Advertisement
ಗದಗ ಜಿಲ್ಲಾ ಪೊಲೀಸ್ ಪ್ರಕಟಣೆ ಅಂತಾ ನಮೂದಿಸಿ “ಯಾರಾದರೂ ಮನೆ ಹತ್ರ ಬಂದು ನಾವು ಸರ್ಕಾರಿ ಆಸ್ಪತ್ರೆಯಿಂದ ಬಂದಿದ್ದೇವೆ, ಇನ್ಸುಲಿನ್, ವಿಟ್ಯಾಮಿನ್ ಇಂಜೆಕ್ಷನ್ ಮಾಡ್ತಿವಿ ಅಂತಾ ಹೇಳಿದರೆ ನಂಬಬೇಡಿ, ನಂಬಿ ಆತುರಪಟ್ಟು ಮಾಡಿಸಿಕೊಳ್ಳದಿರಿ, ಜಿಹಾದಿ ಟೆರರಿಸ್ಟ್ ಗಳು ಈ ರೀತಿ ಯಾಮಾರಿಸಿ ಹಿಂದುಗಳಿಗೆ ಏಡ್ಸ್ ಇಂಜೆಕ್ಷನ್ ಮಾಡುತ್ತಿದ್ದಾರಂತೆ. ಜಾಗ್ರತೆಯಿಂದಿರಿ ನಿಮಗೆ ಸಂಬಂಧಿಸಿದ ಎಲ್ಲ ಗ್ರೂಪ್ ಗಳಿಗೆಕಳುಹಿಸಿ ಅಮಾಯಕರ ಪ್ರಾಣ ಉಳಿಸಿ. ಇಂತಿ ನಿಮ್ಮ ಸೋಮೇಶ ಗೆಜ್ಜೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಗದಗ ಜಿಲ್ಲೆ ಅಂತಾ ವಿಷಯ ಹರಿದಾಡುತ್ತಿದೆ. ಇದು ಪೊಲೀಸ್ ಪ್ರಕಟಣೆಯಲ್ಲ. ಇಂತಹ ಸುಳ್ಳು ಸುದ್ದಿಯನ್ನು ಶೇರ್ ಮಾಡುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ತಿಳಿಸಿದ್ದಾರೆ. Advertisement
ವದಂತಿ ಹರಡಿದರೆ ಕಾನೂನು ಕ್ರಮ: ಎಸ್ಪಿ
05:20 PM Apr 17, 2020 | Suhan S |
Advertisement
Udayavani is now on Telegram. Click here to join our channel and stay updated with the latest news.