Advertisement

ಎಪಿಎಂಸಿ ಮಾರುಕಟ್ಟೆ ಶುಲ್ಕ ಕೈಬಿಡಿ

07:36 AM May 21, 2020 | Suhan S |

ಹುಬ್ಬಳ್ಳಿ: ಸುಗ್ರಿವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆ ತಿದ್ದುಪಡಿ ಅನ್ವಯ ಮಾರುಕಟ್ಟೆ ಶುಲ್ಕ ಕೈಬಿಡಬೇಕೆಂದು ಇಲ್ಲಿನ ಎಪಿಎಂಸಿ ವರ್ತಕರ ಸಂಘ ಒತ್ತಾಯಿಸಿದೆ.

Advertisement

ಸಚಿವ ಜಗದೀಶ ಶೆಟ್ಟರ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ನೂತನ ತಿದ್ದುಪಡಿ ಪ್ರಕಾರ ಹೊಸದಾಗಿ ಪರವಾನಗಿ ಪಡೆದು ವಹಿವಾಟು ನಡೆಸುವವರು ಪ್ರಸ್ತುತ ಕಾಯ್ದೆಯಲ್ಲಿನ ಕಲಂ ನಂ. 72ಎ ಹಾಗೂ ನಿಯಮ 87ಸಿ ರಡಿ ಸಮಕ್ಷಮ ಪ್ರಾಧಿಕಾರದಿಂದ ನೇರ ಖರೀದಿ ಪರವಾನಗಿ ಪಡೆದು ವ್ಯವಹರಿಸಬಹುದಾಗಿದೆ. ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯವಹರಿಸುತ್ತಿರುವ ವರ್ತಕರಿಗೆ ಕಾಯ್ದೆ ಕಲಂ 65(2)ರ ಅಡಿ ಮಾರುಕಟ್ಟೆ ಶುಲ್ಕದಲ್ಲಿ ಯಾವುದೇ ಬದಲಾವಣೆ ಇರಲ್ಲ. ಆದ್ದರಿಂದ ಸೆಸ್‌ ಆಕರಣೆಯನ್ನು ಸರಕಾರ ಕೂಡಲೇ ಕೈಬಿಟ್ಟು ಒಂದೇ ದೇಶ, ಒಂದೇ ತೆರಿಗೆ ಜಾರಿ ಮಾಡಬೇಕೆಂದು ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪೂರ, ಗೌರವ ಕಾರ್ಯದರ್ಶಿ ಪ್ರಭುಲಿಂಗಪ್ಪ ಅಂಕಲಕೋಟಿ, ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ಶಂಕರಣ್ಣ ಮುನವಳ್ಳಿ ಸಚಿವರನ್ನು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next