Advertisement

ಕೋವಿಡ್ 19 ಸೋಂಕು ಕೊಲ್ಲದಿದ್ರೂ “ತಾಪಮಾನ’ಕೊಲ್ಲುತ್ತೆ: ವಿಶ್ವಸಂಸ್ಥೆ ಸದಸ್ಯ ರಾಷ್ಟ್ರ

11:57 AM Sep 28, 2020 | Nagendra Trasi |

ಜೊಹಾನ್ಸ್‌ಬರ್ಗ್‌: ಇಡೀ ಜಗತ್ತನ್ನು ಅಲ್ಲೋಲ ಕಲ್ಲೋಲಗೊಳಿಸಿರುವ ಕೋವಿಡ್ ನಮ್ಮನ್ನು ಕೊಲ್ಲದಿದ್ದರೂ , ಜಾಗತಿಕ ತಾಪಮಾನದ ದುಷ್ಪರಿಣಾಮಗಳು ನಮ್ಮನ್ನು ಖಂಡಿತವಾಗಿಯೂ ಕೊಲ್ಲುತ್ತವೆ ‌ ಎಂದು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ತೀವ್ರಕಳವಳ ವ್ಯಕ್ತಪಡಿಸಿವೆ.

Advertisement

ವಿಶ್ವಸಂಸ್ಥೆಯ ಐತಿಹಾಸಿಕ 75ನೇ ಮಹಾ ಸಮ್ಮೇಳನದಲ್ಲಿ ಮಾತನಾಡಿದ ಫಿಜಿ ಪ್ರಧಾನಿ ಫ್ರಾಂಕ್‌ ಬೈನಿಮರಮ, “ಪಶ್ಚಿಮ ಅಂಟಾರ್ಟಿಕದಲ್ಲಿ ಸಮುದ್ರ ಮಟ್ಟ ಈಗಾಗಲೇ 16 ಅಡಿ ಹೆಚ್ಚಾಗಿದೆ. ಸೈಬೀರಿಯಾಸೇರಿದಂತೆಕೆಲವು ರಾಷ್ಟ್ರಗಳ ಸಣ್ಣ ಸಣ್ಣ ದ್ವೀಪಗಳು ಮುಳುಗಡೆಯಾಗಿವೆ. ಜಗತ್ತಿನ ಲಕ್ಷ್ಯ ಇಂದು ಕೋವಿಡ್ ಕಡೆಗೆ ತಿರುಗಿದ್ದು, ಜಾಗತಿಕ ತಾಪಮಾನ ಸಮಸ್ಯೆ ಹಾಗೆಯೇ ಮುಂದುವರಿದಿದೆ.

ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ 75 ವರ್ಷಗಳಲ್ಲಿ ವಿಶ್ವಸಂಸ್ಥೆಯಲ್ಲಿ ಈಗಿರುವ ಅನೇಕ ರಾಷ್ಟ್ರಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಲಿವೆ” ಎಂದಿದ್ದಾರೆ. ಇನ್ನೂ ಅನೇಕ ವಿಶ್ವನಾಯಕರು ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮೋದಿ ದಿಟ್ಟತನಕ್ಕೆ ಮೆಚ್ಚುಗೆ
ಕೋವಿಡ್ ವಿಚಾರದಲ್ಲಾಗಲೀ, ಭಯೋತ್ಪಾದನೆ ನಿಗ್ರಹದಲ್ಲಾಗಲೀ ವಿಶ್ವಸಂಸ್ಥೆ ಏನು ಮಾಡಿದೆ ಎಂದು ನೇರವಾಗಿ ಪ್ರಶ್ನೆ ಮಾಡಿರುವ ಪ್ರಧಾನಿ ಮೋದಿಯವರ
ನಡೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್‌ ಅಧೊನೊಮ್‌ ಘೆಬ್ರಯೆಸಸ್‌ ಮೆಚ್ಚಿಕೊಂಡಿದ್ದಾರೆ. ಶನಿವಾರ ಮಾತನಾಡಿದ್ದ ಮೋದಿ, “”ಲಸಿಕೆ ತಯಾರಿಕೆಯಲ್ಲಿ ಭಾರತ ಮುಂದಿದೆ.

ಕೋವಿಡ್ ನಿಂದ ತತ್ತರಿಸಿ‌ರುವ 150 ರಾಷ್ಟ್ರಗಳಿಗೆ ಕೋವಿಡ್ ಲಸಿಕೆ ನೀಡುವಲ್ಲಿ ಭಾರತ ಶಕ್ತವಾಗಿದೆ. ಆದರೆ, ಈ ಸಹಾಯವು ಕೇವಲ ಜಾಗತಿಕ ಮನುಕುಲದ ನೆರವಾಗಿಯೇ ವಿನಾ ಯಾವುದೇ ದೇಶದ ವಿರುದ್ಧ ಸ್ಪರ್ಧೆಗಾಗಿ ಅಲ್ಲ” ಎಂದಿದ್ದರು. ಈಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಘೆಬ್ರೆಯೇಸಸ್‌, “ಕೋವಿಡ್ ಅನ್ನು ಒಗ್ಗಟ್ಟಿ ‌ನಿಂದ ಎದುರಿಸಲು ಸ್ಫೂರ್ತಿಯಾಗುವಂಥ ಸಂದೇಶ ನೀಡಿದ್ದಕ್ಕೆ ಮೋದಿಯವರಿಗೆ ಧನ್ಯವಾದ’ ಎಂದು ಹೇಳಿದ್ದಾರೆ.

Advertisement

ಜಾಗತಿಕ ಸಮುದಾಯಕ್ಕೆ ಮೋದಿಯವರು ನೀಡಿರುವ ಭರವಸೆ ಭಾರತೀಯರಿಗೆ ಹೆಮ್ಮೆ ತರಿಸಿದೆ. ಲಸಿಕೆ ಬಗ್ಗೆ ಅವರು ಹೊಂದಿರುವ ಕಾಳಜಿಯೇ ಭಾರತೀಯರನ್ನು ಕೋವಿಡ್ ನಿಂದ ನಿಗ್ರಹ ಪಡೆಯಲು ಸಹಾಯಕವಾಗಲಿದೆ.

● ಅಡರ್‌ ಪೂನಾವಾಲಾ, ಸೇರಮ್‌ ಇನ್‌ಸ್ಟಿಟ್ಯೂಟ್‌ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next