Advertisement

ಕಾಶ್ಮೀರದ ವಿಷಯ ಬಿಡಿ; ನಿಮ್ಮೊಳಗಿನ ಹಿಂಸಾಚಾರ ನೋಡಿ: ಪಾಕ್‌ ಗೆ ಚಾಟಿ ಬೀಸಿದ ಭಾರತ

09:57 AM Sep 15, 2019 | Team Udayavani |

ಜಿನೆವಾ: ಪದೇ ಪದೇ ಕಾಶ್ಮೀರದ ವಿಷಯದಲ್ಲಿ ಮೂಗು ತೂರಿಸುವ ಪಾಕಿಸ್ಥಾನಕ್ಕೆ ಭಾರತ ಸರಿಯಾಗಿ ಚಾಟಿ ಬೀಸಿದೆ. ನಮ್ಮ ಕಾಶ್ಮೀರದ ವಿಚಾರಕ್ಕೆ ಬರುವುದಕ್ಕೆ ಮೊದಲು ನಿಮ್ಮ ದೇಶದಲ್ಲಿರುವ ಕಾನೂನು ಬಾಹಿರ ಚಟುವಟಿಕೆಗಳು ಮತ್ತು ಹಿಂಸಾಚಾರದ ಬಗ್ಗೆ ಗಮನ ಹರಿಸಿ ಎಂದು ಭಾರತ ವಿಶ್ವ ಸಂಸ್ಥೆಯ ಸಭೆಯಲ್ಲಿ ಪಾಕಿಸ್ಥಾನಕ್ಕೆ ತಿರುಗೇಟು ನೀಡಿದೆ.

Advertisement

ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಅಧಿವೇಶನದಲ್ಲಿ ಮಾತನಾಡಿದ ಭಾರತದ ಕುಮಾಮ್ ಮಿನಿ ದೇವಿ, ಪಾಕಿಸ್ಥಾನ ಕಾಶ್ಮೀರದ ವಿಷಯದಲ್ಲಿ ಮತ್ತೆ ಮತ್ತೆ ತಪ್ಪು ಮಾಹಿತಿಯನ್ನು ಜಗತ್ತಿನ ಮುಂದಿಡುತ್ತಿದೆ. ಅದರ ಬದಲು ಪಾಕ್‌ ಆಕ್ರಮಿತ ಕಾಶ್ಮೀರ, ಖೈಬರ್‌ ಪ್ರಾಂತ್ಯ, ಬಲೂಚಿಸ್ಥಾನ ಮತ್ತು ಸಿಂಧ್‌ ಪ್ರಾಂತ್ಯದಲ್ಲಿ ನಡೆಯುತ್ತಿರುವ ಕಗ್ಗೊಲೆಗಳು, ಹಿಂಸಾಚಾರಗಳ ಬಗ್ಗೆ ಗಮನಹರಿಸುವುದು ಒಳಿತು ಎಂದರು.

ಭಾರತ ಆಗಸ್ಟ್‌ 5ರಂದು ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್‌ 370 ನ್ನು ರದ್ದುಗೊಳಿಸಿತ್ತು. ಇದರಿಂದಾಗಿ ವಿಚಲಿತಗೊಂಡಿರುವ ಪಾಕ್‌, ಕಣಿವೆ ರಾಜ್ಯದಲ್ಲಿ ಹಿಂಸಾಚಾರದ ಪ್ರಮಾಣ ಹೆಚ್ಚುತ್ತಿದೆ ಎಂದು ವಿಶ್ವಮಟ್ಟದಲ್ಲಿ ಸಾರಲು ಪ್ರಯತ್ನಿಸುತ್ತಿದೆ.

ಜಮ್ಮು ಕಾಶ್ಮೀರದಲ್ಲಿ 370 ವಿಧಿಯನ್ನು ರದ್ದುಗೊಳಿಸಿರುವುದು ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದೆ. ಪಾಕಿಸ್ಥಾನಿಗಳ ಉನ್ಮಾದಮತ್ತ ಹೇಳಿಕೆಗಳು, ತಪ್ಪು ತಿಳುವಳಿಕೆಗಳಿಂದ ಇದನ್ನುಬದಲಿಸಲು ಸಾಧ್ಯವಿಲ್ಲ ಎಂದು ಕುಮಾಮ್‌ ದೇವಿ ಒತ್ತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next