Advertisement

ಚಳಿಗೆ ಹಿತಕರ: ದಿಢೀರ್‌ ಅಂತ ರುಚಿಯಾದ ನಿಂಬೆಹಣ್ಣಿನ ತಿಳಿ ಸಾರು ಮಾಡಿ…

11:07 AM Nov 27, 2020 | Sriram |

ಈ ನಿಂಬೆ ಹಣ್ಣು ಮಿಟಮಿನ್‌ ಸಿ ಯ ಸಮೃದ್ಧ ಅಗರ. ಅಡುಗೆಯಲ್ಲಿ ಆರೋಗ್ಯಕ್ಕೆ ಹೀಗೆ ಹತ್ತು ಹಲವು ವಿಧಗಳಲ್ಲಿ ನಿಂಬೆ ಅತ್ಯುಪಯುಕ್ತ. ನಿಂಬೆರಸದ ಸಾರು ಚಳಿಗೆ ಹಿತಕರ ಮತ್ತು ಹತ್ತು ನಿಮಿಷದಲ್ಲೇ ತಯಾರು ಮಾಡಬಹುದಾದ ಸುಲಭ ಸಾರು.

Advertisement

ನಿಂಬೆ – ಪುದೀನಾ ಸಾರು
ಬೇಕಾಗುವ ಸಾಮಗ್ರಿಗಳು
ನಿಂಬೆ ಹಣ್ಣು 4 ರಿಂದ 5, ಪುದೀನಾ ಸೊಪ್ಪು-1ಕಟ್ಟು, ತುಪ್ಪ 2 ಚಮಚ, ಕೊತ್ತಂಬರಿ 1ಚಮಚ, ಜೀರಿಗೆ 3 ಚಮಚ, ಹಸಿಮೆಣಸು 3, ತೆಂಗಿನ ತುರಿ 1ಚಮಚ, ಮೆಂತೆ 1 ಚಮಚ,ಬೆಲ್ಲ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ಒಗ್ಗರಣೆಗೆ: ಸಾಸಿವೆ ಸ್ವಲ್ಪ, ಕರಿಬೇವು,ಒಣಮೆಣಸು,ಹಿಂಗು

ತಯಾರಿಸುವ ವಿಧಾನ
ಎರಡು ಮುಷ್ಠಿಯಷ್ಟು ಪುದೀನಾ ಎಲೆಗಳನ್ನು ತೊಳೆದು ಸಣ್ಣಗೆ ಹೆಚ್ಚಿ ಕಾವಲಿಯಲ್ಲಿ ತುಪ್ಪ,ಸ್ವಲ್ಪ ಕೊತ್ತಂಬರಿ,ಜೀರಿಗೆ,ಹಸಿ ಮೆಣಸು , ತೆಂಗಿನ ತುರಿ ,ಮೆಂತ್ಯೆ ಹುರಿದು ಬಳಿಕ ಪುದೀನಾ ಎಲೆ ಸೇರಿಸಿ ಬಾಡಿಸಿ ಎಲ್ಲವನ್ನು ರುಬ್ಬಿ ನೀರು ಸೇರಿಸಿ ತೆಳ್ಳಗೆ ಮಾಡಿ ಉಪ್ಪು ಬೆರಸಿ ಕುದಿಸಿ. ಸಾಸಿವೆ, ಕರಿಬೇವು, ಒಣಮೆಣಸು,ಇಂಗಿನ ಒಗ್ಗರಣೆ ಹಾಕಿ ನಂತರ ಅರ್ಧ ನಿಂಬೆ ರಸ ಬೆರಸಿ ಸ್ವಲ್ಪ ಬೆಲ್ಲ ಸೇರಿಸಿರಿ.

ನಿಂಬೆ ಸಾರು:
ಒಂದು ಚಮಚ ಅಕ್ಕಿ,ಒಂದು ಚಮಚ ಗೋಧಿ ,ಒಂದು ಗಂಟೆ ನೆನೆಸಿಡಿ. ಬಳಿಕ ಸ್ವಲ್ಪ ತೆಂಗಿನ ತುರಿ,4 ಹಸಿ ಮೆಣಸು,ಬೆಲ್ಲ,ಉಪ್ಪು,2 ಚಮಚ ಜೀರಿಗೆ,ಸ್ವಲ್ಪ ಕೊತ್ತಂಬರಿ ಸೊಪ್ಪು ಹೆಚ್ಚಿ ಬೆರಸಿ ಎಲ್ಲವನ್ನು ನೆನೆಸಿದ ಅಕ್ಕಿ ಮತ್ತು ಗೋಧಿಯೊಂದಿಗೆ ನಯವಾಗಿ ಅರೆಯಬೇಕು.ಬಳಿಕ ನೀರು ಸೇರಿಸಿ ಕುದಿಸಿ ಕೊನೆಯಲ್ಲಿ ಒಂದು ನಿಂಬೆರಸ ಬೆರಸಬೇಕು.ತುಪ್ಪದಲ್ಲಿ ಸಾಸಿವೆ ,ಕರಿಬೇವು ,ಇಂಗು ,ಮೆಣಸಿನ ಒಗ್ಗರಣೆ ನೀಡಬೇಕು.

ಆರೋಗ್ಯ ರಕ್ಷಕ ನಿಂಬೆ ಹಣ್ಣು
ಹೌದು ನಿಂಬೆಹಣ್ಣು ನೋಡಲು ಗಾತ್ರದಲ್ಲಿ ಚಿಕ್ಕದಾಗಿರಬಹುದು ಆದರೆ ಇದರ ಕೆಲಸ ಮಾತ್ರ ಅದ್ಬುತ ಅಂತಲೇ ಹೇಳಬಹುದು ನಿಮಗೆ ಸುಲಭವಾಗಿ ಸಿಗುವಂತ ಈ ನಿಂಬೆ ನಿಮ್ಮ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಸಹಕರಿಸುತ್ತದೆ ಎಂದು ತಿಳಿಯೋಣ…
1.ನಿಂಬೆ ರಸ ,ಈರುಳ್ಳಿ ರಸ ಮತ್ತು ಜೇನು ಬೆರಸಿ ಕುಡಿದರೆ ವಾಂತಿ ಹತೋಟಿಗೆ ಬರುತ್ತದೆ.
2.ನೆಗಡಿ,ಕೆಮ್ಮು,ಕಫ‌ ಇರುವಾಗ ಬಿಸಿ ನೀರಿಗೆ ನಿಂಬೆ ಹಿಂಡಿ,ಕರಿ ಮೆಣಸು ಬೆರಸಿ ಕುಡಿಯುವುದರಿಂದ ನೆಗಡಿ,ಕೆಮ್ಮು,ಕಫ‌ ನಿವಾರಣೆಯಾಗುವುದು.
3.ಬಾಯಿ ಹುಣ್ಣಿಗೆ ನೀರಿನಲ್ಲಿ ನಿಂಬೆ ರಸ ಉಪ್ಪು ಬೆರಸಿ ಬಾಯಿ ಮುಕ್ಕಳಿಸಿದರೆ ಹುಣ್ಣುಗಳು ನಿವಾರಣೆಯಾಗುವುದು.
4. ತುರಿಕೆ ,ಕಜ್ಜಿ ಇರುವ ಭಾಗದಲ್ಲಿ ನಿಂಬೆರಸ,ಅರಸಿನ ಪುಡಿ,ಉಪ್ಪು ಬೆರಸಿ ತಿಕ್ಕಿದರೆ ಪರಿಹಾರ.
5.ನಿಂಬೆ ರಸ,ಉಪ್ಪು ಬೆರಸಿ ಹಲ್ಲು ವಸಡುಗಳನ್ನು ತಿಕ್ಕುವುದರಿಂದ ಹಲ್ಲು ಶುಭ್ರವಾಗುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next