ಶ್ರೀನಿವಾಸಪುರ: ತಾಲೂಕಾದ್ಯಂತ ಶುಕ್ರವಾರದಿಂದ 17 ರವರಿಗೆ 4 ದಿನಗಳ ಕಾಲ 12 ಸ್ಥಳಗಳಲ್ಲಿ ಇಲಾಖೆ ಮತ್ತು ತಾಪಂ ಸಂಯೋಜನೆಯೊಂದಿಗೆ ಹಮ್ಮಿಕೊಂಡಿರುವ ಕಾನೂನು ಸಾಕ್ಷರಥಾ ರಥ ಮತ್ತು ಜನತಾ ನ್ಯಾಯಾಲಯ ಜಾಗೃತಿ ಕಾರ್ಯಕ್ರಮಕ್ಕೆ ನ್ಯಾಯಾಲಯ ಆವರಣದಲ್ಲಿ ಜೆಎಂಎಫ್ ನ್ಯಾಯಾ ಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ಆರ್.ದೇವರಾಜು ಚಾಲನೆ ನೀಡಿದರು.
ತಾಲೂಕಾದ್ಯಂತ ವಿವಿಧ ಗ್ರಾಮಗಳಲ್ಲಿ 4 ದಿನಗಳ ಕಾಲ ಹಮ್ಮಿಕೊಂಡಿರುವ ಜಾಗೃತಿ ಕಾರ್ಯಕ್ರಮದ ರಥೋತ್ಸವಕ್ಕೆ ನ್ಯಾಯಾಲಯದ ಅವರಣದಲ್ಲಿ ಚಾಲನೆ ಪಡೆದುಕೊಂಡು ಪ್ರಥಮ ಕಾರ್ಯಕ್ರಮವಾಗಿ ಪಟ್ಟಣದ ಕರ್ನಾಟಕ ಮಾದರಿ ಪ್ರೌಢ ಶಾಲೆಯಲ್ಲಿ ಫೋಕ್ಸೋ ಕಾಯಿದೆ ಹಾಗೂ ಬಾಲ್ಯ ವಿವಾಹ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು. ಶಾಲೆಯ ಮುಖ್ಯ ಶಿಕ್ಷಕರಾದಎಂ.ಬೈರೇಗೌಡ ಅಧ್ಯಕ್ಷತೆ ವಹಿಸಿದ್ದರು. ಜೆ
ಎಂಎಫ್ ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ಆರ್. ದೇವರಾಜು,ಅಪರ ಸಿವಿಲ್ ನ್ಯಾಯಾಧೀಶ ನಾಗೇಶ್ ನಾಯಕ್, ವಕೀಲರ ಸಂಘದ ಅಧ್ಯಕ್ಷ ಎನ್.ವಿ. ಜಯ ರಾಮೇಗೌಡ, ಹಿರಿಯ ವಕೀಲರಾದ ಕೆ .ಶಿವಪ್ಪ, ಟಿ.ವೆಂಕಟೇಶ್, ಜೆ.ಎನ್. ಶಂಕರಪ್ಪ ನಾಯಕ, ಸಿಪಿಐ ರಾಘವೇಂದ್ರ ಪ್ರಕಾಶ್, ವಕೀಲ ರಾಜಗೋಪಾಲ್, ಕೆ.ನಾಗರಾಜಪ್ಪ ಇತರರು ಇದ್ದರು. ಯಲ್ದೂರು ನ್ಯಾಷನಲ್ ಹೈಸ್ಕೂಲ್‌ನಲ್ಲಿ ಶಾಲಾ ಮುಖ್ಯೋಪಾಧ್ಯಾಯ ಕೆ.ಪ್ರಕಾಶಯ್ಯ ಅವರ ಅಧ್ಯಕ್ಷತೆಯಲ್ಲಿ ಸ್ವಚ್ಛ ಭಾರತ್ ಹಾಗೂ ಜನನ ಮರಣ ಉಪನ್ಯಾಸದಲ್ಲಿ ಅಪರ ಸಿವಿಲ್ ನ್ಯಾಯಾಧೀಶ ನಾಗೇಶ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ಆರ್. ದೇವ ರಾಜು, ವಕೀಲರ ಸಂಘದ ಅಧ್ಯಕ್ಷ ಎನ್.ವಿ. ಜಯ ರಾಮೇಗೌಡ, ರೂಪಾವತಿ, ಟಿ. ವೆಂಕಟೇಶ್ ಉಪಸ್ಥಿತರಿದ್ದರು. ಯಲ್ದೂರು ಹೋಬಳಿ ವ್ಯಾಪ್ತಿಯ ಮುತ್ತಕಪಲ್ಲಿ ಸರ್ಕಾರಿ ಪ್ರೌಢಶಾಲೆ ಆವರಣ ದಲ್ಲಿ ಶಾಲೆ
ಮುಖ್ಯೋಪಾಧ್ಯಾಯರಾದ ರೋಸ್ಲಿನ್ ಸತ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರವನ್ನು ಜೆಎಂಎಫ್ ಪ್ರಧಾನ ಸಿವಿಲ್ ನ್ಯಾಯಾಧೀಶ ದೇವರಾಜು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ಭ್ರೂಣ ಹತ್ಯೆ , ಜೀವನಾಂಶ ಉಪನ್ಯಾಸ ನೀಡಲಾಯಿತು.