Advertisement

ವೈವಾಹಿಕ ಜೀವನದಲ್ಲಿ ಎಡರುತೊಡರುಗಳು ಸಾಮಾನ್ಯ: ಶ್ರೀ ರಾಜಶೇಖರಾನಂದ ಸ್ವಾಮೀಜಿ

09:43 PM May 05, 2019 | Team Udayavani |

ಗುರುಪುರ: ವೈವಾಹಿಕ ಜೀವನ ಎಂದಾಗ ಅನೇಕ ಎಡರುತೊಡರುಗಳು ಬರುವುದು ಸಾಮಾನ್ಯ. ಆದರೆ ಐವತ್ತು ವರ್ಷಗಳ ಕಾಲ ಗಂಡ- ಹೆಂಡತಿ ಯಾವ ರೀತಿ ಆದರ್ಶ ಜೀವನ ನಡೆಸಿದ್ದಾರೆ ಎನ್ನುವುದಕ್ಕೆ ಎಂ. ನರಸಿಂಗ ರೈ ಹಾಗೂ ಭಾರತ್‌ ಜ್ಯೋತಿ ರೈ ಸಾಕ್ಷಿಯಾಗಿದ್ದು, ಇಂದಿನ ಪೀಳಿಗೆಗೆ ಅವರು ಮಾದರಿಯಾಗಿದ್ದಾರೆ. ಇವರ ವೈವಾಹಿಕ ಜೀವನ ಇನ್ನಷ್ಟು ಚೆನ್ನಾಗಿರಲಿ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾರೈಸಿದರು.

Advertisement

ಅವರು ಮುಂಡಬೆಟ್ಟುಗುತ್ತು ನರಸಿಂಹ ರೈ ಕಿನ್ನಿಕಂಬಳ ದಂಪ ತಿಯ ವಿವಾಹ ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ಕಿನ್ನಿಕಂಬಳದ ಶ್ರೀ ರಾಧಾಕೃಷ್ಣ ಭಜನ ಮಂದಿರದಲ್ಲಿ ರವಿ ವಾರ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದರು.

ಇಂದಿನ ಪೀಳಿಗೆಯ ದಾಂಪತ್ಯ ವಿಚ್ಛೇದನದಲ್ಲಿ ಅಂತ್ಯಗೊಳ್ಳುತ್ತದೆ ಎನ್ನುವುದು ಖೇದಕರ. ದಾಂಪತ್ಯದ ಗುಟ್ಟೇನೆಂದರೆ ಭಯ ಹಾಗೂ ಉಭಯ ಕುಶಲೋಪರಿ. ಆದರೆ ನಾವು ಸನ್ಯಾಸ ಜೀವನದಲ್ಲಿದ್ದೇವೆ. ಸನ್ಯಾಸಿಗಳು ದಾಂಪತ್ಯದ ಬಗ್ಗೆ ಮಾತಾಡಿದರೆ ಅರ್ಥ ಬರುವುದಿಲ್ಲ. ಆದರೆ ಸನ್ಯಾಸಿಗಳಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿ ಇದೆ ಎಂದರು.

ವಿಜ್ಞಾನಿ, ನಾಡೋಜ ಪ್ರೊ| ಕಿನ್ನಿಕಂಬಳ ಪದ್ಮನಾಭ ರಾವ್‌ ಮಾತನಾಡಿ, ನರಸಿಂಹ ರೈ ಅವರ ಜೀವನದ ಮಜಲುಗಳ ಬಗ್ಗೆ ವಿವರಿಸಿ, ಅವರ ತಂದೆ ದೇಜು ರೈ ಬಗ್ಗೆ ಮಾಹಿತಿ ನೀಡಿದರು.

ವೈದ್ಯರಾದ ಡಾ| ಶ್ರೀಪತಿ ಕಿನ್ನಿಕಂಬಳ ಅವರು ಅಭಿನಂದನಾ ಭಾಷಣ ಮಾಡಿದರು. ದಂಪತಿ ಪುತ್ರ ನೀರಜ್‌ ಹಾಗೂ  ಪುತ್ರಿ ನಿಖೀತಾ ಅವರು ತನ್ನ ಹೆತ್ತವರಿಗೆ ಹಾರ ಹಾಕಿ ಪಾದಕ್ಕೆ ನಮಸ್ಕರಿಸಿದರು.

Advertisement

ಕಾ ರ್ಯಕ್ರಮದಲ್ಲಿ ಕಿನ್ನಿಕಂಬಳ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶತಾಯುಷಿ ಎಂ. ಆನಂದ ಆಳ್ವ ಮಿಜಾರುಗುತ್ತು, ಮಂಡಬೆಟ್ಟುಗುತ್ತು ಯಜಮಾನರು ಎಂ. ಗಂಗಾಧರ  ರೈ ಮುಂತಾದವರು ಉಪಸ್ಥಿತರಿದ್ದರು.

ನವನೀತ್‌ ಶೆಟ್ಟಿ ಕದ್ರಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹರಿನಾಮ ಸಂಕೀರ್ತನೆ, ಆರಾಧನೆ, ಪ್ರಸಾದ ವಿತರಣೆ, ಪುಸ್ತಕ ಬಿಡುಗಡೆ ಸಮಾರಂಭ, ಸಹಭೋಜನ, ಶ್ರೀವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಕೇಂದ್ರ ಮಂಜನಾಡಿ ಇದರ ಬಾಲಕಲಾವಿದರಿಂದ “ಮೈಮೆದ ಬಾಲೆ ಸಿರಿಕೃಷ್ಣ’ ಯಕ್ಷಗಾನ ಪ್ರದರ್ಶನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next