Advertisement

ಪ್ಲಾಸ್ಟಿಕ್‌ ಅನಿವಾರ್ಯ ಭ್ರಮೆ ಬಿಟ್ಟುಬಿಡಿ

06:27 PM Oct 04, 2021 | Team Udayavani |

ರಾಯಚೂರು: ಅಗತ್ಯ ಬಳಕೆ ವಸ್ತುಗಳ ಸಾಲಿನಲ್ಲಿ ಪ್ಲಾಸ್ಟಿಕ್‌ ಕೂಡ ಸೇರಿಕೊಂಡಿದ್ದು, ಅದು ಇಲ್ಲದೇ ಜೀವನವೇ ಇಲ್ಲವೇನೋ ಎಂಬ ಭ್ರಮೆಯಿಂದ ನಾವು ಹೊರಗೆ ಬರಬೇಕಿದೆ ಎಂದು ಕೇಂದ್ರ ಸರ್ಕಾರದ ಎಂಎಚ್‌ಆರ್‌ಡಿ ಪ್ರಶಸ್ತಿ ಪುರಸ್ಕೃತ ರಾಜಶೇಖರಯ್ಯ ಹಿರೇಮಠ ಹೇಳಿದರು.

Advertisement

ನಗರದ 21ನೇ ವಾರ್ಡ್‌ ವ್ಯಾಪ್ತಿಯ ಬೊಳಮಾನದೊಡ್ಡಿ ರಸ್ತೆಯ ರೇಸ್‌ ಬಚಪನ್‌ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗ್ರೀನ್‌ ರಾಯಚೂರು, ಶಿಲ್ಲಾ ಫೌಂಡೇಶನ್‌ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರೀಜಿ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್‌ ಮುಕ್ತ ಸಂಕಲ್ಪ ಮತ್ತು ಸ್ವಚ್ಛ  ಭಾರತ ಅಭಿಯಾನ, ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ಲಾಸ್ಟಿಕ್‌ ಜೀವನದ ಅವಿಭಾಜ್ಯ ಅಂಗವಾಗಿ ಹೊರಹುಮ್ಮುತ್ತಿದ್ದು, ಜನರಲ್ಲಿ ಪರಿಸರಕ್ಕೆ ಪೂರಕವಾಗಿರುವ ಪ್ಲಾಸ್ಟಿಕ್‌ ರಹಿತ ವಸ್ತುಗಳ ಬಳಕೆಗೆ ಉತ್ತೇಜಿಸುವ ಕಾರ್ಯ ಹೆಚ್ಚಾಗಬೇಕು. ಜನ ಆಧುನಿಕ ಜೀವನ ಶೈಲಿಗೆ ಮಾರುಹೋಗಿ ಪರಿಸರ ಕಾಳಜಿಯನ್ನೇ ಮರೆತಿದ್ದಾರೆ. ಪ್ಲಾಸ್ಟಿಕ್‌ ಸುಲಭಕ್ಕೆ ಸಿಗುವ ಕಾರಣಕ್ಕೆ ಬಳಕೆ ಹೆಚ್ಚಾಗುತ್ತಿದೆ. ಅತೀ ಹೆಚ್ಚು ಪ್ಲಾಸ್ಟಿಕ್‌ ಬಳಕೆಯಿಂದ ಪರಿಸದ ಮೇಲಾದ ದುಷ್ಪರಿಣಾಮ ಕುರಿತು ಜನರ ಅರಿವಿಗೆ ಬಂದಿದ್ದರೂ, ಕಡಿವಾಣ ಹಾಕುವಲ್ಲಿ
ವಿಫಲರಾಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಜತೆಗೆ ಜೀವಸಂಕುಲದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ಮಾರುಕಟ್ಟೆಗೆ ತರಳುವಾಗ ಬಟ್ಟೆ ಚೀಲಗಳನ್ನು ಬಳಸಲು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಿಸಲು ದೃಢ ಸಂಕಲ್ಪ ಮಾಡಬೇಕಿದೆ ಎಂದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಜನ ರಮೇಶ್‌ ಮಾತನಾಡಿ, ಪರಿಸರ ಸ್ನೇಹಿ ಅನೇಕ ವಸ್ತುಗಳು ಪ್ಲಾಸ್ಟಿಕ್‌ ಗೆ ಪರಿರ್ಯಾಯವಾಗಿದೆ. ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಾಣ ಕೇವಲ ಒಬ್ಬಿಬ್ಬರಿಂದ ಸಾಧ್ಯವಿಲ್ಲ. ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

ಮರುಬಳಕೆಯಾಗದ ಪ್ಲಾಸ್ಟಿಕ್‌ ಅನ್ನು ಒಂದಡೆ ಸಂಗ್ರಹಿಸಿ ಇಕೋಬ್ರಿಕ್‌ ತಯಾರಿಸಿದ 25ಕ್ಕೂ ಹೆಚ್ಚು ಮಕ್ಕಳಿಗೆ ಇದೇ ವೇಳೆ ಪ್ರಹ್ಲಾದ್‌ ಕುಲಕರ್ಣಿ ಅವರಿಂದ ಬಟ್ಟೆ ಚೀಲಗಳನ್ನು ಬಹುಮಾನವಾಗಿ ವಿತರಿಸಲಾಯಿತು. ಗ್ರೀನ್‌ ರಾಯಚೂರು ಸಂಸ್ಥೆಯ ಸಂಸ್ಥಾಪಕ ಕೊಂಡಾ ಕೃಷ್ಣಮೂರ್ತಿ, ಆರ್‌ ಡಿಎ ಅಧ್ಯಕ್ಷ ವೈ.ಗೊಪಾಲರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಜಿ.ಬಸವರಾಜ, ನಗರಸಭೆ ಸದಸ್ಯರಾದ ಬಿ ಗೊವಿಂದ, ಕಡಕೊಳ ಆಂಜನೇಯ, ಈ ಶಶಿರಾಜ ಸೇರಿ ಅನೇಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next