Advertisement

ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಆಗ್ರಹ

02:42 PM Dec 01, 2019 | Team Udayavani |

ಚಿಕ್ಕಮಗಳೂರು: ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರಿಗೆ ಸಕಾಲಕ್ಕೆ ಸಂಬಳ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಅವರನ್ನು ಭೇಟಿ ಮಾಡಿದ ಸಂಘದಪದಾಧಿಕಾರಿಗಳು, ಪಿಯು ಕಾಲೇಜುಗಳಪ್ರಾಚಾರ್ಯರು ಮತ್ತು ಉಪನ್ಯಾಸಕರು ಈ ಸಂಬಂಧ ಮನವಿ ಸಲ್ಲಿಸಿದರು.

Advertisement

ಕಳೆದ 2 ತಿಂಗಳಿನಿಂದ ವೇತನ ನೀಡದಹಿನ್ನೆಲೆಯಲ್ಲಿ ಅದನ್ನೇ ನಂಬಿರುವ ಪ್ರಾಚಾರ್ಯರು ಮತ್ತು ಉಪನ್ಯಾಸಕರುಜೀವನ ನಿರ್ವಹಣೆ ಮಾಡಲಾಗದೆ ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗರಾಜ್ಯ ಸರ್ಕಾರ ಮತ್ತು ಪಿಯು ಇಲಾಖೆತುರ್ತು ಕ್ರಮ ಕೈಗೊಳ್ಳದೆ ವಿಳಂಬ ನೀತಿಅನುಸರಿಸುತ್ತಿದೆ ಎಂದು ದೂರಿದರು. ಈ ಸಂಬಂಧ ಪ್ರತಿಭಟನೆಗೆನಿರ್ಧರಿಸಿದ ಉಪನ್ಯಾಸಕರ ವಿರುದ್ಧ ಶಿಕ್ಷಣಇಲಾಖೆ ಕಾನೂನು ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿರುವುದು ಖಂಡನೀಯ. ತಕ್ಷಣ ವೇತನ ಪಾವತಿಸಬೇಕು ಹಾಗೂತಮ್ಮೆಲ್ಲ ಬೇಡಿಕೆ ಈಡೇರಿಸಬೇಕೆಂದು ಅಗ್ರಹಿಸಿದರು.

ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ| ಎಂ.ಡಿ.ಸುದರ್ಶನ್‌, ಕಾರ್ಯಾಧ್ಯಕ್ಷ ಜಿ. ರೇವಣ್ಣ, ಪ್ರದಾನ ಕಾರ್ಯದರ್ಶಿ ಎಲ್‌.ಜಿ. ಉದಯಶಂಕರ್‌, ಖಜಾಂಚಿ ಎಂ.ಡಿ. ಉಮೇಶ್‌, ಮೂಡಿಗೆರೆ ತಾಲೂಕು ಅಧ್ಯಕ್ಷ ಧರ್ಮ ಶೆಟ್ಟಿ, ಎನ್‌.ಅರ್‌. ಪುರ ತಾಲೂಕು ಅಧ್ಯಕ್ಷಎ.ಜೆ.ಡೇವಿನ್‌, ಕೊಪ್ಪ ತಾಲೂಕು ಅಧ್ಯಕ್ಷ ಎಚ್‌.ಕೆ. ಚಕ್ರಪಾಣಿ, ತರೀಕೆರೆ ಅಧ್ಯಕ್ಷಎಚ್‌. ನರಸಿಂಹ ಮೂರ್ತಿ, ಅಜ್ಜಂಪುರಅಧ್ಯಕ್ಷ ಬಸವರಾಜಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೆಂದ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next