Advertisement

ಸ್ಥಳೀಯ ಭಾಷೆ ಕಲಿತು ವ್ಯವಹರಿಸಿ; ಬ್ಯಾಂಕ್‌ಗಳಿಗೆ ವಿತ್ತ ಸಚಿವೆ ನಿರ್ಮಲಾ ಸೂಚನೆ

12:34 AM Sep 18, 2022 | Team Udayavani |

ಮುಂಬಯಿ : “ಬ್ಯಾಂಕ್‌ಗಳ ಲ್ಲಿ ಜನರ ಜತೆಗೆ ನೇರವಾಗಿ ವ್ಯವಹಾರ ಮಾಡುವವರು ಸ‌§ಳೀಯ ಭಾಷೆ ತಿಳಿದಿರ ಬೇಕು. ಹಿಂದಿ ಭಾಷೆ ತಿಳಿಯದೇ ಇದ್ದ ಗ್ರಾಹಕರು ದೇಶಭಕ್ತಿ ಹೊಂದಿಲ್ಲ ಎಂದು ಪರಿಗಣಿಸಬಾರದು’ - ಹೀಗೆಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬ್ಯಾಂಕ್‌ಗಳ ಆಡಳಿತ ಮಂಡಳಿಗಳಿಗೆ ಸೂಚಿಸಿದ್ದಾರೆ.

Advertisement

ಕರ್ನಾಟಕದ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸ ಲಾಗುತ್ತದೆ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ವಿತ್ತ ಸಚಿವರು ಶುಕ್ರವಾರ ನಡೆದಿದ್ದ ಭಾರತೀಯ ಬ್ಯಾಂಕ್‌ಗಳ ಒಕ್ಕೂಟದ ಸಭೆಯಲ್ಲಿ ಈ ಆದೇಶ ನೀಡಿದ್ದಾರೆ.

“ಸ್ಥಳೀಯ ಭಾಷೆಗಳನ್ನು ತಿಳಿಯದೇ ಇರುವವರು ಬ್ಯಾಂಕ್‌ನ ಶಾಖೆಗಳಲ್ಲಿ ಉದ್ಯೋಗದಲ್ಲಿ ಇರಲು ಸಾಧ್ಯವಿಲ್ಲ. ಜತೆಗೆ ಅಧಿಕಾರಿಗಳು ನಿಗದಿತ ಭಾಷೆ ಯಲ್ಲಿಯೇ ಮಾತನಾಡಬೇಕು.ಇಲ್ಲದೇ ಇದ್ದರೆ ಅವರು ದೇಶದ ಪ್ರಜೆಗಳೇ ಅಲ್ಲ ಎನ್ನುವಂತಿಲ್ಲ ಎಂದು ಹೇಳಿದರು.

ಒಂದು ವೇಳೆ ನಿಗದಿತ ಬ್ಯಾಂಕ್‌ ಶಾಖೆಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ವ್ಯವಹರಿಸಲು ಸಾಧ್ಯವಾಗದಿರುವ ಅಧಿ ಕಾರಿಯನ್ನು ಗ್ರಾಹಕರ ಜತೆಗಿನ ನೇರ ವ್ಯವಹಾರದಿಂದ ದೂರವಿಡಬೇಕು ಎಂದೂ ಸೂಚಿಸಿದ್ದಾರೆ.

ಭಾಷೆ ಕಲಿಯಲು ಅಡ್ಡಿ ಏನು?
ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಸ್ಥಳೀಯ ಭಾಷೆ ಕಲಿಯಲು ಅಡ್ಡಿ ಏನು ಎಂದು ಪ್ರಶ್ನಿಸಿರುವ ವಿತ್ತ ಸಚಿವೆ, “ನಾನು ದಕ್ಷಿಣ ಭಾರತದಿಂದ ಬಂದವಳು. ಹಿಂದಿಯನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ. ನನ್ನ ಕರ್ಮ ಭೂಮಿ ಇಲ್ಲಿ ಇರುವಾಗ ಸ್ಥಳೀಯ ಭಾಷೆಯನ್ನು ಕಲಿಯ ಲೇಬೇಕು’ ಎಂದರು.

Advertisement

ವರ್ಗಾವಣೆ ಹೇಗೆ?
ಸ್ಥಳೀಯ ಭಾಷೆ ಅರಿಯದ ಅಧಿಕಾರಿಗಳನ್ನು ಆ ಪ್ರದೇಶಕ್ಕೆ ಭಾರತೀಯ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ ಹೇಗೆ ವರ್ಗಾಯಿಸುತ್ತದೆ ಎಂಬುದೇ ಅರ್ಥವಾಗದು ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ಅವರು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next