Advertisement
“ಎಸ್ಸೆಸ್ಸೆಲ್ಸಿ ಏನೋ ಮುಗಿಯಿತು. ಮುಂದೆ ಏನ್ ತಗೋತೀಯಾ?’ ಅಂತ ಇಂದಿನ ಮಕ್ಕಳನ್ನು ಕೇಳಿದರೆ, ತಕ್ಷಣ ಸಿಗುವ ಉತ್ತರ “ಸೈನ್ಸ್ ತಗೋತೀನಿ’ ಅಥವಾ “ಡಾಕ್ಟರ್, ಎಂಜಿನಿಯರ್ ಆಗ್ತಿàನಿ’. ಇವನ್ನು ಹೊರತುಪಡಿಸಿ ಅನೇಕ ಆಸಕ್ತಿಕರ ವಿಷಯಗಳಿವೆ. ಇವುಗಳ ಕುರಿತು ಬಹಳಷ್ಟು ವಿದ್ಯಾರ್ಥಿಗಳಿಗೆ ಅರಿವೇ ಇರುವುದಿಲ್ಲ. ನಮ್ಮ ಸುತ್ತಲಿನ ವಾತಾವರಣವೇ ಇದಕ್ಕೆ ಕಾರಣ. ಹುಟ್ಟಿದಂದಿನಿಂದ ಮಕ್ಕಳು ಕೇಳುವ ಎರಡು ಪದ “ಡಾಕ್ಟರ್- ಇಂಜಿನಿಯರ್’. ಆರ್ಟ್ಸ್ ಓದಿದವರಿಗೆ ಉದ್ಯೋಗಾವಕಾಶಗಳು ಕಡಿಮೆ ಎನ್ನುವ ಅಪನಂಬಿಕೆಯೊಂದಿದೆ. ವೃತ್ತಿ ಕೌಶಲವಿದ್ದರೆ ಕಲಾ ವಿಭಾಗದಲ್ಲಿದ್ದವರೂ ಉತ್ತಮ ಉದ್ಯೋಗಾವಕಾಶಗಳನ್ನು ಹೊಂದಬಹುದು. ಅಂದ ಹಾಗೆ ಆರ್ಟ್ಸ್ ಓದಿದವರು, ಇತಿಹಾಸದ ಸಮಗ್ರ ಅಧ್ಯಯನ ಮಾಡಿದರೆ ವಸ್ತುಸಂಗ್ರಹಾಲಯದಲ್ಲಿ ಉತ್ತಮ ಹು¨ªೆಗಳನ್ನು ಅಲಂಕರಿಸಬಹುದು.
ಇತಿಹಾಸದ ವಿಷಯದಲ್ಲಿ ಡಿಗ್ರಿ ಮುಗಿಸಿದ ಬಳಿಕ ಮ್ಯೂಜಿಯಾಲಜಿ ವಿಷಯದಲ್ಲಿ ಎಂ.ಎ ಪದವಿಯನ್ನು ಪಡೆಯಬೇಕು( ಈಗ ಈ ವಿಷಯದಲ್ಲಿ ಎಂಎಸ್ಸಿ, ಡಿಪ್ಲೋಮಾ ಪದವಿಯೂ ಇದೆ). ಜೊತೆಗೆ ಇದೇ ವಿಷಯದಲ್ಲಿ ಹೆಚ್ಚಿನ ಅಧ್ಯಯನ ನಡೆಸಿ ಪಿಎಚ್.ಡಿ ಪದವಿ ಪಡೆದರೆ ಒಳಿತು. ಸಂಗ್ರಹ ಶಾಸ್ತ್ರ, ಮಾನವಶಾಸ್ತ್ರ, ಶಸ್ತ್ರಾಸ್ತ್ರ ಮತ್ತು ರûಾ ಕವಚಗಳ ಬಗೆಗೆ ಅರಿವು, ಆಭರಣ ವಿನ್ಯಾಸಗಳ ಬಗ್ಗೆ ಅರಿವು, ವಿಶ್ವದ ಮೂಲ ಭಾಷೆ (ಸಂಸ್ಕೃತ, ಅರೇಬಿಕ್, ಪರ್ಷಿಯಾ, ಗ್ರೀಕ್, ಲ್ಯಾಟಿನ್ ಇತ್ಯಾದಿ)ಗಳ ಬಗ್ಗೆ ತಿಳಿವಳಿಕೆ, ನಾಣ್ಯಶಾಸ್ತ್ರ, ಶಿಲಾಶಾಸ್ತ್ರ, ಶಿಲಾಮುದ್ರಣ, ವಿಜ್ಞಾನ ವಿಷಯಗಳ ಸಾಮಾನ್ಯ ಜ್ಞಾನ ಅಗತ್ಯ. ಮ್ಯೂಜಿಯಾಲಜಿಯಲ್ಲಿ ದೇಶ ಸುತ್ತುವ, ಕೋಶ ಓದುವ ಎರಡೂ ಅವಕಾಶಗಳೂ ಜ್ಞಾನವನ್ನು ಹೆಚ್ಚಿಸುತ್ತದೆ.
Related Articles
Advertisement
ಹು¨ªೆಗನುಗುಣವಾಗಿ- 25 ಸಾವಿರದಿಂದ 35 ಸಾವಿರಕ್ಕೂ ಹೆಚ್ಚಿನ ಸಂಭಾವನೆ ಪಡೆಯಬಹುದು.
ಕೌಶಲ್ಯಗಳೂ ಇರಲಿ– ನಿರ್ವಹಣಾ, ಸಂವಹನ ಕೌಶಲ್ಯ
– ಆಂಗ್ಲ ಭಾಷಾ ಪರಿಣತಿ, ಗಣಕದ ಬಳಕೆ, ಪತ್ರ ವ್ಯವಹಾರ
– ಸಂಶೋಧನಾ, ಅನುವಾದ, ಸಂವಾದ ಕೌಶಲ್ಯ
– ವಸ್ತುಗಳ ವೈಜ್ಞಾನಿಕ ಹೆಸರು, ವಸ್ತುಗಳು ಸಿಗುವ ದೇಶ, ಕಾಲದ ಅರಿವು
– ವಸ್ತು ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಕರ್ತವ್ಯಗಳೇನು?
– ವಸ್ತು ಸಂಗ್ರಹಾಲಯದಲ್ಲಿ ವಸ್ತುಗಳನ್ನು ಓರಣವಾಗಿ ಜೋಡಿಸುವುದು. ಜೊತೆಗೆ ರಕ್ಷಣೆ, ಸ್ವತ್ಛತೆ ಜವಾಬ್ದಾರಿ.
– ವಸ್ತು ಸಂಬಂಧಿತ ಮಾಹಿತಿ, ಹೆಸರಿನ ಚೀಟಿಗಳನ್ನು ಆಯಾ ವಸ್ತುಗಳ ಮುಂದಿರಿಸುವುದು(ಲೇಬಲಿಂಗ್). ಜಾಗ್ರತೆ ವಹಿಸುವುದು.
– ಸಂಗ್ರಹಾಲಯಕ್ಕಾಗಿ ಐತಿಹಾಸಿಕ ಮಹತ್ವದ ವಸ್ತುಗಳನ್ನು ಖರೀದಿ ಮಾಡುವುದು.
– ವಸ್ತು ಪ್ರದರ್ಶನಗಳ ಆಯೋಜನೆ ಮಾಡುವುದು.
– ವಸ್ತುಗಳ ಬಗ್ಗೆ ರೆಕಾರ್ಡ್‌ಗಳ ನಿರ್ವಹಣೆ, ವಸ್ತು, ವಸ್ತ್ರ, ಚಿತ್ರ, ಲೋಹ, ಖನಿಜ ಮಾಹಿತಿ ಸಂಗ್ರಹ.
– ವಿಶಿಷ್ಟ ವಸ್ತುಗಳ ಹರಾಜು ಪ್ರಕ್ರಿಯೆ ನಡೆಸುವುದು. ಜೊತೆಗೆ ಆಯಾ ವಸ್ತುಗಳ ಮಾಹಿತಿ ವಿವರಿಸುವುದು. ಕೋರ್ಸಗಳು
– ಹಿಸ್ಟರಿ ಆಫ್ ಮ್ಯೂಜಿಯಂ
– ಕಲೆಕ್ಷನ್ ಮ್ಯಾನೇಜ್‌ಮೆಂಟ್
– ಮ್ಯೂಜಿಯಂ ಆರ್ಕಿಟೆಕ್ಚರ್
– ಹಿಸ್ಟರಿ ಆಫ್ ಆರ್ಕಿಯಾಲಜಿ ಆಫ್ ಇಂಡಿಯಾ
– ಹಿಸ್ಟರಿ ಆಫ್ ಆರ್ಟ್ಸ್
– ಏನ್ಷಿಯೆಂಟ್ ಹಿಸ್ಟರಿ ಅÂಂಡ್ ಆರ್ಕಿಯಾಲಜಿ
– ಫೋಕ್ ಆರ್ಟ್ ಅÂಂಡ್ ಕಲ್ಚರ್ ಆಫ್ ಇಂಡಿಯಾ ಕಾಲೇಜುಗಳು
– ಮೈಸೂರು ವಿಶ್ವವಿದ್ಯಾಲಯ (ಪ್ರಾಚೀನ ಇತಿಹಾಸ, ಪುರಾತತ್ವ ಶಾಸ್ತ್ರ ಎಂ.ಎ)
– ನ್ಯಾಷನಲ… ಮ್ಯೂಜಿಯಂ ಇನ್ಸ್‌ಟಿಟ್ಯೂಟ್ ಆಫ್ ಹಿಸ್ಟರಿ(ಎಂ.ಎ, ಪಿ.ಎಚ್.ಡಿ) ನವದೆಹಲಿ
– ವಿಕ್ರಮ್ ವಿಶ್ವವಿದ್ಯಾಲಯ(1 ವರ್ಷದ ಪಿಜಿ ಡಿಪ್ಲೋಮಾ) ಮಧ್ಯಪ್ರದೇಶ
– ಬರೋಡ ವಿಶ್ವವಿದ್ಯಾಲಯ(ಮ್ಯೂಜಿಯಾಲಜಿ ಎಂ.ಎ)
– ಕೋಲ್ಕತ್ತಾ ವಿಶ್ವವಿದ್ಯಾಲಯ(ಪಿಜಿ ಡಿಪ್ಲೋಮಾ)
– ಬನಾರಸ್ ಹಿಂದೂ ಯೂನಿವರ್ಸಿಟಿ (ಮ್ಯೂಜಿಯಾಲಜಿ ಪಿಜಿ ಡಿಪ್ಲೋಮ, ಎಂ.ಎ) – ಎನ್. ಅನಂತನಾಗ್