Advertisement

ಮತ್ತೆ ಬಣ್ಣ ಹಚ್ಚುತ್ತಿದ್ದಾರೆ ಹಿರಿಯ ನಟಿ ಲೀಲಾವತಿ

05:53 AM Feb 06, 2019 | |

ಕಳೆದ ಒಂದು ದಶಕದಿಂದ ಚಿತ್ರರಂಗದಲ್ಲಿ ಯಾವುದೇ ಪಾತ್ರಗಳಿಗೆ ಬಣ್ಣ ಹಚ್ಚದೆ ದೂರವುಳಿದಿದ್ದ ಹಿರಿಯ ನಟಿ ಲೀಲಾವತಿ ಈಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪ್ರಥಮ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ “ನಟ ಭಯಂಕರ’ ಚಿತ್ರದಲ್ಲಿ ಲೀಲಾವತಿ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದು, ಲೀಲಾವತಿ ಅವರ ಪಾತ್ರದ ಚಿತ್ರೀಕರಣ ಇದೇ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ.

Advertisement

ಈ ಬಗ್ಗೆ ಮಾತನಾಡುವ ನಟ ಪ್ರಥಮ್‌, “ಆರಂಭದಲ್ಲಿ ಲೀಲಾವತಿ ಮತ್ತು ಅವರ ಪುತ್ರ ವಿನೋದ್‌ ರಾಜ್‌ ಅಭಿನಯಿಸಲು ಒಪ್ಪಿರಲಿಲ್ಲ. ಆದರೆ ಚಿತ್ರದ ಪಾತ್ರಕ್ಕೆ ಅವರನ್ನೇ ಕರೆತರಬೇಕು ಎಂಬ ನಮ್ಮ ಹಠಕ್ಕೆ  ಕೊನೆಗೂ ಇಬ್ಬರೂ ಒಪ್ಪಿಗೆ ನೀಡಿದರು. ಸದ್ಯ “ನಟ ಭಯಂಕರ’ ಚಿತ್ರ ಕೊನೆಯ ಹಂತದ ಚಿತ್ರೀಕರಣದಲ್ಲಿದೆ’ ಎಂದಿದ್ದಾರೆ.  

ಸುಮಾರು ಐದು ದಶಕಗಳ ಕಾಲ ಬೆಳ್ಳಿತೆರೆ ಮೇಲೆ ಮಿಂಚಿದ್ದ ಲೀಲಾವತಿ ನಂತರ ತಮ್ಮ ವಯೋ ಸಹಜ ಆರೋಗ್ಯ ಸಮಸ್ಯೆಯಿಂದಾಗಿ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದರು. 2009ರಲ್ಲಿ ತೆರೆಕಂಡ “ಯಾರದು’ ಚಿತ್ರದ ನಂತರ ಲೀಲಾವತಿ ಯಾವುದೇ ಚಿತ್ರಕ್ಕೆ ಬಣ್ಣಹಚ್ಚಿರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next