Advertisement

4ನೇ ದಶಕಕ್ಕೆ ಲಿಯಾಂಡರ್‌ ಪೇಸ್‌ ಆಟ

10:13 AM Jun 02, 2019 | Sriram |

ಹೊಸದಿಲ್ಲಿ: ವಿಶ್ವ ಟೆನಿಸ್‌ನ ಹಿರಿಯ ಡಬಲ್ಸ್ ಆಟಗಾರರಾಗಿರುವ ಭಾರತದ ಲಿಯಾಂಡರ್‌ ಪೇಸ್‌, ಫ್ರೆಂಚ್ ಓಪನ್‌ ಟೆನಿಸ್‌ನ ಡಬಲ್ಸ್ ಪಂದ್ಯದಲ್ಲಿ ಸೋತು ಹೋಗಿದ್ದಾರೆ. ಆದರೂ ದಾಖಲೆಯೊಂದನ್ನು ಸ್ಥಾಪಿಸಿದ್ದಾರೆ. ಇದಕ್ಕೂ ಹಿಂದಿನ ಪಂದ್ಯದಲ್ಲಿ ಗೆದ್ದ ಪೇಸ್‌, ಫ್ರೆಂಚ್ ಓಪನ್‌ನಲ್ಲಿ ಪುರುಷರ ಡಬಲ್ಸ್ ಪಂದ್ಯ ಗೆದ್ದ ಅತೀ ಹಿರಿಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

Advertisement

ಪೇಸ್‌ ವೃತ್ತಿಪರ ಟೆನಿಸ್‌ ಪ್ರವೇಶಿಸಿ 30 ವರ್ಷ ಆಗಿದೆ. ಈಗವರು ನಾಲ್ಕನೇ ದಶಕಕ್ಕೆ ಕಾಲಿಡುವ ಲೆಕ್ಕಾಚಾರದಲ್ಲಿದ್ದಾರೆ. ಅಂದಹಾಗೆ ಅವರ ವಯಸ್ಸೀಗ 46 ವರ್ಷ!

ಒಲಿಂಪಿಕ್ಸ್‌ ದಾಖಲೆ
ಒಲಿಂಪಿಕ್ಸ್‌ನಲ್ಲಿ ಅತೀ ಹೆಚ್ಚು 7 ಬಾರಿ ಆಡಿರುವ ವಿಶ್ವದಾಖಲೆ ಹೊಂದಿರುವ ಪೇಸ್‌, ಇನ್ನೂ ನಿವೃತ್ತಿಯಾಗುವ ಮನಸ್ಸಿನಲ್ಲಿಲ್ಲ. ಮುಂದಿನ ವರ್ಷ ಟೋಕಿಯೋದಲ್ಲಿ ನಡೆಯುವ ಒಲಿಂಪಿಕ್ಸ್‌ ಮುಗಿದ ಬಳಿಕ ನಿವೃತ್ತಿಯಾಗುವುದೋ, ಬೇಡವೋ ಎಂಬ ಯೋಚನೆ ಮಾಡು ತ್ತಾರಂತೆ. ಅದಕ್ಕೂ ಮಿಗಿಲಾಗಿ ಅವರು 12ನೇ ಪೀಳಿಗೆಗಳನ್ನು ನೋಡಿದ್ದಾರೆ.

ಒಂದು ಸಾವಿರ ರ್ಯಾಕೆಟ್!
ಪೀಟ್ ಸಾಂಪ್ರಾಸ್‌, ಪ್ಯಾಟ್ ರ್ಯಾಫ್ಟರ್‌ ಅವರಿಂದ ಹಿಡಿದು ನಡಾಲ್, ಫೆಡರರ್‌ವರೆಗೆ ಜತೆ ಗೂಡಿ ಆಡಿದ್ದಾರೆ. ಅವರಲ್ಲಿ ಅವರು ಯಾರ್ಯಾರ ಜೊತೆಯಲ್ಲಿ ಆಡಿದ್ದಾರೊ, ಅವರೆಲ್ಲರ ರ್ಯಾಕೆಟ್‌ಗಳೂ ಇವೆ. ಪೇಸ್‌ 1000 ರ್ಯಾಕೆಟ್‌ಗಳನ್ನು ಸಂಗ್ರಹಿಸಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next