Advertisement

ಪರಿಷತ್‌ ಸಭಾಪತಿ ಸಂಘರ್ಷಕ್ಕೆ ವಿರಾಮ; ಡಿ. 15ರಂದು ಒಂದು ದಿನದ ಕಲಾಪ ನಿಗದಿ

12:28 AM Dec 13, 2020 | mahesh |

ಬೆಂಗಳೂರು: ಅನಿರ್ದಿ ಷ್ಟಾವಧಿಗೆ ಮುಂದೂಡಿಕೆಯಾಗಿದ್ದ ವಿಧಾನ ಪರಿಷತ್‌ ಕಲಾಪವು ಸರಕಾರದ ಸೂಚನೆಯಂತೆ ಡಿ. 15 ರಂದು ಒಂದು ದಿನ ಮತ್ತೆ ನಡೆಯ ಲಿದೆ. ಈ ಮೂಲಕ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಮತ್ತು ಸರ ಕಾರದ ನಡುವಣ ಸಂಘರ್ಷಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ.

Advertisement

ಆದರೆ ಒಂದು ದಿನದ ವಿಶೇಷ ಕಲಾಪದಲ್ಲಿ ಸಭಾಪತಿ ಪದಚ್ಯುತಿ ವಿಚಾರದ ಬಗ್ಗೆ ಚರ್ಚಿಸಲು ಬಿಜೆಪಿ ಉತ್ಸಾಹದಲ್ಲಿದ್ದು, ಕಾಂಗ್ರೆಸ್‌ ಕಾನೂನಾತ್ಮಕ ಹೆಜ್ಜೆ ಇಡಲು ಸಜ್ಜಾಗಿದೆ. ಜೆಡಿಎಸ್‌ ತನ್ನ ತೀರ್ಮಾನ ಏನು ಎಂಬುದನ್ನು ಕಲಾಪದ ಸಂದರ್ಭದಲ್ಲೇ ನಿರ್ಧ ರಿಸುವುದಾಗಿ ಹೇಳಿರುವುದು ಕುತೂಹಲ ಮೂಡಿಸಿದೆ. ಗೋಹತ್ಯೆ ನಿಷೇಧ ಮಸೂದೆ ಮಂಡನೆಯೂ ಮಂಗಳವಾರವೇ ಆಗಲಿದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ವಿಚಾರ ಚರ್ಚೆಗೆ ಬಂದರೆ ಪಕ್ಷದ ಪರಿಷತ್‌ ಸದಸ್ಯರು, ಹಿರಿಯ ನಾಯಕರು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ.
-ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next