ತುಮಕೂರು: ಇಂದಿನ ಮಕ್ಕಳು ಮತ್ತು ಯುವಕರಲ್ಲಿ ದೇಶಾಭಿಮಾನ ಮೂಡಿಸುವ ಕೆಲಸವನ್ನು ಭಾರತ ಸೇವಾದಳ ಸಂಸ್ಥೆ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಸೇವಾದಳದ ಸಮಿತಿ ಅಧ್ಯಕ್ಷ ಎಚ್.ಸಿ.ಹನುಮಂತಯ್ಯ ತಿಳಿಸಿದರು.
ನಗರದ ಎಂಪ್ರಸ್ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಉಪನ್ಯಾಸಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶಾಭಿಮಾನ ಅರಿವು: ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಮತ್ತು ಯುವಕರಿಗೆ ಸತ್ಯದ ಮಾರ್ಗ ದರ್ಶನ ಮಾಡುವ ಹಿರಿಯರ ಸಂಖ್ಯೆಯು ಕಡಿಮೆಯಾಗಿದೆ. ಆದರೆ ಭಾರತ ಸೇವಾದಳ ಸಂಸ್ಥೆಯು ಚಟುವಟಿಕೆಗಳನ್ನು ರೂಪಿಸುವ ಮೂಲಕ ಅವರಲ್ಲಿ ದೇಶಾಭಿಮಾನ ಮೂಡಿಸುತ್ತಿದೆ ಎಂದರು.
ಮಹತ್ಮಾಗಾಂಧೀಜಿ, ಸುಭಾಷ್‌ಚಂದ್ರ ಬೋಸ್ ರವರ ಕುರಿತು ಯುವ ಜನತೆ ಪುಸ್ತಕ ಓದಬೇಕಾ ಗಿದೆ. ಈ ನಿಟ್ಟಿನಲ್ಲಿ ಉಪನ್ಯಾಸಕರು ಸೇವಾದಳವನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು. ಸೇವಾದಳದ ಜಿಲ್ಲಾ ಕಾರ್ಯದರ್ಶಿ ಮಾಲೂ ರಪ್ಪ ಮಾತನಾಡಿ, ಉಪಾನ್ಯಾಸಕರು ಇಲ್ಲಿ ಪಡೆದ ಸೇವಾದಳ ತರಬೇತಿಯ ಚಟುವಟಿಕೆಗಳನ್ನು ತಮ್ಮ ಕಾಲೇಜಿನಲ್ಲಿ ಅನುಷ್ಠಾನಗೊಳಿಸಿ ಯುವಕ- ಯುವತಿಯರಲ್ಲಿ ಭಾವೈಕ್ಯತಾ ಮನೊಭಾವನೆ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬೇಕು ಎಂದರು.
ಸಮಾರೋಪ ನುಡಿಗಳನ್ನಾಡಿದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಜಿ. ವೆಂಕಟೇಗೌಡ, ಭಾರತ ಸೇವಾದಳ ಕೇಂದ್ರ ಸಮಿತಿ ಮತ್ತು ಜಿಲ್ಲಾ ಸಮಿತಿಯು ಪ್ರತಿ ಕಾಲೇಜಿನಲ್ಲಿ ಸೇವಾದಳದ ಶಾಖೆಗಳನ್ನು ತೆರೆಯುವ ಮತ್ತು ಯುವಕ- ಯುವತಿಯರಲ್ಲಿ ದೇಶಾಭಿಮಾನ ಮೂಡಿಸು ವಂತಹ ನಿಟ್ಟಿನಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ನಡೆಸುವ ಜತೆ ರಾಜ್ಯಮಟ್ಟದ ಯುವ ವಿದ್ಯಾರ್ಥಿ ಸಮಾವೇಶ ಮತ್ತು ಜಿಲ್ಲಾ ಮಟ್ಟದಲ್ಲಿ ಯುವ ಜಾಗೃತಿ ಸಮಾವೇಶ ಹಾಗೂ ತಾಲೂಕುವಾರು ಕಾರ್ಯಕ್ರಮಗಳನ್ನು ಆಯೋಜಿಸಲು ಸಮಿತಿಯು ತೀರ್ಮಾನಿಸಿದೆ ಎಂದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಲಿಂಗದೇವರು ಮಾತನಾಡಿ, ಭಾರತ ಸೇವಾದಳದ ಘಟಕಗಳನ್ನು ಎಲ್ಲಾ ಕಾಲೇಜುಗಳಲ್ಲಿ ಅವಶ್ಯಕವಾಗಿ ತೆರೆಯಲೇಬೇಕು ಎಂದರು.
ಶಶಿಧರ್, ಉಪಾ ಧ್ಯಕ್ಷರಾದ ಜಿ.ವೆಂಕಟೇಶ್ ಮಾತನಾಡಿ, ಕಾಲೇಜಿ ನಲ್ಲಿ ಹಮ್ಮಿಕೊಳ್ಳುವ ಸೇವಾದಳ ಕಾರ್ಯಕ್ರಮ ಗಳಿಗೆ ಜಿಲ್ಲಾ ಸಮಿತಿ ನಿಮ್ಮ ಜತೆ ನಿಂತಿರುತ್ತದೆ. ಇಂತಹ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಎಂಪ್ರಸ್ ಕಾಲೇಜಿನ ಪ್ರಾಂಶುಪಾಲ ಷಣ್ಮುಖ ಅವರನ್ನು ಸೇವಾದಳ ಜಿಲ್ಲಾ ಸಮಿತಿ ವತಿಯಿಂದ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸದಸ್ಯರಾದ ಹನುಮಂತ ಪ್ರಸಾದ್, ಮುತ್ತುನಾಯಕ್, ಉಪನ್ಯಾಸಕರು ಉಪಸ್ಥಿತರಿದ್ದರು. ಜಿಲ್ಲಾ ಪ್ರಸನ್ನಕುಮಾರ ಸ್ವಾಗತಿ ಸಿದರು. ಜಿಲ್ಲಾ ಖಜಾಂಚಿ ನಟೇಶ್ ವಂದಿಸಿದರು.