Advertisement

ನೆಹರೂ ಗ್ರಂಥಾಲಯ ಸ್ವರೂಪ ಬದಲಿಸಬೇಡಿ: ಮೋದಿಗೆ ಡಾ.ಸಿಂಗ್‌ ಆಗ್ರಹ

03:49 PM Aug 27, 2018 | Team Udayavani |

ಹೊಸದಿಲ್ಲಿ : ಇಲ್ಲಿನ ನೆಹರೂ ಮೆಮೋರಿಯರ್‌ ಮ್ಯೂಸಿಯಂ ಆ್ಯಂಡ್‌ ಲೈಬ್ರರಿ (ಎನ್‌ಎಂಎಂಎಲ್‌) ಅನ್ನು ದೇಶದ ಎಲ್ಲ ಮಾಜಿ ಪ್ರಧಾನಿಗಳ ಸ್ಮರಣೆಗೆ ಮುಡಿಪಿಡಲಾಗುವುದೆಂಬ ವರದಿಗಳ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ‘ಯಾವುದೇ ಕಾರಣಕ್ಕೂ ಎನ್‌ಎಂಎಂಎಲ್‌ ಸ್ವರೂಪವನ್ನು ಬದಲಾಯಿಸಬೇಡಿ’ ಎಂದು ಆಗ್ರಹಿಸಿದ್ದಾರೆ. ನೆಹರೂ ಸ್ಮಾರಕ ಗ್ರಂಥಾಲವನ್ನು ಅಂತೆಯೇ ಉಳಿಸಿಕೊಳ್ಳುವ ಮೂಲಕ ಇತಿಹಾಸ ಮತ್ತು ಪರಂಪರೆಯನ್ನು ಗೌರವಿಸಿದಂತಾಗುವುದು ಎಂದು ಕಿವಿಮಾತು ಹೇಳಿದ್ದಾರೆ. 

Advertisement

“ಜವಾಹರಲಾಲ್‌ ನೆಹರೂ ಅವರು ಕೇವಲ ಕಾಂಗ್ರೆಸ್‌ಗೆ ಮಾತ್ರವಲ್ಲ; ಇಡಿಯ ದೇಶಕ್ಕೆ ಸೇರಿದವರಾಗಿದ್ದಾರೆ. ಈ ಸ್ಫೂರ್ತಿಯಲ್ಲಿ ಈ ಪತ್ರವನ್ನು ನಾನು ನಿಮಗೆ ಬರೆಯುತ್ತಿದ್ದೇನೆ. ದೇಶದ ಇತಿಹಾಸ ಮತ್ತು ಪರಂಪರೆಯನ್ನು ಗೌರವಿಸುವ ಸಲುವಾಗಿ ನೆಹರೂ ಸ್ಮಾರಕ ಗ್ರಂಥಾಲಯದ ಸ್ವರೂಪವನ್ನು ಬದಲಾಯಿಸಬೇಡಿ’ ಎಂದು ಮನಮೋಹನ್‌ ಸಿಂಗ್‌ ಪತ್ರದಲ್ಲಿ ಹೇಳಿದ್ದಾರೆ. 

ದಿವಂಗತ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಆರು ವರ್ಷಗಳ ಅಧಿಕಾರಾವಧಿಯಲ್ಲಿ ಕೂಡ ಎನ್‌ಎಂಎಂಎಲ್‌ನ ಸ್ವರೂಪವನ್ನು ಬದಲಾಯಿಸುವ ಯಾವುದೇ ಯತ್ನ ನಡೆದಿರಲಿಲ್ಲ; ಆದರೆ ಈಗಿನ ಭಾರತದ ಸರಕಾರದ ಅಜೆಂಡಾದಲ್ಲಿ ಇಂಥದ್ದೊಂದು ವಿಷಯ ಇರುವುದು ದುರದೃಷ್ಟಕರ’ ಎಂದು ಮನಮೋಹನ್‌ ಸಿಂಗ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next