ಆಳಂದ: ಕಲಿಯುವ ಮನಸ್ಸಿದ್ದರೆ ಎಲ್ಲ ಭಾಷೆಯೂ ಸರಳವಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಮನಸ್ಸು ಮಾಡಬೇಕು ಎಂದು ಸರ್ಕಾರಿ ಪಿಯು ಬಾಲಕಿಯರ ಕಾಲೇಜಿನ ಪ್ರಾಚಾರ್ಯ ಜೋಹಾರ ಫಾತಿಮಾ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ವಿಶ್ವಾಸ ಕಿರಣ ಕಾರ್ಯಕ್ರಮದ ಅಡಿಯಲ್ಲಿ ಎಸ್ಸಿ-ಎಸ್ಟಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ಆಂಗ್ಲಭಾಷೆ ವಿಶೇಷ ತರಬೇತಿ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂಗ್ಲಿಷ್ ಕಠಿಣವಿದೆ ಎಂದು ಕೈಬಿಟ್ಟರೆ ಇನ್ನಷ್ಟು ಕಠಿಣವಾಗುತ್ತಿದೆ. ಕಲಿಯುತ್ತಾ ಹೋದಂತೆ ಮತ್ತಷ್ಟು ಸರಳವಾಗುತ್ತದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ನಿರಂತರ ಅಧ್ಯಯನದಿಂದ ಎಲ್ಲವನ್ನು ಸಾಧಿಸಿಲು ಸಾಧ್ಯವಿದೆ. ಹೊಸದೊಂದು ಭಾಷೆ ರೂಢಿಸಿಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದರು.
ತಿಂಗಳ ಕಾಲ ವಿದ್ಯಾರ್ಥಿಗಳಿಗೆ ಆಂಗ್ಲವಿಷಯ ಮನನ ಮಾಡಿದ ಕಾರ್ಯಕ್ರಮ ಸಂಯೋಜಕ ವಿಶ್ವಾಸ ಕಿರಣ, ಆಂಗ್ಲ ಉಪನ್ಯಾಸಕ ಶ್ರೀಶೈಲ ಮಾಳಗೆ ಮಾತನಾಡಿ, ವಿದ್ಯಾರ್ಥಿನಿಯರಲ್ಲಿ ಏಕಾಗೃತೆ, ಕಲಿಕೆ ಹಂಬಲವಿದ್ದರೆ ಕಲಿಕೆ ಸರಳವಾಗುತ್ತದೆ ಎಂದರು.
ಮಹಾದೇವಪ್ಪ ಮರಡಿ, ಅಂಬಾದಾಸ, ಜಟಿಂಗರಾಯ ಶಕಾಪುರೆ, ಸುಮಂಗಲಾ ನಾಟಿಕರ್, ಸುವರ್ಣ, ರಾಣಿ ಪಾಟೀಲ, ಅತಿಯಾ ಸುಲ್ತಾನ್, ಸಂಜುಕುಮಾರ, ಗೋವಿಂದ ರಾಠೊಡ, ಬೇಗಂ ಮತ್ತಿತರರು ಇದ್ದರು. ರಕ್ಷಿತಾ ಜಿ. ಚಿಂಚೋಳಿ ನಿರೂಪಿಸಿದರು. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡದ ವಿದ್ಯಾರ್ಥಿನಿ ಪಲ್ಲವಿ ಬಸವರಾಜ, ಸಿದ್ಧಮ್ಮಾ, ರಕ್ಷಿತಾ ಚಿಂಚೋಳಿ, ಲಕ್ಷ್ಮೀ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.