಿಯೋ’ ನೋಡಿ ಪ್ರೇಕ್ಷಕರು ಜೈಕಾರ ಹಾಕಿದ್ದರು. ಅಂದುಕೊಂಡಂತೆ ಸಿನಿಮಾ ಕೋಟಿ ಕೋಟಿ ಕಮಾಯಿ ಮಾಡಿ ಬಾಕ್ಸ್‌ ಆಫೀಸ್‌ ನಲ್ಲೂ ಸದ್ದು ಮಾಡಿತ್ತು.

ಸಿನಿಮಾ ನೋಡಿದ ಅಭಿಮಾನಿಗಳಂತೂ ಇದು ಜಬರ್‌ ದಸ್ತ್‌ ಮಾಸ್‌ ಮೂವಿ, ʼಜೈಲರ್‌ʼ ಗಿಂತ ಬೆಸ್ಟ್‌ ಎಂದು ಕಮೆಂಟ್‌ ಮಾಡಿದ್ದರು. ಹೈಪ್‌ಗೆ ತಕ್ಕ  ಮನರಂಜನೆ ನೀಡಿದ ʼಲಿಯೋʼ ಇದೀಗ ಓಟಿಟಿ ರಿಲೀಸ್‌ ಗೆ ರೆಡಿಯಾಗಿದೆ.

ಇದನ್ನೂ ಓದಿ: Kantara 2: ಪಂಜುರ್ಲಿ ದೈವದ ಮೂಲದ ಸುತ್ತ ಸಾಗಲಿದೆ ʼಕಾಂತಾರ-2ʼ ಸಿನಿಮಾದ ಕಥೆ?

ಭಾರತದಲ್ಲಿ ʼಲಿಯೋʼ ನವೆಂಬರ್‌ 24 ರಂದು ರಿಲೀಸ್‌ ಆಗಲಿದೆ. ಇನ್ನು ಗ್ಲೋಬಲ್‌ ಲೆವೆಲ್‌ ನಲ್ಲಿ ನ.28 ರಂದು ರಿಲೀಸ್‌ ಆಗಲಿದೆ. ನೆಟ್‌ ಫ್ಲಿಕ್ಸ್‌ ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

Advertisement

ವಿಜಯ್‌ ಯೊಂದಿಗೆ ತ್ರಿಶಾ, ಸಂಜಯ್ ದತ್, ಮಡೋನಾ ಸೆಬಾಸ್ಟಿಯನ್, ಗೌತಮ್ ಮೆನನ್ ಮತ್ತು ಪ್ರಿಯಾ ಆನಂದ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next