Advertisement

ವಿಧಾನಮಂಡಲದ ಜಂಟಿ ಅಧಿವೇಶನ ಫೆ. 6ರಿಂದ

01:12 AM Jan 26, 2019 | Team Udayavani |

ಬೆಂಗಳೂರು: ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಫೆ.6 ರಂದು ಕರೆಯಲು ನಿರ್ಧರಿಸಲಾಗಿದೆ. ಫೆ.6 ರಂದು ಬೆಳಗ್ಗೆ 11 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜೂಭಾಯ್‌ ವಾಲಾ ಭಾಷಣ ಮಾಡಲಿದ್ದಾರೆ.

Advertisement

ಫೆ.7 ರಿಂದ 15ರವರೆಗೆ ಅಧಿವೇಶನ ನಡೆಯಲಿದ್ದು,ಫೆ.8 ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು 2019-20 ನೇ ಸಾಲಿನ ಬಜೆಟ್‌ ಮಂಡಿಸಲಿದ್ದಾರೆ. ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಅಧಿವೇಶನದ ದಿನಾಂಕ ನಿಗದಿ ಕುರಿತು ಚರ್ಚಿಸಿ ಜಂಟಿ ಅಧಿವೇಶನ ಹಾಗೂ ಬಜೆಟ್‌ ಅಧಿವೇಶನಕ್ಕೆ ಒಪ್ಪಿಗೆ ಪಡೆದರು. ನಂತರ, ಅಧಿವೇಶನದ ಕಾರ್ಯಕಲಾಪಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next