Advertisement

ಕಲಿಕೆ ಸಾಮಾಜಿಕ ಬಳಕೆಯಾದಾಗ ಸಾರ್ಥಕ: ಸದಾಶಿವಂ

01:00 AM Mar 04, 2019 | Harsha Rao |

ಕಾಸರಗೋಡು: ಪಡೆದ ಶಿಕ್ಷಣ ಸಮಾಜದ ಉಪಕಾರಕ್ಕೆ ಬಳಕೆಯಾದಾಗ ಮಾತ್ರ ಸಾರ್ಥಕ ಎಂದು ರಾಜ್ಯಪಾಲ, ನಿವೃತ್ತ ನ್ಯಾಯಮೂರ್ತಿ ಪಿ.ಸದಾಶಿವಂ ಅಭಿಪ್ರಾಯಪಟ್ಟಿದ್ದಾರೆ.

Advertisement

ಪೆರಿಯ ಕೇರಳ ಕೇಂದ್ರ ವಿವಿಯಲ್ಲಿ ಶನಿವಾರ ನಡೆದ ತೃತೀಯ ಹಂತದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪದವಿ ಪಡೆದಲ್ಲಿಗೆ ಶಿಕ್ಷಣ ಮುಗಿಯುವುದಿಲ್ಲ. ಪದವಿ ಪಡೆಯುವುದು ಶಿಕ್ಷಣ ರಂಗದ ಒಂದು ಮೈಲುಗಲ್ಲು ಮಾತ್ರ. ದೇಶದ ಸಂವಿಧಾನದ ಪ್ರಸ್ತಾವನೆ ಮತ್ತು ಪೌರನ ಮೂಲಭೂತ ಕರ್ತವ್ಯಗಳು ಶಿಕ್ಷಣಾಲಯಗಳಲ್ಲಿ ಸಿಗುವಂತಾ ಗಬೇಕು. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಗ್ರಂಥಾಲಯಗಳಲ್ಲಿ, ಡಾಟಾಬೇಸ್‌ ಗಳಲ್ಲಿ ಸೀಮಿತರಾಗದೆ ಸಮಾಜವನ್ನು ಕಣ್ತೆರೆದು ನೋಡುವಂತೆ, ಅರ್ಥಮಾಡಿಕೊಳ್ಳವಂತಾಗಬೇಕು ಎಂದವರು ಆಗ್ರಹಿಸಿದರು.

ಕೇರಳ-ಕೇಂದ್ರ ವಿವಿ ಕುಲಪತಿ ಪ್ರೊ|ಎಸ್‌.ವಿ.ಶೇಷಗಿರಿ ರಾವ್‌ ಅವರು ಅಧ್ಯಕ್ಷತೆ ವಹಿಸಿದ್ದರು. ಗುಜರಾತ್‌ ಕೇಂದ್ರ ವಿವಿ ಉಪಕುಲಪತಿ ಪ್ರೊ|ಎಸ್‌.ಎ.ಬಾರಿ, ಉಪಕುಲಪತಿ ಕೆ.ಜಯಪ್ರಸಾದ್‌, ಪರೀûಾ ನಿಯಂತ್ರಣಾಧಿಕಾರಿ ಮುರಳೀಧರನ್‌ ಮೊದಲಾದವರು ಉಪಸ್ಥಿತರಿದ್ದರು.

ಕೇರಳ-ಕೇಂದ್ರ ವಿವಿ ಉಪಕುಲಪತಿ ಡಾ| ಜಿ.ಗೋಪಕುಮಾರ್‌ ಅವರು ಸ್ವಾಗತಿಸಿದರು. ರಿಜಿಸ್ಟ್ರಾರ್‌ ಎ.ರಾಧಾಕೃಷ್ಣನ್‌ ನಾಯರ್‌ ವಂದಿಸಿದರು. ಬೇರೆ ಬೇರೆ ವಿಭಾಗಗಳ 790 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಿತು.

Advertisement

ಸಂವಿಧಾನದ ಪ್ರಸ್ತಾವನೆ 
ರಾಷ್ಟ್ರಗೀತೆ  ಮತ್ತು ರಾಷ್ಟ್ರಧ್ವಜವನ್ನು ಗೌರವದಿಂದ ಕಾಣುವ ಮನೋಧರ್ಮ ಬೆಳೆಯಬೇಕು. ಮಹಿಳೆ ಯರನ್ನು, ಮಕ್ಕಳನ್ನು, ಪ್ರಕೃತಿಯನ್ನು ಸಂರಕ್ಷಿಸುವಲ್ಲಿ, ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಖಚಿತಪಡಿಸುವಲ್ಲಿ ಸಂವಿಧಾನ ನಮಗೆ ಪ್ರೇರಣೆಯಾಗಿದೆ. ಈ ಕುರಿತು ಸ್ವಯಂ ಸೇವಾ ಸಂಘಟನೆಗಳು ಮುಂದೆ ಬರಬೇಕು ಶಿಕ್ಷಣದ ಗುಣಮಟ್ಟ ಕಡಿಮೆಯಾಗಿರುವುದನ್ನು ಮನಗಂಡು ರಾಜ್ಯದ ಅತ್ಯುತ್ತಮ ವಿವಿಗಿರುವ ಚಾನ್ಸಲರ್‌ ಪುರಸ್ಕಾರ ಏರ್ಪ ಡಿಸಲಾಗಿದೆ. ಒಂದು ಕೋಟಿ ರೂ. ಹೊಂದಿ ರುವ ಈ ಪುರಸ್ಕಾರ ಈ ಬಾರಿ ಕೋಟಯಂ ಮಹಾತ್ಮಾಗಾಂಧಿ ವಿವಿಗೆ ಮತ್ತು ವಯನಾಡ್‌ ವೆಟರ್ನರಿ ವಿವಿಗಳಿಗೆ ಲಭಿಸಿದೆ.   
– ಪ್ರೊ|ಎಸ್‌.ವಿ.ಶೇಷಗಿರಿ ರಾವ್‌,  ಕೇರಳ-ಕೇಂದ್ರ ವಿವಿ ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next