Advertisement

ತೇಲಾಡುವ ಕಾಂಕ್ರೀಟ್‌ ಜೆಟ್ಟಿ ನಿರ್ಮಾಣದ ಯೋಜನೆಯಿದೆ: ವೇದವ್ಯಾಸ ಕಾಮತ್‌

10:43 PM Oct 06, 2019 | Team Udayavani |

ಮಹಾನಗರ: ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಮಂಗಳೂರು ಬಂದರಿನಲ್ಲಿ ಆಧುನಿಕ ತಾಂತ್ರಿಕತೆಯಲ್ಲಿ ತೇಲಾಡುವ ಕಾಂಕ್ರೀಟ್‌ ಜೆಟ್ಟಿ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಶಾಸಕ ಡಿ. ವೇದವ್ಯಾಸ್‌ ಕಾಮತ್‌ ತಿಳಿಸಿದ್ದಾರೆ.

Advertisement

ಮಂಗಳೂರು ಮೀನುಗಾರಿಕಾ ಬಂದರು ಪ್ರದೇಶಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಇಂದಿನ ಆಧುನಿಕತೆಗೆ ಹೊಂದಿಕೊಳ್ಳುವಂತೆ ಸುಮಾರು 6.25 ಕೋಟಿ ರೂ. ವೆಚ್ಚದಲ್ಲಿ ತೇಲಾಡುವ ಕಾಂಕ್ರೀಟ್‌ ಜೆಟ್ಟಿ ನಿರ್ಮಿಸುವ ಯೋಜನೆ ಇದೆ. ಮೀನುಗಾರರ ಹಿತದೃಷ್ಟಿಗೆ ಪೂರಕವಾಗಿರುವ ಈ ಜೆಟ್ಟಿಯು 60 ಮೀಟರ್‌ ಉದ್ದ , 6 ಮೀಟರ್‌ ಅಗಲ 1 ಮೀಟರ್‌ ದಪ್ಪವಾಗಿದ್ದು, ಸುಮಾರು 180 ಟನ್‌ ತೂಕವಿರುತ್ತದೆ. ಮಾತ್ರವಲ್ಲ, 360 ಟನ್‌ ಭಾರವನ್ನು ಸುಲಭವಾಗಿ ಹೊರುವ ಸಾಮರ್ಥ್ಯ ಇದಕ್ಕಿರುತ್ತದೆ ಎಂದರು.

ಟೆಂಪೋಗಳು ಜೆಟ್ಟಿಯ ಮೂಲಕವೇ ಹಾದು ಮೀನುಗಾರಿಕಾ ಬೋಟ್‌ಗಳಲ್ಲಿರುವ ಮೀನುಗಳನ್ನು ತುಂಬಿಸಿಕೊಂಡು ಹೋಗಬಹುದಾದಷ್ಟು ಶಕ್ತಿಯು ತವಾ ಗಿರುತ್ತದೆ. ಮೀನುಗಾರಿಕಾ ಬೋಟುಗಳು ಜೆಟ್ಟಿಯನ್ನು ಸೇರುವ ಸಂಪರ್ಕ ಪ್ರದೇಶದ ಜೆಟ್ಟಿಯ ಸುತ್ತಲೂ ರಬ್ಬರಿನ ಪದರವನ್ನು ಅಳವಡಿಸಲಾಗುತ್ತಿದ್ದು ಬೋಟಿನ ಆವರಣಕ್ಕೆ ಹಾನಿಯಾಗದಂತೆ ತಡೆಗಟ್ಟಲು ಇದು ಸಹಕಾರಿಯಾಗಲಿದೆ ಎಂದರು.

ಈಗಾಗಲೇ ಯೋಜನೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು ಸರಕಾರದಿಂದ ಅನುಮೋದನೆ ದೊರೆತ ತತ್‌ಕ್ಷಣವೇ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಜೆಟ್ಟಿಯ ವಿನ್ಯಾಸಕಾರ ಮಿಲಿಂದರ್‌ ಪ್ರಭು, ಅಮುಲ್‌, ಮೀನುಗಾರರ ಮುಖಂಡರಾದ ನಿತಿನ್‌ ಕುಮಾರ್‌, ರಾಜೇಶ್‌ ಉಳ್ಳಾಲ್‌, ಮೋಹನ್‌ ಬೆಂಗ್ರೆ, ನಿತಿನ್‌ ಬಂಗೇರ, ಇಬ್ರಾಹಿಂ ಬೆಂಗ್ರೆ, ಸಂದೀಪ್‌ ಉಳ್ಳಾಲ್‌, ನವೀನ್‌, ಬಿಜೆಪಿ ಮುಖಂಡರಾದ ಸಂಜಯ್‌ ಪ್ರಭು, ಪ್ರೇಮಾನಂದ ಶೆಟ್ಟಿ, ದಿವಾಕರ್‌ ಪಾಂಡೇಶ್ವರ, ವಸಂತ್‌ ಜೆ. ಪೂಜಾರಿ, ವಿನೋದ್‌ ಮೆಂಡನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಮೀನುಗಾರರಿಗೆ ಸಮಸ್ಯೆಯಿಲ್ಲ
ಜೆಟ್ಟಿಯ ಒಳಗಡೆ ನೀರು, ವಿದ್ಯುತ್‌ ಸಂಪರ್ಕಗಳೂ ಕೂಡ ದೊರೆಯಲಿದೆ. ನೀರಿನ ಮಟ್ಟಕ್ಕೆ ಅನುಗುಣವಾಗಿ ಜೆಟ್ಟಿಯು ತೇಲುತ್ತಿ ರುತ್ತದೆ. ಜೆಟ್ಟಿಯನ್ನು ಬೇರೆಡೆ ಸಿದ್ಧಪಡಿಸಿ ಸಮುದ್ರದ ಮೂಲಕವೇ ತಂದು ಜೋಡಿಸುವುದರಿಂದ ಕಾಮಗಾರಿಯ ಸಂದರ್ಭ ಮೀನುಗಾರರಿಗೆ ಯಾವುದೇ ರೀತಿಯ ಸಮಸ್ಯೆಯೂ ಉದ್ಭವಿಸುವುದಿಲ್ಲ ಎಂದು ಶಾಸಕ ವೇದವ್ಯಾಸ್‌ ಕಾಮತ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next