Advertisement

ನೆಹರು ಸ್ಮಾರಕ ಬದಲಿಸದಿರಿ ಪಿಎಂ ಮೋದಿಗೆ ಸಿಂಗ್‌ ಪತ್ರ

06:00 AM Aug 28, 2018 | |

ನವದೆಹಲಿ: ನೆಹರು ಮೆಮೋರಿಯಲ್‌ ಮ್ಯೂಸಿಯಂ ಆಂಡ್‌ ಲಿಬರ್ಟಿ (ಎನ್‌ಎಂಎಂಎಲ್‌)ಯ ಸ್ವರೂಪದಲ್ಲಿ ಬದಲಾವಣೆ ತರುವ ಪ್ರಯತ್ನ ಬೇಡ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮನವಿ ಮಾಡಿದ್ದಾರೆ. ಬದಲಾವಣೆಯ ಪ್ರಯತ್ನಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಸಿಂಗ್‌, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಜವಾಹರ್‌ಲಾಲ್‌ ನೆಹರು ಕೇವಲ ಕಾಂಗ್ರೆಸ್‌ಗೆ ಸೇರಿದವರಲ್ಲ, ಇಡೀ ಭಾರತದವರು ಎಂದು ಹೇಳಿದ್ದಾರೆ.

Advertisement

ತೀನ್‌ ಮೂರ್ತಿ ಕಾಂಪ್ಲೆಕ್ಸ್‌ ಇತಿಹಾಸ ಮತ್ತು ಪರಂಪರೆ ಎರಡೂ ಗೌರವಿಸುವ ಸ್ಥಳವಾಗಿದ್ದು, ಇದಕ್ಕೆ ಯಾವುದೇ ತೊಂದರೆ ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ. ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಎನ್‌ಎಂಎಂಎಲ್‌ನ ಸ್ವರೂಪ ಬದಲಾಯಿಸುವ ಯಾವುದೇ ಪ್ರಯತ್ನ ನಡೆದಿರಲಿಲ್ಲ, ಅಲ್ಲದೆ ವಾಜಪೇಯಿ ಅವರು ಸಂಸತ್‌ನಲ್ಲಿ ನೆಹರು ಅವರನ್ನು ಅದ್ಭುತ ವ್ಯಕ್ತಿ ಎಂದು ಬಣ್ಣಿಸಿದ್ದರು ಎಂದು ಸಿಂಗ್‌ ನೆನಪಿಸಿದ್ದಾರೆ. ಎನ್‌ಎಂಎಂಎಲ್‌ ಅನ್ನು ಎಲ್ಲಾ ಮಾಜಿ ಪ್ರಧಾನಿಗಳ ಸ್ಮಾರಕವಾಗಿಸುವ ಕೇಂದ್ರದ ಪ್ರಸ್ತಾಪದ ಬೆನ್ನಲ್ಲೇ  ಸಿಂಗ್‌ ಈ ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next