Advertisement

ಕಾರಾಗೃಹ ವಾಸ ಶಾಶ್ವತವಲ್ಲ

07:02 PM Dec 12, 2020 | Suhan S |

ಹಾವೇರಿ: ಯಾವುದೋ ಕೆಟ್ಟ ಗಳಿಗೆಯಲ್ಲಿ ನಡೆದ ತಪ್ಪಿನಿಂದ ಇಂದು ನೀವು ಕಾರಾಗೃಹದಲ್ಲಿ ಇರುವಂತಾಗಿದೆ. ಕಾರಾಗೃಹ ವಾಸ ಶಾಶ್ವತವಲ್ಲ. ಹಾಗಾಗಿ, ತಪ್ಪನ್ನು ತಿದ್ದಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಿ ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾ ಧೀಶ ಕಿರಣ ಕಿಣಿ ಹೇಳಿದರು.

Advertisement

ನಗರದ ಜಿಲ್ಲಾ ಕಾರಾಗೃಹದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಕಾರಾಗೃಹ ಸಹಯೋಗದಲ್ಲಿ ನಡೆದ ವಿಚಾರಣಾಧೀನ ಕೈದಿಗಳಿಗೆ ವಿಚಾರಣಾ ಮನವಿ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಮಾನವ ಹಕ್ಕುಗಳ ದಿನಾಚರಣೆ ಆಚರಿಸಲಾಗುತ್ತಿದೆ. ಮಾನವ ಹಕ್ಕುಗಳ ದಿನ ಜಗತ್ತಿನ ಎಲ್ಲ ಮಾನವ ಕುಲಕ್ಕೆ ಸೇರಿದ ದಿನವಾಗಿದೆ. ಯಾವುದೇ ಕಾನೂನು ಹಕ್ಕುಗಳನ್ನು ನೀಡಿಲ್ಲ. ಆದರೆ ಕಾನೂನು ಹಕ್ಕುಗಳ ರಕ್ಷಣೆ ಮಾಡುತ್ತಿದೆ. ಮಾನವಹಕ್ಕುಗಳು ಒಬ್ಬ ಮನುಷ್ಯ ಜೀವಿಸಲು ಬೇಕಾದ ಅಗತ್ಯ ಹಕ್ಕುಗಳ ಸಮುತ್ಛಯವಾಗಿದೆ. ಜೀವಿಸುವ ಹಕ್ಕು, ರಕ್ಷಣೆ ಹಕ್ಕು, ವಾಕ್‌ ಸ್ವಾತಂತ್ರ್ಯ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯದಹಕ್ಕುಗಳು ನೈಸರ್ಗಿಕ ಹಕ್ಕುಗಳಾಗಿವೆ ಎಂದು ಹೇಳಿದರು. ಕಾರಾಗೃಹದಲ್ಲಿ ನಿಮಗೆ ಸ್ವತಂತ್ರವಾಗಿ ಓಡಾಡುವ ಹಕ್ಕು ಇಲ್ಲದೆ ಇರಬಹುದು. ಆದರೆ ನಿಮ್ಮ ಜೀವನಕ್ಕೆ ಬೇಕಾದ ಆಹಾರ, ಆರೋಗ್ಯ ಸೇರಿದಂತೆ ಇತರೆ ಸೌಲಭ್ಯ ಪಡೆಯುವ ಹಕ್ಕು ನಿಮಗಿದೆ. ಬೇರೆಯವರಹಕ್ಕುಗಳಿಗೆ ತೊಂದರೆಯಾಗದಂತೆ ನಮ್ಮ ಹಕ್ಕುಗಳನ್ನು ಚಲಾಯಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಬಿ.ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆ.ಶ್ರೀವಿದ್ಯಾ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ, ಕಾರ್ಯದರ್ಶಿ ಪಿ.ಎಂ.ಬೆನ್ನೂರ ಉಪಸ್ಥಿತರಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್‌ ವಕೀಲರಾದ ಎಚ್‌.ಎಂ.ಬಾರ್ಕಿ ಅವರು ವಿಚಾರಣಾಧಿಧೀನ ಕೈದಿಗಳ ಹಕ್ಕುಗಳು ಮತ್ತು ವಿಚಾರಣಾ ಮನವಿ ಕುರಿತು ಉಪನ್ಯಾಸ ನೀಡಿದರು.

Advertisement

ಯಾವುದೇ ಕಾನೂನು ಹಕ್ಕುಗಳನ್ನು ನೀಡಿಲ್ಲ. ಆದರೆ ಕಾನೂನು ಹಕ್ಕುಗಳ ರಕ್ಷಣೆ ಮಾಡುತ್ತಿದೆ.ಮಾನವ ಹಕ್ಕುಗಳು ಒಬ್ಬ ಮನುಷ್ಯ ಜೀವಿಸಲು ಬೇಕಾದ ಅಗತ್ಯ ಹಕ್ಕುಗಳ ಸಮುಚ್ಚಯವಾಗಿದ್ದು, ಬೇರೆಯವರ ಹಕ್ಕುಗಳಿಗೆ ತೊಂದರೆಯಾಗದಂತೆ ನಮ್ಮ ಹಕ್ಕುಗಳನ್ನು ಚಲಾಯಿಸಬೇಕು. -ಕಿರಣ ಕಿಣಿ, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು

Advertisement

Udayavani is now on Telegram. Click here to join our channel and stay updated with the latest news.

Next