Advertisement

ಮಹಾದಾಯಿ,ಮೇಕೆದಾಟು ಬಗ್ಗೆ ವಿಪಕ್ಷದಲ್ಲಿದ್ದಾಗ ಮಾತನಾಡಿದ ನಾಯಕರು ಈಗ ಮಾತಾಡುತ್ತಾರೋ.:ಡಿಕೆಶಿ

03:53 PM Sep 12, 2021 | Team Udayavani |

ಹುಬ್ಬಳ್ಳಿ: ಮಹದಾಯಿ,ಮೇಕೆದಾಟು ಬಗ್ಗೆ ವಿಪಕ್ಷದಲ್ಲಿದ್ದಾಗ ಬಿಜೆಪಿ ನಾಯಕರಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಮಾತನಾಡುತ್ತಿದ್ದರು, ಇದೀಗ ಅವರೇ ಅಧಿಕಾರದಲ್ಲಿದ್ದು, ಏನು ಮಾಡುತ್ತಾರೋ ನೋಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಗೆ ಹಲವಾರು ಜನ ಬಲಿಯಾಗಿದ್ದಾರೆ. ಬಹಳಷ್ಟು ಜನ ಆಸ್ಪತ್ರೆಯಲ್ಲಿ ಹಣ ಕಟ್ಟಲಾಗದೆ ಕಂಗಾಲಾಗಿದ್ದಾರೆ. ಅವರಿಗೆಲ್ಲ ಮೊದಲು ಸರ್ಕಾರ ಪರಿಹಾರ ನೀಡಬೇಕು. ಈ ಕುರಿತು ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದರು.

ಇದನ್ನೂ ಓದಿ : ಬಂಬಲ್ ಡೇಟಿಂಗ್ ಆ್ಯಪ್ ಬಗ್ಗೆ ನಿಮಗೆ ತಿಳಿದಿದೆಯೇ..? ಇಲ್ಲಿದೆ ಮಾಹಿತಿ

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಅದೆಲ್ಲ ಇಲ್ಲ. ನಾವೆಲ್ಲ ಒಂದು. ಅದು ಬಿಜೆಪಿಗೆ ಮಾತ್ರ ಅನ್ವಯಿಸುತ್ತದೆ. ಕಲಬುರಗಿಯಲ್ಲಿ ಜನ ಆಯ್ಕೆ ಮಾಡುವವರೇ ಮೇಯರ್ ಆಯ್ಕೆ ಆಗುತ್ತಾರೆ. ನಮ್ಮ ನಾಯಕರ ತಪ್ಪಿನಿಂದಲೇ ಕೆಲವು ವಾರ್ಡ್ ಗಳಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಆಗಲಿಲ್ಲ ಎಂದರು.

ಹು-ಧಾ ಮಹಾನಗರ ಪಾಲಿಕೆಯ ಚುನಾವಣೆ ಹಿನ್ನೆಲೆ ಅವಳಿ ನಗರದ ಜನರ ತೀರ್ಪಿಗೆ ನಾವು ಸಾಷ್ಟಾಂಗ ನಮಸ್ಕಾರ ಸಲ್ಲಿಸುತ್ತೇವೆ. ಈ ಚುನಾವಣೆ ನಾವು ಸೋತಿಲ್ಲ. ಕಡಿಮೆ ಸ್ಥಾನ ಬಂದಿರಬಹುದು. ಪಕ್ಷದ ನಾಯಕರ ಕೆಲವು ನಮ್ಮ ತಪ್ಪಿನಿಂದಲೂ ಆಗಿದೆ. ಎಲ್ಲ ಪ್ರಭುದ್ಧ ಮತದಾರರಿಗೆ ಸಾಷ್ಟಾಂಗ ನಮಸ್ಕಾರ. ಅವರು ನಮ್ಮ ಮೇಲೆವಿಟ್ಟ ವಿಶ್ವಾಸ ಉಳಿಸಿಕೊಂಡು ಹೋಗುತ್ತೇವೆ ಎಂದರು.

Advertisement

5 ಜನ ಬಂಡಾಯ ಅಭ್ಯರ್ಥಿಗಳು ಮುಖಂಡರ ತಪ್ಪಿನಿಂದಾಗಿ ಗೆದ್ದಿದ್ದಾರೆ. ಇಲ್ಲಿ ಸಿಎಂ, ಮಾಜಿ ಸಿಎಂ, ಕೇಂದ್ರ ಸಚಿವರು ಸೇರಿ ಎಲ್ಲರೂ ಇಲ್ಲಿಯೇ ಮತದಾರರು. ಹೀಗಾಗಿ ಅವರಿಗೆ ಹೇಗೆ ಬೇಕೋ ಹಾಗೆ ಅಧಿಕಾರ ದುರಪಯೋಗ ಮಾಡಿಕೊಂಡು ಚುನಾವಣಾ ನಡೆಸಿದರು ಬಹುಮತ ಪಡೆಯಲು ಆಗಲಿಲ್ಲ. ನಮಗೆ ಹೆಚ್ಚಿನ ಸಂಖ್ಯೆ ಇಲ್ಲದಿದ್ದರೂ ಸಹ ಮತದಾರರು ಉತ್ತಮ ಫಲಿತಾಂಶ ಕೊಟ್ಟಿದ್ದಾರೆ. ನಮಗೆ ಸಿಕ್ಕ ಅವಕಾಶ ಸದುಪಯೋಗ ಪಡೆದುಕೊಳ್ಳುತ್ತೇವೆ. ಕೆಲವು ಬಂಡಾಯ ಅಭ್ಯರ್ಥಿಗಳು ಸಹ ಮತ್ತೆ ಕಾಂಗ್ರೆಸ್ ಸಿದ್ದಾಂತಕ್ಕೆ ಬರುತ್ತೇವೆಂದು ಹೇಳಿದ್ದಾರೆ. ಭೇಟಿ ಕೂಡ ಮಾಡಿದ್ದಾರೆ ಎಂದರು.

ಕಲಬುರಗಿ, ಹು-ಧಾ ದಲ್ಲಿ ಸಮಾಧಾನ ಫಲಿತಾಂಶ ಸಿಕ್ಕಿದೆ. ಬೆಳಗಾವಿಯಲ್ಲಿ ಚಿಹ್ನೆ ಮೇಲೆ ಚುನಾವಣೆ ಮಾಡಿದ್ದೇವೆ. ಅಲ್ಲಿ 20 ಸ್ಥಾನ ನಿರೀಕ್ಷೆ ಮಾಡಿದ್ದೇವು. ಆದರೆ 10 ಬಂದಿವೆ. ಈ ಫಲಿತಾಂಶ ಬಿಜೆಪಿ ಸರ್ಕಾರ, ಆಡಳಿತ ಒಪ್ಪಿ ಮತದಾನ ಆಯ್ತಾ ಎಂದು ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ ಹಾಗೂ ಬಿಜೆಪಿ ನಾಯಕರೆ ಹೇಳಬೇಕು. ಅವರಿಗೆ ಈ ಚುನಾವಣೆ ಫಲಿತಾಂಶ ಖುಷಿ ತಂದಿದೇಯಾ ಎಂದು ಹೇಳಬೇಕು ಎಂದರು.

ಇದನ್ನೂ ಓದಿ : ಮಂಗಳೂರು : ಹಾಡಹಗಲೇ ನಗರದ ಮುಖ್ಯ ರಸ್ತೆಯಲ್ಲಿ ಮಹಿಳೆಯ ಬ್ಯಾಗ್ ಕಳವಿಗೆ ಯತ್ನ

Advertisement

Udayavani is now on Telegram. Click here to join our channel and stay updated with the latest news.

Next