ಪೋರ್ಟ್ ಆಫ್ ಸ್ಪೇನ್: ವೇಗಿಗಳ ನಾಡಿನ ಘಾತಕ ಸ್ಪಿನ್ನರ್ ಆಗಿ ಗುರುತಿಸಲ್ಪಟ್ಟಿದ್ದ ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಸೋನಿ ರಾಮಧಿನ್ (92) ನಿಧನ ಹೊಂದಿದರು.
2 ದಿನ ವಿಳಂಬವಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಈ ಸುದ್ದಿಯನ್ನು ಬಿತ್ತರಿಸಿದೆ.
ಟ್ರಿನಿಡಾಡ್ ಆ್ಯಂಡ್ ಟೊಬಾಗೊ ದ್ವೀಪದವರಾದ ಸೋನಿ ರಾಮಧಿನ್ ವೆಸ್ಟ್ ಇಂಡೀಸನ್ನು ಪ್ರತಿನಿಧಿಸಿದ ಮೊದಲ ಈಸ್ಟ್ ಇಂಡಿಯನ್ ಆಟಗಾರನಾಗಿದ್ದರು. ತನ್ನ ಬೌಲಿಂಗ್ ಶೈಲಿಯಲ್ಲಿ ಯಾವುದೇ ಬದಲಾವಣೆ ಮಾಡದೆ ಬಲಗೈ ಆಫ್‌ಬ್ರೇಕ್ ಹಾಗೂ ಲೆಗ್‌ಬ್ರೇಕ್ ಎಸೆತಗಳನ್ನು ಎಸೆಯುತ್ತಿದುದ್ದದು ಇವರ ವೈಶಿಷ್ಟ್ಯವಾಗಿತ್ತು.
ಇದನ್ನೂ ಓದಿ:ಸೋದರ ಸಂಬಂಧಿ ಇಬ್ಬರು ರಸ್ತೆ ಅಪಘಾತದಲ್ಲಿ ಸಾವು
43 ಟೆಸ್ಟ್‌ಗಳಿಂದ 158 ವಿಕೆಟ್ ಕೆಡವಿದ ಸಾಧನೆ ರಾಮಧಿನ್ ಅವರದು. 72 ವರ್ಷಗಳ ಹಿಂದೆ ಐತಿಹಾಸಿಕ ಲಾರ್ಡ್ಸ್‌ನಲ್ಲಿ ವೆಸ್ಟ್ ಇಂಡೀಸ್ ರಾಮಧಿನ್ ಸಾಹಸದಿಂದಲೇ ಮೊದಲ ಸಲ ಇಂಗ್ಲೆಂಡಿಗೆ ಟೆಸ್ಟ್ ಸೋಲುಣಿಸಿತ್ತು. ಆ ಪಂದ್ಯದಲ್ಲಿ ಇವರು 152 ರನ್ ವೆಚ್ಚದಲ್ಲಿ 11 ವಿಕೆಟ್ ಉಡಾಯಿಸಿದ್ದರು.