ಮುಂಬಯಿ: ಪ್ರಸಿದ್ಧ ರಂಗನಟ, ನಾಟಕಕಾರ ಸುಬ್ರಾಯ ಭಟ್ ಅವರಿಂದ ಎರಡು ಗಂಟೆಯಲ್ಲಿ ಕನ್ನಡ ಕಲಿಯಿರಿ ಕಾರ್ಯಾಗಾರವು ಮೇ 29 ರಂದು ಸಂಜೆ ಬೊರಿವಲಿ ಪಶ್ಚಿಮದ ಐಸಿ ಕಾಲನಿಯಲ್ಲಿ ನರ್ಮದಾ ಸೊಸೈಟಿಯಲ್ಲಿ ಅಚ್ಚುಕಟ್ಟಾಗಿ ನಡೆಯಿತು.
ಕನ್ನಡ ಅಕ್ಷರಗಳನ್ನು ಬರೆಯುವುದು, ಓದುವುದು ಸೇರಿ ಚಿಕ್ಕ ಚಿಕ್ಕ ಪದ್ಯಗಳನ್ನು ಜೋಡಿಸಿ ತಮ್ಮ ಅಭಿನಯ ಕಲೆಯ ಮೂಲಕ ಕ್ರಮಬದ್ಧವಾಗಿ ಕನ್ನಡ ಕಲಿಸುವ ಈ ಶಿಬಿರದಲ್ಲಿ ಹಲವಾರು ಮಂದಿ ಪಾಲ್ಗೊಂಡಿದ್ದರು. ಕರ್ನಾಟಕ ಹರಿದಾಸ ಸೈಂಟಿಫಿಕ್ ರಿಸರ್ಚ್ ಸೆಂಟರ್ ಇದನ್ನು ಆಯೋಜಿಸಿತ್ತು. ಸುಮಾರು 25 ಮಂದಿ ಕನ್ನಡ ಕಲಿಕಾ ಶಿಬಿರದಲ್ಲಿ ಭಾಗವಹಿಸಿ ಲಾಭ ಪಡೆದರು.
ಕಾರ್ಯಕ್ರಮವು ದಿ| ಕೆ. ಎಸ್. ಜೋಶಿ ಸ್ಮರಣಾರ್ಥವಾಗಿ ಆಯೋಜಿಸಲಾಗಿದ್ದು, ಪತ್ನಿ ಯಶಸ್ವಿನಿ ಜೋಶಿ ಅವರು ನರ್ಮದಾ ಸೊಸೈಟಿಯಲ್ಲಿ ಕಾರ್ಯಾಗಾರವನ್ನು ಆಯೋಜಿಸಿದ್ದರು.
ಕೆ. ಎಸ್. ಜೋಶಿ ಅವರು ಅಪ್ಪಟ ಕನ್ನಡ ಪ್ರೇಮಿಯಾಗಿದ್ದರು. ಇಂಥಹ ಶಿಬಿರವು ಮನೆಮನೆಯಲ್ಲಿ ನಡೆದರೆ ಕನ್ನಡೇತರರಷ್ಟೆ ಅಲ್ಲ, ಕನ್ನಡ ಮಕ್ಕಳಿಗೆ ನಮ್ಮ ಸಾಹಿತ್ಯವನ್ನು ಹತ್ತಿರದಿಂದ ತಲುಪಿಸಲು ಸಾಧ್ಯವಾಗುತ್ತದೆ ಎಂದು ದೀಕ್ಷಿತ್ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕೃಷ್ಣಮೂರ್ತಿ ಜೋಶಿ ಅವರಿಗೆ ಗೌರವಾರ್ಥಕವಾಗಿ ನಡೆದ ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಸರಳ ಹಾಗೂ ಕ್ರಮಬದ್ಧವಾಗಿ ಓದುವ, ಬರೆಯುವ ತಂತ್ರವನ್ನು ಕಲಿತರು. ಯಶಿಕಾ ಕಾಮ್ಟೆ ಅವರು ವಂದಿಸಿದರು.