ನೀರ್ಚಾಲು: ಅಚ್ಚಗನ್ನಡ ಪ್ರದೇಶ ಗಡಿನಾಡ ಕನ್ನಡಿಗರ ಹಿತರಕ್ಷಣೆ ಕನ್ನಡ ಸಾಹಿತ್ಯ ಪರಿಷತ್‌ನ ಜವಾಬ್ದಾರಿ ಎಂದು ಸಾಹಿತಿ ಬಿ.ಟಿ. ಲಲಿತಾ ನಾಯಕ್ ಅವರು ಹೇಳಿದರು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆ ಯ ಪರಿಸರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಆಯೋಜಿಸಿದ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸುದೀರ್ಘ ಇತಿಹಾಸವುಳ್ಳ ಕನ್ನಡ ಸಾಹಿತ್ಯ ಪರಿಷತ್‌ನ ನಿರಂತರ ಹೋರಾಟದ ಫಲವಾಗಿ ಒಂದರಿಂದ ಹತ್ತನೇ ತರಗತಿಯ ವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಗಡಿನಾಡಿನ ಕನ್ನಡದ ಮಕ್ಕಳಿಗೆ ಕರ್ನಾಟಕದಲ್ಲಿ 5 ಶೇ. ಉದ್ಯೋಗ ಮೀಸಲಾತಿ ಪಡೆಯಲು ಸಾಧ್ಯವಾಯಿತು. ಸಾಹಿತ್ಯ ಪರಿಷತ್ ಸಾಹಿತ್ಯಕ್ಕೆ ಮಾತ್ರ ಮನ್ನಣೆ ನೀಡಿಲ್ಲ. ಕೃಷಿ ಮೇಳ, ರೈತ ಮೇಳ, ಸಾಧಕರೊಡನೆ ಸಂವಾದ, ಮಹಿಳೆಯರನ್ನು ಸಬರನ್ನಾಗಿಸುವ ಮೊದಲಾದ ಸಕ್ರಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಬಂದಿದೆ ಎಂದ ಅವರು ಗಡಿನಾಡಿನ ಘಟಕ ಅರ್ಜಿ ಸಲ್ಲಿಸಿದರೆ ಕೇಂದ್ರ ಸಮಿತಿಯು ಕಾಸರಗೋಡು ಸಾಹಿತ್ಯ ಪರಿಷತ್‌ಗೆ ಸಾವಿರ ಕನ್ನಡ ಪುಸ್ತಕ ನೀಡಲಿದೆ ಎಂದರು.
ಶಿಕ್ಷಣದಲ್ಲಿ ಮಾನವೀಯತೆ ಇರಬೇಕು. ಸರ್ವಶಾಂತಿಯ ಭಾವನೆ, ಪ್ರತಿಭಾ ಸಮಾನತೆ ಇರಬೇಕು ಎಂದು ಹೇಳಿದ ಅವರು ಜಾನಪದವು ನಾಗರಿಕತೆಬೇರು.
ಜತೆಗೆ ಕನ್ನಡ ಸಂಸ್ಕೃತಿಬೆಳೆಸ ಬೇಕು. ಮೂಡನಂಬಿಕೆ° ಬಿಟ್ಟು ಚಿಂತನಶೀಲ ರಾಗಬೇಕಾದ ಅಗತ್ಯ ಇಂದಿದೆ. ಚಿಂತನೆ ಮತ್ತು ಪ್ರೀತಿ ಮುಖ್ಯ. ಅಕ್ಷರ ಕಲಿಸುವುದು ಮಾತ್ರ ಶಿಕ್ಷಣವಲ್ಲ. ಬದುಕುವ ಕಲಿಸುವ ಶಿಕ್ಷಣ ಬೇಕು ಎಂದರು.
– ಪ್ರದೀಪ್ ಬೇಕಲ್/ವಿದ್ಯಾಗಣೇಶ್ ಅಣಂಗೂರು