ನವದೆಹಲಿ: ಎಲ್ ಇಡಿ, ಎಲ್ ಸಿಡಿ ಟಿವಿಗಳ ತಯಾರಿಕೆಗೆ ಬಳಸುವ ಪ್ರಮುಖ ಭಾಗಗಳ ಆಮದು ವಸ್ತುವಿನ ಮೇಲೆ ಶೇ.5ರಷ್ಟು ಕಸ್ಟಮ್ಸ್ ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 1 (2020)ರಿಂದ ಎಲ್ಇಡಿ, ಎಲ್ ಸಿಡಿ ಟಿವಿಗಳ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ವರದಿ ತಿಳಿಸಿದೆ.
ದೇಶೀಯ ಬಿಡಿ ಭಾಗಗಳ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದ ಇಂಡಸ್ಟ್ರಿ ಹೆಚ್ಚಿನ ಸಮಯಾವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರಿಂದ ಕೇಂದ್ರ ಸರ್ಕಾರ ಕಳೆದ ವರ್ಷ ಆಮದು ಸುಂಕಕ್ಕೆ ಸೆಪ್ಟೆಂಬರ್ 30ರವರೆಗೆ ವಿನಾಯ್ತಿ ನೀಡಿತ್ತು.
ವಿತ್ತ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಎಲ್ ಇಡಿ, ಎಲ್ ಸಿಡಿ ಟಿವಿ ಪ್ಯಾನೆಲ್ ಗಳ ಮೇಲೆ ಶೇ.5ರಷ್ಟು ಆಮದು ಸುಂಕ ವಿಧಿಸಲಾಗುವುದು ಎಂದು ತಿಳಿಸಿದೆ. ಇವೈ ಟ್ಯಾಕ್ಸ್ ಪಾರ್ಟನರ್ ಅಭಿಷೇಕ್ ಜೈನ್ ಪ್ರಕಾರ, ಆಮದು ಸುಂಕದ ಮುಖ್ಯ ಉದ್ದೇಶ ಭಾರತದಲ್ಲಿ ಟೆಲಿವಿಷನ್ಸ್ ಬಿಡಿಭಾಗಗಳ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕದನವಿರಾಮ ಉಲ್ಲಂಘನೆ; ಪಾಕ್ ಸೇನಾ ಪಡೆ ದಾಳಿಗೆ ಮೂವರು ಯೋಧರು ಹುತಾತ್ಮ
ಆದರೆ ಬಿಡಿ ಭಾಗಗಳ ಮೇಲಿನ ಆಮದು ಸುಂಕದಿಂದಾಗಿ ಕೆಲವು ಟಿವಿ ತಯಾರಕರಿಗೆ ಹೆಚ್ಚಿನ ಹೊರೆಯಾಗಲಿದೆ.ದೇಶೀಯವಾಗಿ ಬಿಡಿಭಾಗಗಳ ಉತ್ಪಾದನೆ ಆರಂಭಿಸಿದರೆ ಟಿವಿಗಳ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ಹೇಳಿದರು.
ಕಳೆದ ವರ್ಷದವರೆಗೆ ಬರೋಬ್ಬರಿ 7 ಸಾವಿರ ಕೋಟಿ ರೂಪಾಯಿಯಷ್ಟು ಬಿಡಿಭಾಗಗಳು ಆಮದಾಗಿದೆ. ಈ ವರ್ಷದ ಜುಲೈ ನಂತರ ಅನ್ವಯವಾಗುವಂತೆ ಟೆಲಿವಿಷನ್ ಆಮದು ಕೂಡಾ ನಿರ್ಬಂಧಿತ ಕೆಟಗರಿಯಲ್ಲಿ ಕೇಂದ್ರ ಸರ್ಕಾರ ಸೇರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: ಗುಡ್ ನ್ಯೂಸ್: ಕೋವಿಡ್ ಸೋಂಕು-ಭಾರತದಲ್ಲಿ 53 ಲಕ್ಷ ಮಂದಿ ಗುಣಮುಖ: ಸಚಿವಾಲಯ