Advertisement

ಡೇವಿಸ್‌ ಕಪ್‌ ಡಬಲ್ಸ್‌ ಅತೀ ಹೆಚ್ಚು ಗೆಲುವು: ಪೇಸ್‌ ವಿಶ್ವ ದಾಖಲೆ

11:16 AM Apr 07, 2018 | udayavani editorial |

ತಿಯಾಂಜಿನ್‌ : ಭಾರತದ ಹಿರಿಯ ಟೆನಿಸ್‌ ಪಟು ಲಿಯಾಂಡರ್‌ ಪೇಸ್‌ ಅವರು ಇಂದು ಶನಿವಾರ ಡೇವಿಸ್‌ ಕಪ್‌ ಇತಿಹಾಸದಲ್ಲೇ ಅತೀ ಹೆಚ್ಚು ಡಬಲ್ಸ್‌ ಪಂದ್ಯಗಳನ್ನು ಜಯಿಸಿದ ವಿಶ್ವ ದಾಖಲೆಯನ್ನು ಮಾಡಿದರು.

Advertisement

ಪೇಸ್‌ ಅವರು ರೋಹನ್‌ ಬೊಪಣ್ಣ ಅವರ ಜತೆಗೂಡಿ 43ನೇ ಡಬಲ್ಸ್‌ ವಿಜಯವನ್ನು ದಾಖಲಿಸಿದರಲ್ಲದೆ ಆ ಮೂಲಕ ಚೀನದೊಂದಿಗಿನ ಸೆಣಸಾಟಕ್ಕೆ ಮತ್ತೆ ಭಾರತವನ್ನು ತಂದು ನಿಲ್ಲಿಸಿದರು.

ಎಐಟಿಎ ಬಲವಂತದಿಂದ ಬೋಪಣ್ಣ ಜತೆಗೂಡಿ ಆಟವಾಡಿದ 44ರ ಹರೆಯದ ಪೇಸ್‌ ಅವರು ಚೀನದ ಜೋಡಿ ಮೋ ಕ್ಸಿನ್‌ ಗಾಂಗ್‌ ಮತ್ತು ಝಿ ಝಾಂಗ್‌ ವಿರುದ್ದದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 5-7, 7-6(5), 7-6(3) ಅಂತರದಲ್ಲಿ ವಿಜಯಗಳಿಸುವಲ್ಲಿ ಮುಖ್ಯ ಪಾತ್ರವಹಿಸಿದರು. ಆ ಮೂಲಕ ಏಶ್ಯ/ಒಸಾನಿಯಾ ಗ್ರೂಪ್‌ 1 ಟೈಯಲ್ಲಿ ಡಬಲ್ಸ್‌ ರಬ್ಬರ್‌ ಸಂಪಾದಿಸಿದರು. 

ನಿನ್ನೆ ಶುಕ್ರವಾರ ರಾಮ್‌ಕುಮಾರ್‌ ರಾಮನಾಥನ್‌ ಮತ್ತು ಸುಮಿತ್‌ ನಗಾಲ್‌ ಜೋಡಿಗೆ ಅಚ್ಚರಿಯ ಸೋಲು ಉಂಟಾಗಿದ್ದರಿಂದ ಭಾರತವನ್ನು ಈ ಸರಣಿಯಲ್ಲಿ ಸ್ಪರ್ಧೆಯಲ್ಲಿ ಇರಿಸಲು ಡಬಲ್ಸ್‌ ಜಯಿಸುವುದು ಅನಿವಾರ್ಯವೂ ಅಗತ್ಯವೂ ಆಗಿತ್ತು. ಆ ಅಗತ್ಯವನ್ನು ಪೇಸ್‌ – ಬೋಪಣ್ಣ ಜೋಡಿ ಸಮರ್ಥವಾಗಿ ನಿಭಾಯಿಸಿತು. 

ಭಾರತದ ಯುವಕರು ಈಗಿನ್ನು ವಿಶ್ವ ಕಪ್‌ ಪ್ಲೇ ಆಫ್ ಹಂತಕ್ಕೇರಲು  ರಿವರ್ಸ್‌ ಸಿಂಗಲ್ಸ್‌ನಲ್ಲಿ ತಮ್ಮ ಯಶಸ್ವೀ ಹೋರಾಟವನ್ನು ಸಾದರಪಡಿಸಬೇಕಾಗುತ್ತದೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next