Advertisement
ಅವರು ಶನಿವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವೀರ ಸಾವರ್ಕರ್ ಮಂಟಪದಲ್ಲಿ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಆಶ್ರಯದಲ್ಲಿ ನಡೆದ “ಭಾರತೀಯ ಶೌರ್ಯ ಪರಂಪರೆ’ ಎಂಬ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಶಿಸ್ತುಬದ್ಧ, ರಾಷ್ಟ್ರಭಕ್ತ ವಿದ್ಯಾರ್ಥಿ ಗಳನ್ನು ಹೊಂದಿರುವ ಕಲ್ಲಡ್ಕ ವಿದ್ಯಾ ಕೇಂದ್ರದಲ್ಲಿ ಮುಂದಿನ ವರ್ಷಗಳಲ್ಲಿ ಈ ವಿಚಾರ ಸಂಕಿರಣವನ್ನು ರಾಷ್ಟ್ರ ಮಟ್ಟದಲ್ಲಿ ಎರಡು ದಿನ ನಡೆಸಿದರೆ ವಿದ್ಯಾರ್ಥಿಗಳಿಗೆ ಮತ್ತಷ್ಟು ಲಾಭ ವಾಗುತ್ತದೆ ಎಂದವರು ಹೇಳಿದರು.
ನಿವೃತ್ತ ಕರ್ನಲ್ ಪ್ರೊ| ಅರವಿಂದ ಕುಮಾರ್ ಗುಪ್ತ ಮಾತನಾಡಿ, ಯುವ ವಿದ್ಯಾರ್ಥಿಗಳ ಮೇಲೆ ಸಾಮಾಜಿಕ ಹೊಣೆ ಇದ್ದು, ಸೈನ್ಯ ಸೇರುವ ಮೂಲಕ ಅದನ್ನು ನಿರ್ವಹಿಸಿ ಎಂದು ಕರೆ ನೀಡಿದರು. ಸುಳ್ಳು ಇತಿಹಾಸ
ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕೆ. ಪ್ರಭಾಕರ ಭಟ್ ಪ್ರಸ್ತಾವನೆ ನೀಡಿ, ರಾಜಕೀಯ ನಾಯಕರು ಸ್ವಾರ್ಥಕ್ಕಾಗಿ ಸುಳ್ಳು ಇತಿಹಾಸ ಸೃಷ್ಟಿಸಿದ್ದಾರೆ. ದೇಶಕ್ಕಾಗಿ ಬಲಿದಾನ ಮಾಡುವುದರ ಬದಲಾಗಿ ದೇಶಕ್ಕಾಗಿ ಬದುಕುವ ಜನರ ಅಗತ್ಯವಿದೆ. ಐರೆಲಂಡ್ ದೇಶದಲ್ಲಿ ನವ ದಂಪತಿ ವೀರ ಯೋಧರ ಸ್ಮಾರಕ ವೀಕ್ಷಿಸುವುದನ್ನೇ ಮಧುಚಂದ್ರವಾಗಿ ಆಚರಿಸುವ ಪರಿಪಾಠವಿದ್ದು, ಇದು ಮಾದರಿ ಎಂದರು.
Related Articles
Advertisement
ವಿಷಯ ಮಂಡನೆ“ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಶೌರ್ಯ ಪರಂಪರೆ’ ಬಗ್ಗೆ ಆರ್‌ಎಸ್‌ಎಸ್ ಪ್ರಾಂತ ಸಹ ಬೌದ್ಧಿಕ್ ಡಾ| ರವೀಂದ್ರ, “ಸ್ವಾತಂತ್ರೊéàತ್ತರ ಭಾರತ ದಲ್ಲಿ ಶೌರ್ಯ ಪರಂಪರೆ’ ಬಗ್ಗೆ ಸಂಸ್ಕಾರ ಭಾರತಿ ಪ್ರಾಂತ ಕಾರ್ಯದರ್ಶಿ ಆದರ್ಶ ಗೋಖಲೆ ಉಪನ್ಯಾಸ ನೀಡಿದರು. ಯೋಧರೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳು ಸ್ಫೂರ್ತಿ ಪಡೆದರು. 62 ಮಂದಿ ನಿವೃತ್ತ ಯೋಧರಿಗೆ ವೇದಿಕೆಯಲ್ಲಿ ಸಮ್ಮಾನ, ಭಾರತೀಯ ಮಿಲಿಟರಿಯಲ್ಲಿ ಬಳಕೆಯಲ್ಲಿರುವ “ಟಿ 90 ಭೀಷ್ಮ’ ಟ್ಯಾಂಕರ್ ಮಾದರಿಯ ವೇದಿಕೆ, ವೇದಿಕೆಯ ಹೊರಾಂಗಣದಲ್ಲಿ ಗಾಳಿಯಲ್ಲಿ ತೇಲುತ್ತಿದ್ದ ದೇಶೀ ನಿರ್ಮಿತ ಚೀತಾ ಹೆಲಿಕಾಪ್ಟರ್‌ನ ಪ್ರತಿಕೃತಿ, ಸೈನಿಕರ ಬಂಕರ್ ಮಾದರಿ, ಛತ್ರಪತಿ ಶಿವಾಜಿ, ಕೋಟಿ-ಚೆನ್ನಯ, ವೀರರಾಣಿ ಅಬ್ಬಕ್ಕ, ಒನಕೆ ಓಬವ್ವ ಮತ್ತಿತರ ವೇಷಧಾರಿಗಳಿದ್ದ ಸ್ತಬ್ಧಚಿತ್ರಗಳು ಗಮನ ಸೆಳೆದವು.
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಲ್ಲಡ್ಕಕ್ಕೆ ಆಗಮಿಸಿ ಈ ವಿಶಿಷ್ಟ ವಿಚಾರಸಂಕಿರಣವನ್ನು ಉದ್ಘಾಟಿಸಬೇಕಿತ್ತು. ಆದರೆ ಜಮ್ಮುವಿನ ಸಂಜ್ವಾನ್ ಮಿಲಿಟರಿ ನೆಲೆಯ ಮೇಲೆ ಉಗ್ರರ ದಾಳಿ ನಡೆದಿದ್ದು, ಸಚಿವೆ ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ.