Advertisement

ಲೀನವೋ, ವಿಲೀನವೋ

07:30 AM Jul 31, 2017 | Harsha Rao |

ಸರ್ಕಾರ,  ಐದು ಸಹವರ್ತಿ ಬ್ಯಾಂಕುಗಳನ್ನು ಮತ್ತು  ಭಾರತೀಯ ಮಹಿಳಾ ಬ್ಯಾಂಕನ್ನು ಏಪ್ರಿಲ್‌ 1, 2017 ರಂದು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ವಿಲೀನಗೊಳಿಸಿದೆ.  

Advertisement

ಕಳೆದ ಏಪ್ರಿಲ್‌ ತಿಂಗಳಲ್ಲಿ ಐದು ಸಹವರ್ತಿ ಬ್ಯಾಂಕ್‌ಗಳ ವಿಲೀನ ಆಗಿದ್ದು ನಿಮಗೆ ಗೊತ್ತೇ ಇದೆ.  ಇದರ ಪರಿಣಾಮವಾಗಿ ಈಗ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ, ಜಗತ್ತಿನ  45 ನೇ ಅತಿ ದೊಡ್ಡ  ಬ್ಯಾಂಕ್‌ ಅಗಿದ್ದು , 36 ದೇಶಗಳಲ್ಲಿ  190 ವಿದೇಶೀ ಶಾಖೆಗಳೂ ಸೇರಿ 25, 000 ಸಾವಿರಕ್ಕೂ   ಹೆಚ್ಚು ಶಾಖೆಗಳು ಮತ್ತು  58, 000 ಎಟಿಎಂಗಳನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ.   ದೇಶದ ಒಟ್ಟೂ  ಬ್ಯಾಂಕಿಂಗ್‌ ವ್ಯವಹಾರದ ಶೇ.22ರಷ್ಟು ಪಾಲನ್ನು   ನಿರ್ವಹಿಸುವ  ಈ ಬ್ಯಾಂಕ್‌,  ತನ್ನ 2.77 ಲಕ್ಷ ಸಿಬ್ಬಂದಿಗಳ ಮೂಲಕ 50  ಕೋಟಿ  ಗ್ರಾಹಕರಿಗೆ ಸೇವೆ ಸಲ್ಲಿಸುತ್ತಾ 41 ಲಕ್ಷ ಕೋಟಿ ಮೌಲ್ಯದ ಬ್ಯಾಲೆನ್ಸ್‌ ಶೀಟ…  (ಠೇವಣಿ+ ಸಾಲ) ತೋರಿಸುತ್ತಿದೆ. ದಿನಬೆಳಗಾಗುವುದರೊಳಗಾಗಿ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ  3 ಕೋಟಿ ಹೊಸ ಗ್ರಾಹಕರ ಸೇರ್ಪಡೆಯೊಂದಿಗೆ 10 ಲಕ್ಷ ಕೋಟಿ ವ್ಯವಹಾರವನ್ನು ವೃದ್ದಿಸಿಕೊಂಡಿತು. 

ಈ ಏರಿಕೆ ದೇಶದ ಎರಡನೇ ದೊಡ್ಡ  ಬ್ಯಾಂಕ್‌ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಗೆ ಸಮ. ಈ ವಿಲೀನ,  ಜಗತ್ತು ಕಂಡ ಅತಿ ದೊಡ್ಡ ಬ್ಯಾಂಕ್‌ ವಿಲೀನ ಮತ್ತು  ಯಾವುದೇ ಗೊಂದಲ,ಘರ್ಷಣೆ, ತಿಕ್ಕಾಟ ಮತ್ತು ವಿವಾದವಿಲ್ಲದ ನೋವು ರಹಿತ ಪ್ರಕ್ರಿಯೆ ಯಾಗಿತ್ತು ಎಂಬ ಹೆಗ್ಗಳಿಕೆ ಕೂಡ ಇದೆ. 

ಈ  ಸುಗಮ ವಿಲೀನ ಪ್ರಕ್ರಿಯೆಯಿಂದ ಉತ್ತೇಜಿತವಾದ ಸರ್ಕಾರ ಇನ್ನುಳಿದ  ಬ್ಯಾಂಕುಗಳ ವಿಲೀನವನ್ನೂ ಕೂಡಲೇ  ಕೈಗೆತ್ತಿಕೊಂಡು ಯುಧ್ದೋಪಾದಿಯಲ್ಲಿ ಮುಗಿಸಬಹುದು ಎನ್ನುವ  ನಿರೀಕ್ಷೆ ಇತ್ತು.  ಈ ನಿರೀಕ್ಷೆಗೆ ಇಂಬು ಕೊಡುವಂತೆ , ಈ ನಿಟ್ಟಿನಲ್ಲಿ ನಿರಂತರವಾಗಿ ಹೇಳಿಕೆಗಳು, ಭಾಷ್ಯಗಳು ಬರತೊಡಗಿದವು. ದಿನಕ್ಕೊಂದು ಊಹೆಗಳು, ವದಂತಿಗಳು ಕಾಣ ತೊಡಗಿದವು.  

ಬ್ಯಾಂಕುಗಳ ವಿಲೀನದ ಮೊದಲ ಸುತ್ತು ಮುಗಿದು ಈಗ  ಮೂರು ತಿಂಗಳಾಗಿವೆ.  ಮುಂದಿನ  ವಿಲೀನದ  ಬಗೆಗೆ ಯಾವುದೇ ಅಧಿಕೃತ ಮತ್ತು ದೃಢವಾದ ಮಾಹಿತಿಗಳು ಇಲ್ಲ. ವಿಷಾದವೆಂದರೆ ವಿಲೀನದ ಮಾನದಂಡವೇ ಈವರೆಗೂ ನಿರ್ಧಾರವಾದಂತಿಲ್ಲ. ಈ ನಿಟ್ಟಿನಲ್ಲಿ ದಿನಕ್ಕೊಂದು  ಮಾನದಂಡದ ವದಂತಿಗಳು ಬರುತ್ತಿದ್ದು,  ಪರಿಣಾಮವಾಗಿ ಕೆಲವು ಬ್ಯಾಂಕುಗಳ ಶೇರುಗಳು ಮಾರುಕಟ್ಟೆಯಲ್ಲಿ ಏರು ಪೇರು ಕಾಣುತ್ತಿವೆ. 

Advertisement

ಬ್ಯಾಂಕ್‌ ಸಿಬ್ಬಂದಿಗಳು ಮುಂದೇನು ಎಂದು  ಅಂತ್ಯ ಕಾಣದ ಚರ್ಚೆಯಲ್ಲಿ ಮಗ್ನರಾಗಿ¨ªಾರೆ. ಮುಂದಿನ ಬೆಳವಣಿಗೆಯನ್ನು ಚಾತಕ ಪಕ್ಷಿಯಂತೆ ಕಾತುರದಿಂದ  ನಿರೀಕ್ಷಿಸುತ್ತಿ¨ªಾರೆ. ಬ್ಯಾಂಕುಗಳ ಅವರಣದಲ್ಲಿ ಮಾಮೂಲು ಚರ್ಚೆಯ ವಿಷಯವಾದ ಸುಸ್ತಿ ಸಾಲ ವಸೂಲಿ,  ಹೆಚ್ಚು ಸಾಲ ವಿತರಣೆ, ಹೆಚ್ಚು ಜನರನ್ನು ಬ್ಯಾಂಕಿಂಗ್‌ಗೆ ಒಳಪಡಿಸುವುದು, ವೇತನ ಪರಿಷ್ಕರಣೆ. ಖಾಸಗೀಕರಣ, ಹೊಸ ನೇಮಕಾತಿ, ಬಡ್ತಿ ಮತ್ತು ವರ್ಗಾವರ್ಗಿಗಳೊಂದಿಗೆ, ಈಗ ಬ್ಯಾಂಕುಗಳ  ವಿಲೀನ ಹೊಸತಾಗಿ ಸೇರಿದ್ದು,  ಹೆಚ್ಚಿನ ಸಮಯವನ್ನು ಬಳಸಿಕೊಳ್ಳುತ್ತಿದೆ.  ಬ್ಯಾಂಕ್‌ ಬೋರ್ಡ್‌ ಬ್ಯೂರೊ ಮುಖ್ಯಸ್ತ ವಿನೋದ್‌ ರೈ, ರಿಸರ್ವ್‌ ಬ್ಯಾಂಕ್‌  ಗವರ್ನರ್‌, ಉದ್ದಿತ… ಪಟೇಲ…, ಹಣಕಾಸು ಮಂತ್ರಿ ಅರುಣ ಜೇಟಿÉ, ನೀತಿ ಅಯೋಗದ ಚೇರ್‌ ಮನ್‌  ಪಾಣಿಗ್ರಾಹಿ ಮತ್ತು ಹಣಕಾಸು ಇಲಾಖೆಯ  ಉನ್ನತ ಅಧಿಕಾರಿಗಳುವಿಲೀನದ ಅವಷ್ಯಕತೆಯನ್ನು  ನಿರಂತರವಾಗಿ ಒತ್ತಿ ಹೇಳುತ್ತಿದ್ದು, ಸದ್ಯದಲ್ಲಿಯೇ ವಿಲೀನ ವಾಗುತ್ತದೆ ಎನ್ನುತ್ತಿ¨ªಾರೆ. ಆದರೆ,  ಲಭ್ಯ ಇರುವ  ಮಾಹಿತಿ ಮತ್ತು ಬೆಳವಣಿಗೆ ಪ್ರಕಾರ ಯಾವುದೇ  ದೃಢವಾದ  ಹೆಜ್ಜೆ ಕಾಣುತ್ತಿಲ್ಲ.

ವಿಲೀನ ಯಾವ ರೀತಿ ಆಗಬಹುದು ?
ಈಗಾಗಲೇ ಸರ್ಕಾರದ ಮನಸ್ಸಿನಲ್ಲಿ ಎರಡನೇ ಸುತ್ತಿನ ಬ್ಯಾಂಕ್‌ ವಿಲೀನಕ್ಕೆ ಗಟ್ಟಿಯಾದ  ನಿರ್ಧಾರ ಮಾಡಿಯಾಗಿದೆ. ಕೇಂದ್ರ ಕೆಲ ಮಂತ್ರಿಗಳ ಮಾತುಗಳಲ್ಲಿ ಇದು ಇಣುಕುತ್ತಿದೆ. ಪ್ರಸ್ತುತ  ಅಂತರಾಷ್ಟ್ರೀಯ ಮಟ್ಟದಮೂರು ಬ್ಯಾಂಕುಗಳು, 8-10 ರಾಷ್ಟ್ರೀಯ ಬ್ಯಾಂಕುಗಳು,  ಪ್ರಾದೇಶಿಕ ಮತ್ತು ಸ್ಥಳೀಯ ಬ್ಯಾಂಕುಗಳು,5-6 ದೊಡ್ಡ ಬ್ಯಾಂಕುಗಳು ಎನ್ನುವ ಅಭಿಪ್ರಾಯಗಳು ಸದ್ಯ ನೇಪಥ್ಯಕ್ಕೆ ಸರಿದಿದೆ. 21 ಬ್ಯಾಂಕುಗಳನ್ನು 10-11 ಬ್ಯಾಂಕುಗಳನ್ನಾಗಿ ಪರಿವರ್ತಿಸಬೇಕು ಎನ್ನುವ   ಮಾತು ತೀರಾ ಇತ್ತೀಚೆಗೆ ಕೇಳಿಬರುತ್ತಿದೆ.  

ಹಾಗೆಯೇ  ಪಂಜಾಬ್ ಮತ್ತು ಸಿಂಧ್‌ ಬ್ಯಾಂಕ್, ಆಂಧ್ರಬ್ಯಾಂಕಗಳನ್ನು ಅವುಗಳ ಪ್ರಾದೇಶಿಕತೆಗಾಗಿ ಉಳಿಸಿಕೊಳ್ಳಬೇಕು  ಎನ್ನುವ ಅಭಿಪ್ರಾಯವೂ  ಕೇಳಿಬರುತ್ತಿದೆ. ಈ ಪ್ರಾದೇಶಿಕತೆಯ ಮಾನದಂಡ ಇನ್ನೂ ಹೊರಬರಬೇಕಾಗಿದ್ದು, ಬೇರೆ ಕೆಲವು ಬ್ಯಾಂಕ್‌ಗಳು ವಿಲೀನದ  ಹುಕ್‌ ಅನ್ನು  ತಪ್ಪಿಸಿಕೊಳ್ಳಲು ಪ್ರಾದೇಶಿಕತೆಯ  ಕಾರ್ಡ್‌ ಅನ್ನು  ತೋರಿಸುವುದನ್ನು  ತಳ್ಳಿ ಹಾಕಲಾಗದು. ಈ ಪ್ರಸ್ತಾವನೆಯ ಹಿಂದೆ  ಕೆಲವು  ರಾಜಕಾರಿಣಿಗಳು ಮತ್ತು ಬ್ಯಾಂಕರ… ಗಳು  ಗೌಪ್ಯ ಅಜೆಂಡಾವನ್ನು ಸಂದೇಹಿಸುತ್ತಿ¨ªಾರೆ.  ಈ ರೀತಿ ಒಂದೆರಡು ಬ್ಯಾಂಕುಗಳನ್ನು ವಿಲೀನ ದ ಕೊಂಡಿಯಿಂದ  ತಪ್ಪಿಸುವುದು  ವಿಲೀನ ಪ್ರಕ್ರಿಯೆಯನ್ನು  ಹಳಿ ತಪ್ಪಿಸವುದನ್ನು ಅಥವಾ ವಿಳಂಬ ಮಾಡುವುದನ್ನು ಅಲ್ಲಗೆಳೆಯಲಾಗದು. ಕಾನೂನು, ನೀತಿ-ನಿಯಮಾವಳಿಗಳು, ಉದ್ದೇಶಗಳು ಮತ್ತು ಮಾನದಂಡಗಳು ಏಕರೂಪವಾಗಿರಬೇಕು ಎನ್ನುವ ವಾದ  ಬಲಗೊಂಡರೆ ಆಶ್ಚರ್ಯವಿಲ್ಲ.

ಈ ಮಧ್ಯೆ ಬ್ಯಾಂಕ್ ಕಾರ್ಮಿಕ ಸಂಘಗಳು ಬ್ಯಾಂಕುಗಳ ವಿಲೀನದ ವಿರುದ್ಧ ತಮ್ಮ ಕೆಂಪು ಬಾವುಟವನ್ನು ಹಾರಿಸುತ್ತಿ¨ªಾರೆ. ಮುಂದಿನ ದಿನಗಳಲ್ಲಿ ಅವರು ತಮ್ಮ ಹೋರಾಟವನ್ನು ತೀವ್ರಗೊಳಿಸುವ  ಎಚ್ಚರಿಕೆಯನ್ನು ನೀಡಿ¨ªಾರೆ.  ಈ ವಿಲೀನದಿಂದ  ಹಲವು ಶಾಖೆಗಳು ಮುಚ್ಚುವ ಭಯವಿದ್ದು, ಶಾಖೆಗಳ  overlapping ಹೆಸರಿನಲ್ಲಿ, ಹೆಚ್ಚು ಲಾಭ ಮಾಡದ  ಗ್ರಾಮಾಂತರ   ಶಾಖೆಗಳು ಬಲಿಯಾಗಬಹುದೆಂಬ ಆರೋಪವೂ ಇದೆ.  ಸದ್ಯದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮಿನಿಸಿದರೆ, ವಿಲೀನದ ಎರಡನೇ ರೌಂಡ…  ಕವಲು ಹಾದಿಯಲ್ಲಿ,  ಸ್ವಲ್ಪ ಗೊಂದಲದಲ್ಲಿ ಇದ್ದಂತೆ ಕಾಣುತ್ತದೆ. 21 ಬ್ಯಾಂಕುಗಳನ್ನು ಎಷ್ಟು ಬ್ಯಾಂಕ್‌ ಗಳನ್ನಾಗಿ ಪರಿವರ್ತಿಸಬೇಕು,  ಸದೃಢ- ದುರ್ಬಲ,  ಸದೃಢ-ಸದೃಢ, ದುರ್ಬಲ- ದುರ್ಬಲ, ಉತ್ತರ-ದಕ್ಷಿಣ. ಉತ್ತರ-ಉತ್ತರ, ದಕ್ಷಿ$ಣ-ದಕ್ಷಿ$ಣ  ಬ್ಯಾಂಕುಗಳು. ಹೀಗೆ  ವಿಲೀನದ ಮಾನದಂಡ ನಿರ್ಧಾರವಾದಾಗಲೇ ವಿಲೀನದ ಮಾತು ತೂಕವನ್ನು ಪಡೆಯುತ್ತದೆ. ಈ ಮಾನದಂಡ  ನಿರ್ಧಾರದಲ್ಲಿ ನಿರ್ಣಯ ತೆಗೆದುಕೊಳ್ಳುವುದು  ವಿಳಂಬವಾಗಿರುವುದು. ಈ ಗೊಂದಲದ ಹಿಂದಿನ ಕಾರಣ ಎಂದು  ವಿಶ್ಲೇಷಕರು ಭಾಷ್ಯ ಬರೆಯುತ್ತಿ¨ªಾರೆ.

ವಿಲೀನ ಏಕೆ?
ನಮ್ಮಲ್ಲಿ ಬ್ಯಾಂಕ್‌ಗಳ ಸಂಖ್ಯೆ ಹೆಚ್ಚಿದೆ. ನಿರ್ಹವಣೆ ವೆಚ್ಚ ಕೂಡ ಹೆಚ್ಚಾಗಿದೆ. ಈ ಕಾರಣದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಬ್ಯಾಂಕ್‌ಗಳ ಬಗ್ಗೆ ಅಷ್ಟಾಗಿ ಒಲವಿಲ್ಲ. ಮುಖ್ಯವಾಗಿ ನಮ್ಮ ಬ್ಯಾಂಕ್‌ಗಳು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದಲ್ಲಿ ಇಲ್ಲ ಎನ್ನುವ ಆರೋಪವೂ ಇದೆ.  ಇವೆಲ್ಲ ಕಾರಣದಿಂದ ನಮ್ಮ ಬ್ಯಾಂಕ್‌ಗಳ ಷೇರ್‌ ಕ್ಯಾಪಿಟಲ್‌ ಕುಸಿದಿದೆ. ಇದು ದೊಡ್ಡ ಏಟು.   ಇದನ್ನು ಸುದಾರಿಸುವ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಿರತೆ ಕಂಡುಕೊಳ್ಳುವ ಕಾರಣದಿಂದ ವಿಲೀನ ಅನಿವಾರ್ಯವೂ ಆಗಿದೆ.  
 
– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next