ಹುಣಸೂರು: ನೋಬೆಲ್ ಪ್ರಶಸ್ತಿ ಪಡೆದವ ರಲ್ಲಿ ಶೇ.75 ಮಂದಿ ಬಡತನದಿಂದ ಬಂದ ವರು, ಅಬ್ದುಲ್ ಕಲಾಂ ನಿತ್ಯ 10 ಗಂಟೆ ಓದು ತ್ತಿದ್ದವರು. ಆದರೆ, ಇಂದಿನ ಯುವಕರು ದಿನ ವಿಡೀ ಮೊಬೈಲ್ ನೋಡಿ ಮಾನಸಿಕ ಗೊಂದಲ ಕ್ಕೊಳಗಾಗುತ್ತಿದ್ದಾರೆ. ಇದರಿಂದ ಹೊರ ಬಂದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಗಾಂಧಿವಾದಿ ಶಿವರಾಜು ಸಲಹೆ ನೀಡಿದರು
ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಗಾಂಧೀಜಿ ಹಾಗೂ ಯುವಜನತೆ ಕುರಿತು ಉಪನ್ಯಾಸ ನೀಡಿದ ಅವರು, ವಿದ್ಯಾರ್ಥಿಗಳಿಗೆ ಪರೀಕ್ಷೆ-ಕೆಲಸ-ಹಣವೇ ಮುಖ್ಯವಲ್ಲ, ಅದು ಬದುಕಿನ ಸಂಪೂರ್ಣ ತೆಯೂ ಅಲ್ಲ, ನಂಬಿಕೆ-ಸೌಜನ್ಯ-ಸದ್ಗುಣ ಮುಖ್ಯವಾಗಿದೆ ಎಂದರು.
ಗಾಂಧೀಜಿ ಹಲವಾರು ಅವಮಾನ ಸಹಿಸಿಕೊಂಡು ಶಸ್ತ್ರ ರಹಿತ ಹೋರಾಟದ ಮೂಲಕ ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ್ದು, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ದೇವರಲ್ಲ, ಆದರೆ ಅವರಲ್ಲಿದ್ದ ಪ್ರಾಮಾಣಿಕತೆಯಿಂದಾ ಗಿಯೇ ದೇವರ ಮಟ್ಟಕ್ಕೇರಿದರು. ಇವರ ವಿಚಾರಧಾರೆ ಅರಿಯಬೇಕು ಎಂದರು.
ಎನ್‌ಎಸ್‌ಎಸ್ ಮೂಲಕ ಯುವಕರ ಮನಸ್ಸು ಮತ್ತು ಹೃದಯವನ್ನು ಶಕ್ತಿವಂತರನ್ನಾಗಿಸ ಬೇಕಿದೆ. ಪ್ರೀತಿ, ಭಾತೃತ್ವ, ಮಾನವೀ ಯತೆ ತುಂಬಿದ ಗಾಂಧಿ ಮಾರ್ಗ ಪ್ರಸ್ತುತ. ಈ ನಿಟ್ಟಿನಲ್ಲಿ ಯುವ ಜನತೆ ಹೆಜ್ಜೆ ಹಾಕುವಂತೆ ಶಿಕ್ಷಕ ಸಮೂಹ ಪ್ರೇರೇಪಿಸಬೇಕಿದೆ ಎಂದು ತಿಳಿಸಿದರು.
ಐಎಎಸ್ ಅಧಿಕಾರಿ ತನ್ವೀರ್ ಆಸಿಫ್ ಮಾತನಾಡಿ, ಐಎಎಸ್ ಹಾಗೂ ಕೆಎಎಸ್ ಅಧಿಕಾರಿಯಾಗುವ ಗುರಿ ಇದ್ದರೆ, ನಿರಂತರ ವಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕು ಎಂದರು. ವೃತ್ತ್ತ ನಿರೀಕ್ಷಕ ಕೆ.ಸಿ.ಪೂವಯ್ಯ, ಪೊಲೀಸ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಶಿಬಿರಾಧಿಕಾರಿ ಡಾ.ಕೆ.ಎಸ್. ಭಾಸ್ಕರ್, ಸಹ ಶಿಬಿರಾಧಿಕಾರಿಗಳಾದ ರಮಣಿನಾಯಕ್, ಕಲಾಶ್ರೀ, ಡಾ.ನಂಜುಂಡಸ್ವಾಮಿ, ನಾಗೇಶ್ ಇತರರು ಉಪಸ್ಥಿತರಿದ್ದರು.