Advertisement

ವಿಧಾನಪರಿಷತ್‌ ಚುನಾವಣೆ: ನಾಮಪತ್ರಗಳ ಮಹಾಪೂರ

02:12 AM Nov 24, 2021 | Team Udayavani |

ಬೆಂಗಳೂರು: ವಿಧಾನಪರಿಷತ್‌ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಮಂಗಳವಾರ 121 ಅಭ್ಯರ್ಥಿಗಳಿಂದ 215 ನಾಮಪತ್ರಗಳು ಸಲ್ಲಿಕೆಯಾಗಿದ್ದು, ರಾಜಕೀಯ ಚಟುವಟಿಕೆಗಳು ಬಿರುಸಾಗಿವೆ.

Advertisement

ಬೆಳಗಾವಿ ಕ್ಷೇತ್ರದಲ್ಲಿ ಲಖನ್‌ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಅಖಾಡದ ಸ್ವರೂಪವನ್ನೇ ಬದಲಿಸಿದೆ. ಇಲ್ಲಿ ಕಾಂಗ್ರೆಸ್‌ನಿಂದ ಚೆನ್ನರಾಜ್‌ ಹಟ್ಟಿಹೊಳಿ ಕಣಕ್ಕಿಳಿದಿದ್ದಾರೆ.

ನಾಮಪತ್ರ ಸಲ್ಲಿಸಿರುವ 121 ಅಭ್ಯರ್ಥಿಗಳಲ್ಲಿ 119 ಪುರುಷರು ಮತ್ತು ಇಬ್ಬರು ಮಹಿಳೆಯರಿದ್ದಾರೆ. ಬಿಜೆಪಿಯಿಂದ 57, ಕಾಂಗ್ರೆಸ್‌ನಿಂದ 56, ಜೆಡಿಎಸ್‌ನಿಂದ 17, ಇತರ ಪಕ್ಷಗಳಿಂದ 17 ಮತ್ತು 68 ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next