Advertisement

ಅನ್ಯ ಭಾಗ್ಯಗಳ ಬಿಡಿ, ಶಿಕ್ಷಣ ಭಾಗ್ಯ ನೀಡಿ

01:01 PM Dec 03, 2017 | Team Udayavani |

ಯಲಹಂಕ: ನಿಮ್ಮ ಭಾಗ್ಯಗಳು ಸಾಕು. ನಮಗೆ ಶಿಕ್ಷಣ ಭಾಗ್ಯ ಕೊಡಿ ಎಂದು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ ಸರ್ಕಾರವನ್ನು ಆಗ್ರಹಿಸಿದರು.

Advertisement

ರಾಜಾನುಕುಂಟೆಯಲ್ಲಿ ವಿದ್ಯಾರ್ಥಿ ಘಟಕದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇದ್ದರೆ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.

ನಿವೃತ್ತ ಪೊಲೀಸ್‌ ಅಧಿಕಾರಿ ಎನ್‌.ಕೃಷ್ಣಪ್ಪ ಮಾತನಾಡಿ, ಹಿಂದಿನವರು ಸಮಾಜ ಸೇವೆಗಾಗಿ ಆಸ್ವತ್ರೆ, ಶಾಲೆಗಳನ್ನು ಕಟ್ಟಿಸುತ್ತಿದ್ದರು. ಇಂದು ಅವುಗಳು ಹಣ ದೋಚುವ ಕೇಂದ್ರಗಳಾಗಿವೆ. ಶಿಕ್ಷಣ ಸಂಖೆ§ಗಳ ಡೊನೇಷನ್‌ ಹಾವಳಿ ವಿರುದ್ಧ ಹೋರಾಟ ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಸಹಾಯಕ ಪೊಲೀಸ್‌ ಆಯುಕ್ತ ರಾಮಚಂದ್ರಪ್ಪ, ಜಿ.ಪಂ ಸದಸ್ಯೆ ಲಾವಣ್ಯ ನರಸಿಂಹಮೂರ್ತಿ, ಸಂಘಟನೆ ರಾಜ್ಯ ಉಪಾಧ್ಯಕ್ಷ ಪುಟ್ಟೇಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ನವೀನ್‌ ಕುಮಾರ್‌, ಜಿಲ್ಲಾಧ್ಯಕ್ಷ ನಟರಾಜು, ಕ್ಷೇತ್ರಾಧ್ಯಕ್ಷ ಮಂಜುನಾಥ್‌, ವಿಧ್ಯಾರ್ಥಿ ಘಟಕದ ಅಧ್ಯಕ್ಷ ಅವಿನಾಶ್‌, ಉಪಾಧ್ಯಕ್ಷ ವಿನಯ್‌, ಯಲಹಂಕ ಕ್ಷೇತ್ರಾಧ್ಯಕ್ಷ ವೇಣುಗೋಪಾಲ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next