Advertisement

ಟಾಟಾ ಸನ್ಸ್‌ಗೆ ಚಂದ್ರಶೇಖರನ್‌ ಸಾರಥ್ಯ

03:45 AM Feb 22, 2017 | Team Udayavani |

ಮುಂಬೈ: 100ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಟಾಟಾ ಸನ್ಸ್‌ ಲಿಮಿಟೆಡ್‌ಗೆ ಮಂಗಳವಾರ ನೂತನ ಅಧ್ಯಕ್ಷರಾಗಿ ಎನ್‌. ಚಂದ್ರಶೇಖರನ್‌ ಅಧಿಕಾರ ಸ್ವೀಕರಿಸಿದ್ದಾರೆ.

Advertisement

ಟಾಟಾ ಸಮೂಹದ ಒಂದು ಸಂಸ್ಥೆಗೆ ಹೊರಗಿನ ವ್ಯಕ್ತಿ ಸಾರಥ್ಯ ವಹಿಸಿರುವುದು ಇದೇ ಮೊದಲು. 53 ವರ್ಷದ ಚಂದ್ರಶೇಖರನ್‌ ಈ ಹಿಂದೆ ಟಿಸಿಎಸ್‌ನ ಸಿಇಒ ಮತ್ತು ಎಂಡಿ ಆಗಿದ್ದರು. “ಟಾಟಾ ಸಮೂಹದ ಬೇರೆ ಉದ್ಯಮಗಳ ಜೊತೆಗೆ ನಾವೂ ಹೆಜ್ಜೆ ಇಡುತ್ತೇವೆ. ಟಾಟಾ ಸಮೂಹ 150ನೇ ವರ್ಷದ ಸಂಭ್ರಮದಲ್ಲಿದೆ. ಸನ್ಸ್‌ಗೆ 100ನೇ ಹುಟ್ಟುಹಬ್ಬ. ಇಂಥ ಶುಭ ಸಂದರ್ಭದಲ್ಲಿ ಅಧ್ಯಕ್ಷ ಹುದ್ದೆ ನನಗೆ ಸಿಕ್ಕಿರುವುದು ವಿಶೇಷ ಸ್ವಾತಂತ್ರ ಎಂದೇ ಭಾವಿಸುವೆ. ನಾವು ನಮ್ಮದೇ ದೃಷ್ಟಿಕೋನದಲ್ಲಿ ಉದ್ಯಮವನ್ನು ಮುನ್ನಡೆಸುತ್ತೇವೆ. ಯಾರನ್ನೂ ಅನುಸರಿಸುವುದಿಲ್ಲ’ ಎಂದು ಎನ್‌. ಚಂದ್ರಶೇಖರನ್‌ ಹೇಳಿದ್ದಾರೆ. ನೂತನ ಅಧ್ಯಕ್ಷರು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಮುಂಬೈನ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಡಳಿತ ಮಂಡಳಿ ಸಭೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next