Advertisement

ನೆಲದ ಕಾನೂನು ಗೌರವಿಸುವುದು ನಮ್ಮ ಕರ್ತವ್ಯ: ಕಲ್ಪನಾ ಕಿವಿಮಾತು

03:51 PM Nov 11, 2020 | Suhan S |

ಚನ್ನಪಟ್ಟಣ: ಪ್ರತಿಯೊಬ್ಬರು ಈ ದೇಶದ ಕಾನೂನುಗಳಿಗೆ ಗೌರವ ಕೊಡುವುದರ ಜೊತೆಗೆ ದಿನ ನಿತ್ಯದ ಬದುಕಿಗೆ ಅವಶ್ಯರುವ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹಿರಿಯ ಸಿಲ್‌ ನ್ಯಾಯಾಧೀಶೆ ಯಾರಮಾಲ್‌ ಕಲ್ಪನಾ ಹೇಳಿದರು.

Advertisement

ನ್ಯಾಯಾಲಯದ ವಿ.ಸಿ.ಹಾಲ್‌ನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆಯ ಕಾನೂನು ಅರಿವು ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಅವರು ಮಾತನಾಡಿದರು.

ನಾವು ದೇಶದ ಕಾನೂನುಗಳನ್ನು ಗೌರವಯುತವಾಗಿ ಪಾಲಿಸಬೇಕು. ಕಾನೂನನ್ನು ಉಲ್ಲಂಘನೆ ಮಾಡಿ ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಟಿಮಾಡಿದರೆ ಅಪರಾಧವಾಗುತ್ತದೆ ಎಂದು ಎಚ್ಚರಿಸಿದರು. ಕಾನೂನು ಕಾನೂನಿನ ಸಮಗ್ರ ಅರಿವು ಹಾಗೂ ಕಾನೂನಿನಲ್ಲಿರುವ ಅಂಶಗಳ ಬಗ್ಗೆ ಹಲವಾರು ರೀತಿಯ ತಿಳಿವಳಿಕೆಗಳನ್ನು ದೃಶ್ಯ ಮಾಧ್ಯಮದ ಮುಖಾಂತರ ಬಿತ್ತರಿಸುತ್ತಿದ್ದು, ಇದರ ಉಪಯೋಗವನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಪ್ರಧಾನ ಸಿವಿಲ್‌ ನ್ಯಾಯಾಧೀಶ ಮಹೇಂದ್ರ ಎಂ., ಸರ್ಕಾರಿ ಅಭಿಯೋಜಕ ವೀರಭದ್ರಯ್ಯ, ವಕೀಲರ ಸಂಘದ ಕಾರ್ಯದರ್ಶಿ ಶಿವರಾಜ್‌, ತಾಪಂ ಸಹಾಯಕ ನಿರ್ದೇಶಕ ಲೋಕೇಶ್‌ ಹಾಗೂ ಹಲವಾರು ಮಂದಿ ಹಾಜರಿದ್ದರು.

ಬೇಡ ಪಟಾಕಿ ಬೀದಿ ನಾಟಕಪ್ರದರ್ಶನ :

Advertisement

ಚನ್ನಪಟ್ಟಣ: ನಮ್ಮ ಮತ್ತು ಸಮಾಜದಸಂತೋಷಕ್ಕಾಗಿ ಹಬ್ಬಗಳನ್ನು ಆಚರಿಸಬೇಕು. ಆದರೆ, ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹಾಗೂ ಪರಿಸರದ ಮೇಲೆ ಗಂಭೀರ ಸ್ವರೂಪದ ದುಷ್ಪರಿಣಾಮ ಬೀರುವ ಪಟಾಕಿ ತ್ಯಜಿಸುವುದೇ ಸೂಕ್ತ ಮಾರ್ಗ ಎಂದು ಸಾಹಿತಿ ವಿಜಯ್‌ ರಾಂಪುರ ತಿಳಿಸಿದರು.

ತಾಲೂಕಿನ ಸಣಬನಹಳ್ಳಿ ಗ್ರಾಮದಲ್ಲಿ, ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ “ಬೇಡ ಪಟಾಕಿ’ ಎಂಬ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಈ ವಿಲಕ್ಷಣ ಕೊರೊನಾ ವೈರಸ್‌ ಇರುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಮನುಷ್ಯರು, ಪಶು ಪಕ್ಷಿಗಳಿಗೂ ಮಾರಕವಾದ ಪಟಾಕಿಗಳನ್ನು ಸಂಪೂರ್ಣ ತ್ಯಜಿಸುವ ಸಂಕಲ್ಪ ಮಾಡಬೇಕು. ದೃಷ್ಟಿ ಹೀನತೆ, ಅಂಗವೈಕಲ್ಯ, ಬೆಂಕಿ ಅನಾಹುತ, ವಾಯು ಮತ್ತು ಶಬ್ದ ಮಾಲಿನ್ಯ ತಡೆಯಲು ಸರ್ವರೂ ಕೈಜೋಡಿಸಿ ಎಂದು ಸಣಬನಹಳ್ಳಿ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.

ಅನಾಹುತ: ಅಂಗನವಾಡಿ ಕಾರ್ಯಕರ್ತೆ ಲೋಲಾಕ್ಷಿ ಮಾತನಾಡಿ, ಮಕ್ಕಳಿಗೆ ಪಟಾಕಿಸುಡುವುದರಿಂದ ಆಗುವ ಅನಾಹುತಗಳನ್ನು ಪೋಷಕರು ಮನವರಿಕೆ ಮಾಡಿಕೊಡಬೇಕು ಎಂದರು. ಆರೋಗ್ಯ ಜಾಗೃತಿ ಮೂಡಿಸುವ ಗೀತೆಗಳನ್ನು ಹಾಡಲಾಯಿತು.

ಈ ಸಂದರ್ಭದಲ್ಲಿ ಜಾನಪದ ಗಾಯಕ ಚೌ.ಪು.ಸ್ವಾಮಿ, ಯುವಕವಿ ಯೋಗೇಶ್‌ ದ್ಯಾವಪಟxಣ, ಸಣಬನಹಳ್ಳಿ ಗ್ರಾಮಸ್ಥರಾದ ಎಸ್. ಮಧು, ಆಶಾ ಕಾರ್ಯಕರ್ತೆ ಗೀತಾ, ಕರಿಯಪ್ಪ, ರಾಜೇಶ್, ಸಂಜಯ್, ಪ್ರಜ್ವಲ್, ಚೇತನ್‌, ಲಾವಣ್ಯ, ಕಲಾ, ರಕ್ಷಿತಾ, ಕುಮಾರ್‌ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next