ಮಡಿಕೇರಿ: ಯಾವುದೇ ಗೊಂದಲ ಅಥವಾ ಚುನಾವಣೆಗಳಿಗೆ ಅವಕಾಶ ನೀಡದೆ ಅರ್ಹರನ್ನು ಮಡಿಕೇರಿ ದಸರಾ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು. ಈ ಬಾರಿ ದಸರಾ ಸಮಿತಿಯ ಅಧ್ಯಕ್ಷರು ಜಿಲ್ಲಾಧಿಕಾರಿಗಳೇ ಆಗಿರುವುದರಿಂದ ಕಾರ್ಯಾಧ್ಯಕ್ಷರು ಹಾಗೂ ಜಂಟಿ ಕಾರ್ಯದರ್ಶಿಗಳ ಮೇಲೆ ಹೆಚ್ಚಿನ ಜವಬ್ದಾರಿ ಇರುತ್ತದೆ. ಆದ್ದರಿಂದ ಹಿರಿಯರು ಮತ್ತು ಅನುಭವಿಗಳ ಮಾರ್ಗದರ್ಶನದಲ್ಲಿ ಒಗ್ಗೂಡಿ ಅವಿರೋಧವಾಗಿ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಬೇಕೆಂದು ಮಡಿಕೇರಿ ನಗರ ದಸರಾ ದಶಮಂಟಪ ಸಮಿತಿಯ ಪ್ರಥಮ ಸಭೆಯಲ್ಲಿ ನಿರ್ಧರಿಸಲಾಗಿದೆ.
ನಗರಸಭೆ ಮಾಜಿ ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಮಾತನಾಡಿ, ಈ ಭಾರಿ ರಾಜ್ಯದ ವಿವಿಧೆಡೆ ಜಲಪ್ರವಾಹ ಉಂಟಾಗಿದೆ. ನಾವು ಸರಕಾರದಿಂದ ದೊಡ್ಡ ಮಟ್ಟದ ಅನುದಾನವನ್ನು ನಿರೀಕ್ಷೆ ಮಾಡುವುದು ಕೂಡ ತಪ್ಪಾಗುತ್ತದೆ ಎಂದರು.
ಪ್ರಮುಖರಾದ ರಾಬಿನ್ ದೇವಯ್ಯ ಮಾತನಾಡಿ, ನೂತನ ಸರಕಾರ ರಚನೆಯಾಗಿ ಕೆಲವು ದಿನಗಳು ಮಾತ್ರ ಕಳೆದಿದೆ. ಇನ್ನೂ ಕೂಡ ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕವಾಗಿಲ್ಲ. ಬೆರಳೆಣಿಕೆಯ ದಿನಗಳಲ್ಲಿ ದಸರಾ ಬಗ್ಗೆ ಸೂಕ್ತ ತೀರ್ಮಾನವನ್ನು ಕೈಗೊಳ್ಳಬೇಕಿದೆ ಎಂದರು. ನಗರಸಭಾ ಮಾಜಿ ಸದಸ್ಯ ಕೆ.ಎಸ್.ರಮೇಶ್ ಮಾತನಾಡಿ, ಕಳೆದ ಬಾರಿಯ ದಸರಾ ಅನುದಾನ ಬಾರದ ಹಿನ್ನೆಲೆಯಲ್ಲಿ ಸಾಲಗಾರರಾಗುವ ಸ್ಥಿತಿ ಬಂದಿದೆ. ಸರಕಾರ ನೀಡುವ ಅನುದಾನವನ್ನು ಆಧರಿಸಿ ದಸರಾ ಆಚರಿಸುವ ಅನಿವಾರ್ಯ ಬಂದೊದಗಿದೆ ಎಂದರು. ಸಮಿತಿಯ ಕಾರ್ಯದರ್ಶಿ ಎಂ.ಎಲ್.ಸತೀಶ್, ಉಪಾಧ್ಯಕ್ಷ ಎಂ.ರತಿಕೇಶನ್, ಪ್ರಮುಖರಾದ ಸುಬ್ರ ಮಣಿ, ಶಿವರಾಂ, ಅನಿತಾ ಪೂವಯ್ಯ, ರವಿ ಕುಮಾರ್, ನಾಗರಾಜ್, ದೇವಾಲಯ ಸಮಿತಿಗಳ ಪದಾಧಿಕಾರಿಗಳು ಸಲಹೆ ಸೂಚನೆ ನೀಡಿದರು.
ಹಣ ಬರುವ ವಿಶ್ವಾಸ ಹಾಲಿ ದಸರಾ ಸಮಿತಿಯ ಅಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಕಳೆದ ವರ್ಷ ಕೊಡಗಿನಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಸರಳವಾಗಿ ದಸರಾವನ್ನು ಆಚರಿಸಲಾಯಿತು. ಆದರೆ ಇಂದಿನವರೆಗೂ ಕಳೆದ ಬಾರಿಯ ಹಣವೇ ಬಿಡುಗಡೆಯಾಗಿಲ್ಲ. ಈ ಬಗ್ಗೆ ಈಗಾಗಲೇ ಚರ್ಚೆ ನಡೆದಿದ್ದು, ಮುಂದಿನ ಒಂದು ವಾರದೊಳಗೆ ಹಣ ಬರುವ ವಿಶ್ವಾಸವಿದೆ ಎಂದರು.
Advertisement
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸಮಿತಿಯ ಅಧ್ಯಕ್ಷ ಸಿ.ಎಸ್.ರಂಜಿತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಾಧ್ಯಕ್ಷ, ಉಪಾಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿಗಳ ಸ್ಥಾನಕ್ಕೆ ಹಲವು ಹೆಸರುಗಳು ಕೇಳಿ ಬಂದವಾದರೂ ಆ.27 ರಂದು ಮತ್ತೂಂದು ಸಭೆ ನಡೆಸಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.
Related Articles
Advertisement
ದಶಮಂಟಪ ಸಮಿತಿಯ ಅಧ್ಯಕ್ಷ ಸಿ.ಎಸ್.ರಂಜಿತ್ ಕುಮಾರ್ ಮಾತನಾಡಿ, ದಸರಾಗೆ ಕೆಲವೇ ದಿನಗಳು ಉಳಿದಿದೆ. ಒಕ್ಕೊರಲಿನಿಂದ ಆಯ್ಕೆಪ್ರಕ್ರಿಯೆ ನಡೆದು ದಸರಾ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ ಎಂದು ಸಭೆಯ ಗಮನ ಸೆಳೆದರು.
ಕಾವೇರಿ ಕಲಾಕ್ಷೇತ್ರದಲ್ಲಿ ಸಮಿತಿಯ ಅಧ್ಯಕ್ಷ ಸಿ.ಎಸ್.ರಂಜಿತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.