Advertisement

Gangavati ಔಷಧಿಕೊಳ್ಳಲು, ಮಕ್ಕಳ ಫೀಸ್ ಕಟ್ಟಲು ವೇತನ ಬಿಡುಗಡೆಗೆ ಉಪನ್ಯಾಸಕರ ಆಗ್ರಹ

05:36 PM Dec 13, 2023 | Team Udayavani |

ಗಂಗಾವತಿ: ಕುಟುಂಬದಲ್ಲಿ ಅನಾರೋಗ್ಯ ಇರುವವರಿಗೆ ಔಷಧಿಕೊಳ್ಳಲು, ಮಕ್ಕಳ ಶಾಲಾ ಕಾಲೇಜು ಫೀಸ್ ಕಟ್ಟಲು,ಕಿರಾಣಿ ಬಾಕಿ ಪಾವತಿಸಲು ಹಣವಿಲ್ಲ ಸಾಲ ಮಾಡಿ ಬದುಕು ನಡೆಸುತ್ತಿದ್ದು ಮೂರು ತಿಂಗಳ ವೇತನ ಪಾವತಿಸುವಂತೆ ಆಗ್ರಹಿಸಿ ಕೊಲ್ಲಿನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕರು ಪ್ರಾಚಾರ್ಯರ ವಿರುದ್ಧ ಪ್ರತಿಭಟನೆ ನಡೆಸಿ ಕೂಡಲೇ ಮಧ್ಯ ಪ್ರವೇಶ ಮಾಡಿ ವೇತನ ಬಿಡುಗಡೆ ಮಾಡಿಸುವಂತೆ ಮುಖ್ಯಮಂತ್ರಿಗಳಿಗೆ, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಗಳಿಗೆ,ಮಾನವ ಹಕ್ಕು ಆಯೋಗ,ಉನ್ನತ ಶಿಕ್ಷಣ ಖಾತೆ ಸಚಿವರಿಗೆ, ಆಯುಕ್ತರಿಗೆ, ಜಂಟಿ ನಿರ್ದೇಶಕರಿಗೆ ಮನವಿ ಪತ್ರಗಳನ್ನು ಅಂಚೆ ಮೂಲಕ ಅತಿಥಿ ಉಪನ್ಯಾಸಕರು ಸಲ್ಲಿಸಿದರು.

Advertisement

ಅಕ್ಕಪಕ್ಕದ ಕಾಲೇಜುಗಳ ಪ್ರಾಚಾರ್ಯರು ಅತಿಥಿ ಉಪನ್ಯಾಸಕರ ವೇತನ ಮಾಡಿದ್ದು ಗಂಗಾವತಿ ಕಾಲೇಜಿನ ಪ್ರಾಚಾರ್ಯ 78 ಜನರ ಪೈಕಿ 13 ಜನರ ವೇತನ ಪಾವತಿ ಮಾಡಿದ್ದು ಉಳಿದವರು ಜೀವನ ನಡೆಸುವುದು ಕಷ್ಟವಾಗಿದೆ. ಕಳೆದ ಮೂರು ತಿಂಗಳಿಂದ ಸಂಬಳವಿಲ್ಲದೆ ಅತಿಥಿ ಉಪನ್ಯಾಸಕರ ಜೀವನ ನರಕ ಸದೃಶವಾಗಿದೆ. ಸಾಲ ಸೋಲ ಮಾಡಿ ಜೀವನ ಸಾಗಿಸುತಿದ್ದು ಸಂಬಳ ನೀಡಬಾರದು ಎನ್ನುವ ಯಾವುದೇ ಲಿಖಿತ ಆದೇಶವಿಲ್ಲದೇ ಸಂಬಳ ನೀಡದೇ ಸತಾಯಿಸಲಾಗುತ್ತಿದೆ. ಸಂಬಳವಿಲ್ಲದೆ ಜೀವನ ನಡೆಸುವುದು ಕಷ್ಟಕರವಾಗಿದೆ.ಕಿರಾಣಿ,ಮಕ್ಕಳ ಫೀಸ್, ಔಷಧಿ ದಿನನಿತ್ಯ ಖರ್ಚಿಗೆ ಹಣವಿಲ್ಲದೇ ಒದ್ದಾಡುತ್ತಿರುವ ಮೂರು ತಿಂಗಳ ವೇತನ ಬಿಡುಗಡೆ ಮಾಡಬೇಕು. ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸಿ.ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕೆಂದು ಮನವಿ ಒತ್ತಾಯಿಸಲಾಗಿದೆ.

ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ಎ.ಕೆ.ಮಹೇಶಕುಮಾರ. ಬಸವರಾಜ ಗೌಡನಬಾವಿ, ಪಾಗುಂಡಪ್ಪ, ಕಳಕಪ್ಪ, ದೊಡ್ಡ ಬಸಮ್ಮ ಶಾಹೀನ್ ಕೌಸರ್, ಲಕ್ಷ್ಮೀ ಚಿದ್ರಿ, ರೇಣುಕಾ, ಪರ್ವಿನ್ ಸುಲ್ತಾನ್, ಮುದುಕನಗೌಡ,ಬಾಲಪ್ಪ ನಾಯಕ, ಗುಂಡೂರು ಪವನ್ ಕುಮಾರ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next